ಕೂಲಿ ಕೆಲಸ ಜತೆಗೆ ಪಾರ್ಟ್ ಟೈಂ ಜಾಬ್ ಕಳ್ಳತನ, ಶೋಕಿಗಾಗಿ ಕದ್ದ ಬೈಕ್ ಗಿರವಿಯಿಟ್ಟು ಮೋಜು!

By Suvarna NewsFirst Published Mar 20, 2023, 8:04 PM IST
Highlights

ಶೋಕಿಗಾಗಿ ಬೈಕ್ ಕದ್ದ ಕಳ್ಳರನ್ನು ಶಹಾಪುರ ಪೋಲಿಸರು ಬಂಧಿಸಿದ್ದಾರೆ. ಕೂಲಿ ಕೆಲಸದ ಜೊತೆ ಪಾರ್ಟ್ ಟೈಂ ಬೈಕ್ ಕಳ್ಳತನ ಮಾಡ್ತಿದ್ದ ಈ ಯುವಕರಿಂದ 14 ಬೈಕ್ ವಶಪಡಿಸಿಕೊಳ್ಳಲಾಗಿದೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮಾ.20): ಈ ಯುವಕರು ತಮ್ಮ ಉಪಜೀವನಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಕೆಲಸ ಮಾಡೊಕೊಂಡು ಬದುಕುವಂತವರು. ಆದ್ರೆ ಇವರಿಗೆ ಒಂದು ಕೆಟ್ಟ ಚಟವಿತ್ತು ಅದೇನಂದ್ರೆ ಏನಾದ್ರು ಮಾಡು ಸಖತ್ ಶೋಕಿವಾಲ ಆಗಿರಬೇಕು ಅಂತ. ಈಗ ಅದೇ ಶೋಕಿಗಾಗಿ ಬೈಕ್ ಕಳ್ಳತನದ ಹಾದಿ ಹಿಡಿದಿದ್ದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಬಂಧಿತ ಆರೋಪಿಗಳಾದ ಪ್ರಶಾಂತ್, ಪ್ರಕಾಶರೆಡ್ಡಿ ಹಾಗೂ ಸಲೀಂ ಈಗ ಪೋಲಿಸರ ಅತಿಥಿಯಾಗಿದ್ದಾರೆ.

ಶೋಕಿಗಾಗಿ ಬೈಕ್ ಗಳನ್ನು ಕದ್ದ ಖದೀಮರು!
ಇತ್ತೀಚಿಗೆ ಯಾದಗಿರಿ ಜಿಲ್ಲೆಯಲ್ಲಿ ಹಲವು ಕಡೆ ಕಳ್ಳತನದ ಪ್ರಕರಣಗಳು ಹೆಚ್ಚಾಗ್ತಿವೆ. ಯಾದಗಿರಿ‌ ನಗರದಲ್ಲಿ ಮನೆಯೊಂದಕ್ಕೆ ನುಗ್ಗಿ ಪಿಸ್ತೂಲ್, ಚಾಕು ಹಾಗೂ ಖಾರದ ಪುಡಿ ಸೇರಿದಂತೆ ಹಲವು ಮಾರಾಕಾಸ್ತ್ರಗಳಿಂದ ಹೆದರಿಸಿ ಬಂಗಾರ ಸೇರಿದಂತೆ ದುಡ್ಡನ್ನು ಕಳ್ಳತನ ಮಾಡಿದ್ದರು. ಈ ಪ್ರಕರಣವನ್ನು ಯಾದಗಿರಿ ನಗರ ಪೋಲಿಸರು ಚಾಕಚಕ್ಯತೆಯಿಂದ ಭೇಧಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು. ಈಗ ಮತ್ತೆ ಅಂತಹ ಮತ್ತೊಂದು ಪ್ರಕರಣವಾದ ಬೈಕ್ ಕಳ್ಳತನವನ್ನು ಶಹಾಪುರ ಪೋಲಿಸರು ಆರೋಪಿಗಳನ್ನು ಲಾಕ್ ಮಾಡಿದ್ದಾರೆ.

ಕಳೆದ 6-8 ತಿಂಗಳಿನಿಂದ ಬೈಕ್ ಕಳ್ಳತನ ಪ್ರಕರಣಗಳು ಹಚ್ಚಾಗ್ತಿವೆ. ಶಹಾಪುರ ಕೇಂದ್ರ ಬಸ್ ನಿಲ್ದಾಣ, ರಸ್ತೆಯ ಅಕ್ಕ-ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನ ಈ ಕಿರಾತಕ ಕಳ್ಳರ ಗ್ಯಾಂಗ್ ಎಗರಿಸಿಕೊಂಡು ಪರಾರಿಯಾಗುತ್ತಿತ್ತು. ಆದ್ರೆ ಈ ಚಾಲಾಕಿ ಮೂವರು ಬೈಕ್ ಕಳ್ಳರ ಗ್ಯಾಂಗನ್ನು ಶಹಾಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಶಹಾಪುರ ನಗರದ ಅಗ್ನಿ ಶಾಮಕ ಕಚೇರಿ ಬಳಿ ನೈಟ್ ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಅನುಮಾನ ಬಂದು ಬೈಕ್ ಮೇಲೆ ಓಡಾಡುತ್ತಿದ್ದ ಮೂವರು ಯುವಕರನ್ನ ಹಿಡಿದಿದ್ದಾರೆ.  ಬಂಧಿಸಿ ವಿಚಾರಣೆ ನಡೆಸಿದಾಗ ಸ್ವತಃ ಪೋಲಿಸರಿಗೆ ಶಾಕ್ ಎದುರಾಗಿದೆ. ಯಾಕೆಂದ್ರೆ ಮೂವರು ಯುವಕರಿಂದ ಮೂರು ಬೈಕ್ ಗಳನ್ನ ಸೀಜ್ ಮಾಡಿ ವಿಚಾರಣೆ ನಡೆಸಿದಾಗ ಹಲವು ಬೈಕ್ ಕಳ್ಳತನ ಪ್ರಕರಣಕ್ಕೂ ಇವರಿಗೆ ಲಿಂಕ್ ಸಿಕ್ಕಿದೆ.  

ಈ ಮೂವರು ಕಳ್ಳರು ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದವರು. ಪ್ರಶಾಂತ್, ಪ್ರಕಾಶರೆಡ್ಡಿ ಹಾಗೂ ಸಲೀಂ ಎಂಬ ಮೂವರು ಕಳೆದ 6-8 ತಿಂಗಳುಗಳಿಂದ ಬೈಕ್ ಗಳನ್ನ ಖದಿಯುವ ಕೆಲಸ ಮಾಡ್ತಾಯಿದ್ದಾರೆ. ಈ ಮೂವರಲ್ಲಿ ಪ್ರಶಾಂತ್ ಕ್ಷೌರಿಕ್ ಕೆಲಸ ಮಾಡ್ತಾಯಿದ್ರು ಪ್ರಕಾಶರೆಡ್ಡಿ ಕೂಲಿ ಕೆಲಸ ಮಾಡ್ತಾಯಿದ್ದ ಇನ್ನು ಸಲೀಂ ಎಂಬಾತ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಆದ್ರೆ ಮೂವರು ಶೋಕಿ ಮಾಡಲು ಹಣ ಕಡಿಮೆ ಬಿಳುತ್ತಿದ್ದ ಹಾಗೆ ಕಳ್ಳತನದ ರೂಟ್ ಹಿಡಿದಿದ್ದಾರೆ.

ಕದ್ದ ಬೈಕ್ ಗಿರವಿಯಿಟ್ಟು ಮೋಜು ಮಸ್ತಿ ಮಾಡ್ತಿದ್ದ ಯುವಕರು..!
ಪ್ರಶಾಂತ್, ಪ್ರಕಾಶರೆಡ್ಡಿ ಹಾಗೂ ಸಲೀಂ ಎಂಬ ಮೂವರು ಬೈಜ್ ಕಳ್ಳರ ಕಳ್ಳತನ ಕೇಸ್ ಬೆನ್ನಟ್ಟಿ ಹೊರಟಾಗ ಹಲವು ವಿಚಾರಗಳು ಹೊರ ಬಂದಿವೆ. ಯಾಕಂದ್ರೆ ಈ ಮೂವರು ಕಳ್ಳರದ್ದು ಒಂದೊಂದು ಕೆಲಸ ಮಾಡ್ತಾ ಇದ್ರು. ಡಿಪರೆಂಟ್ ಡ್ಯೂಟಿ ಇದ್ರು, ಮೂವರದ್ದು ರಾತ್ರಿ ಮಾತ್ರ ಒಂದೇ ಕಡೆ ಪಾರ್ಟಿ ಆಗ್ತಾ ಇತ್ತು. ಕಳ್ಳತನಕ್ಕೆ ಕಾರಣ ಕೇಳಿದ್ರೆ ಶಾಕ್ ಆಗೋದು ಪೀಕ್ಸ್. ಈ ಮೂವರು ಕಳೆದ 6-8 ತಿಂಗಳಿನಿಂದ ಶೋಕಿಗಾಗಿ ಕಳ್ಳತನದ ರೂಟ್ ಹಿಡಿದಿದ್ದು ಪೋಲಿಸ್ ವಿಚಾರಣೆಯಲ್ಲಿ ಬಯಲಿಗೆ ಬಂದಿದೆ‌.

ಕೂಲಿ ಕೆಲಸ ಮಾಡಿಕೊಂಡಿದ್ದ ಮೂವರು ಹುಡುಗಿಯರನ್ನ ಮೆಂಟೆನ್ ಮಾಡಲು ಹಾಗೂ ಮದ್ಯ ಕುಡಿಯಲು ಹಣ ಕಡಿಮೆ ಬಿಳ್ತಾಯಿತ್ತು. ಕೂಲಿ ಕೆಲಸದಿಂದ ಬಂದ ಹಣದಿಂದ ಶೋಕಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಮೂವರು ಕಳೆದ 6-8 ತಿಂಗಳಿನಿಂದ ಶಹಾಪುರ, ಕೆಂಭಾವಿ, ನಾಯ್ಕಲ್,  ಚಾಮನಾಳ್, ಕೆಂಭಾವಿ ಹಾಗೂ ಕಲಬುರಗಿಯ ವಾಡಿ ಸೇರಿದಂತೆ ನಾನಾ ಕಡೆ ಹಲವು ಬೈಕ್ ಗಳನ್ನ ಕದ್ದು ಹಲವರ ಕಣ್ಣಿಗೆ ಮಣ್ಣು ಎರಚಿದ್ದಾರೆ. ಇವ್ರು ಕದ್ದ ಬೈಕ್ ಗಳನ್ನ ಹಣಕ್ಕಾಗಿ ಮಾರಾಟ ಮಾಡದೆ ಬೇರೆಯವರ ಬಳಿ ಗಿರವಿ ಇಡುತಿದ್ದರು. ತಮಗೆ ದುಡ್ಡು ಬೇಕಾದಾಗ ಆಗ ಹಣಕ್ಕಾಗಿ ಬೈಕ್ ಗಳನ್ನ ಗಿರವಿ ಇಟ್ಟು ಸ್ವಲ್ಪ ದಿನಗಳಲ್ಲಿ ಹಣ ವಾಪಸ್ ನೀಡಿ ಬೈಕ್ ಗಳನ್ನ ಬಿಡಿಸಿಕೊಂಡು ಹೋಗುತ್ತೆವೆ ಅಂತ ಹೇಳಿ ಹಣ ಪಡೆದುಕೊಂಡು ಹೋಗುತಿದ್ದರು.

ಆದ್ರೆ ಗಿರವಿ ಇಟ್ಟಿದ್ದ ಬೈಕ್ ಗಳನ್ನ ಇಲ್ಲಿ ವರೆಗೆ ಹಣ ವಾಪಸ್ ಕೊಟ್ಟು ಬಿಡಿಸಿಕೊಂಡಿಲ್ಲ. ಬದಲಿಗೆ ಮತ್ತೆ ಬೇರೆ ಬೇರೆ ಕಡೆ ಬೈಕ್ ಗಳನ್ನ ಕದ್ದು ಮತ್ತೆ ಹಣದ ಕೊರತೆ ಇದ್ದಾಗ ಬೈಕ್ ಗಳನ್ನ ಗಿರವಿ ಇಡುವ ಕೆಲಸ ಮಾಡ್ತಾಯಿದ್ರು. ಗಿರವಿ ಇಟ್ಟು ಬಂದ ಹಣದಿಂದ ಹುಡುಗಿಯರನ್ನ ಮೆಂಟೆನ್ ಮಾಡೋದು ಜೊತೆಗೆ ಕುಡಿಯೋದು, ಸಿಗರೇಟ್ ಸೇದೋದು ಮಾಡ್ತಾ ಇದ್ರಂತೆ.

\ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ:

8 ಲಕ್ಷ ರೂ. 14 ಬೈಕ್ ವಶಪಡಿಸಿಕೊಂಡ ಶಹಾಪುರ ಪೋಲಿಸರು
ಈ ಮೂವರು ಕಳ್ಳರು ಬಹಳ ಬುದ್ಧಿವಂತಿಕೆಯಿಂದ ಬೈಕ್ ಕಳ್ಳತನ ಯಾರಿಗೂ ಗೊತ್ತಾಗದಂತೆ ಮೆಂಟೆನ್ ಮಾಡಿದ್ದರು. ಜೊತೆಗೆ ಬೈಕ್ ಗಳನ್ನು ಕಳ್ಳತನ ಮಾಡಿದ್ರು ಅದರ ರೂಪವೇ ಚೆಂಜ್ ಮಾಡ್ತುದ್ರು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಬೈಕ್ ಗಳ ನಂಬರ್ ಪ್ಲೇಟ್ ಗಳನ್ನ ಬದಲಿಸಿಕೊಳ್ಳುತ್ತಿದ್ದರು. ಇವೇ ಕಳ್ಳತದ ಬೈಕ್ ಗಳನ್ನು ಇಡೀ ಶಹಾಪುರ ನಗರದಾದ್ಯಂತ ಓಡಾಟ ಮಾಡಿದ್ದರು ಗೊತ್ತಾಗುತಿರಲಿಲ್ಲ. ನೈಟ್ ರೌಂಡ್ ಪೋಲಿಸರ ಅನುಮಾನದಿಂದ ಹಿಡಿದ ಈ ಕಿರಾತಕರ ಕಳ್ಳರೆಂದು ದೃಢಪಟ್ಟಿದೆ.

ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ

ಈಗ ಈ ಗ್ಯಾಂಗ್ ಕೊನೆಗೆ ಶಹಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ 8 ಲಕ್ಷ ರೂ. ಮೌಲ್ಯದ 14 ಬೈಕ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ ಈ ಮೂವರು ಯುವಕರು ದುಡಿದು ತಿನ್ನುವ  ಕೆಲಸ ಮಾಡೋದು ಬಿಟ್ಟು ಧೀಮಾಕು, ಶೋಕಿಗಾಗಿ ಅಡ್ಡದಾರಿ ಹಿಡಿದು ಈಗ ಜೈಲೂಟ ತಿನ್ನುವಂತಾಗಿದೆ.

click me!