ಆದಾಯಕ್ಕಿಂತ ಶೇ.216ರಷ್ಟು ಅಧಿಕ ಆಸ್ತಿ ಪತ್ತೆ: ರಾಮನಗರ ಉಪವಿಭಾಗಾಧಿಕಾರಿ ವಜಾಗೊಳಿಸಿದ ಸರ್ಕಾರ

By Sathish Kumar KH  |  First Published Mar 20, 2023, 6:23 PM IST

ನಿಗದಿತ ಆದಾಯಕ್ಕಿಂತ ಶೇ.216 ರಷ್ಟು ಅಧಿಕ ಆಸ್ತಿ ಹೊಂದಿರುವ ಆರೋಪದಡಿ ರಾಮನಗರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


ರಾಮನಗರ ‌(ಮಾ.20): ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಯಿಂದ ಪತ್ತೆಯಾದ ನಿಗದಿತ ಆದಾಯಕ್ಕಿಂತ ಶೇ.216 ರಷ್ಟು ಅಧಿಕವಾಗಿ ಆಸ್ತಿಯನ್ನು ಹೊಂದಿರುವ ರಾಮನಗರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಅವರನ್ನು ಸರ್ಕಾರ ಸೇವೆಯಿಂದ ಅಮಾನತು ಮಾಡಿ ಆದೇಶವನ್ನು ಹೊರಡಿಸಿದೆ.

2022 ರ ಮಾರ್ಚ್ 16 ರಂದು ಬೆಳ್ಳಂ ಬೆಳಗ್ಗೆ ರಾಮನಗರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಅವರ ಎಸಿ ಮಂಜುನಾಥ್ ಮನೆ, ಫಾರ್ಮ್ ಹೌಸ್, ಕಚೇರಿ ಮೇಲೆ ದಾಳಿ ನಡೆದಿತ್ತು. ನಂತರ, ರಾಮನಗರದಲ್ಲಿರುವ ಸರ್ಕಾರಿ ಕಚೇರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅವರಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸುಮಾರು 5.5 ಕೋಟಿ ರೂ. ಆಸ್ತಿ ಪತ್ತೆಯಾಗಿತ್ತು. ದಾಳಿ ಮುಂದುವರೆಸಿದ್ದ ಎಸಿಬಿ ಅಧಿಕಾರಿಗಳು ರಾಮನಗರದ ಮಿನಿ ವಿಧಾನಸೌಧದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ಪರಿಶೀಲನೆಗೆಂದು ವಶಕ್ಕೆ ತೆಗೆದುಕೊಂಡಿದ್ದರು.

Tap to resize

Latest Videos

ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆಗೆ ಹೋಗಿ ಹಣ ಕಳ್ಕೊಂಡ

ಅಮಾನತು ಆದೇಶ ಹೊರಡಿಸಿದ ಸರ್ಕಾರ: ಈ ಬಗ್ಗೆ ನಿರಂತರವಾಗಿ ವಿಚಾರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳೇ ಇಲ್ಲದ ಹಾಗೂ ನಿಗದಿತ ಆದಾಯಕ್ಕಿಂತ ಶೇ.216 ರಷ್ಟು ಅಧಿಕ ಆದಾಯವನ್ನು ಹೊಂದಿರುವುದು ಪತ್ತೆಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್‌ ಅವರನ್ನು ಸರ್ಕಾರವೇ ಇಮದು ಅಮಾನತು ಮಾಡಿ ಆದೇಶ ಹೊರಡಿದಿದೆ. ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಲ್ಲಿ ನಿರೀಕ್ಷಿಸಲಾಗದಷ್ಟು ಆಸ್ತಿ: ಉಪ ವಿಭಾಗಾಧಿಕಾರಿ ಮಂಜುನಾಥ್‌ ಅವರ ಮನೆ ಮೇಲೆ ದಾಳಿ ನಡೆದಿದ್ದ ವೇಳೆ ಬೆಂಗಳೂರು ನಗರದ ಜಿಕೆವಿಕೆ ಬಳಿ 27 ಕುಂಟೆ ಭೂಮಿಯಲ್ಲಿ 7 ಬ್ಯಾಡ್ಮಿಂಟನ್ ಕೋರ್ಟುಗಳು, ರಿಕ್ರಿಯೇಷನ್ ಕೇಂದ್ರವನ್ನು ನಿರ್ಮಿಸಿ ಮಾಸಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವುದು ಪತ್ತೆಯಾಗಿದೆ. ಇಲ್ಲಿ ಕೆಲವು ಷಾಪಿಂಗ್ ಕಟ್ಟಡಗಳು ಇವೆ, ಈ ಆಸ್ತಿಯ ಮೌಲ್ಯ ಸುಮಾರು 1.5 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಬೆಂಗಳೂರು ಸಹಕಾರ ನಗರದಲ್ಲಿ ಮನೆ ಇದ್ದು, ಇದರ ಬೆಲೆ 2 ಕೋಟಿ ರೂ ಎಂದು ಅಂದಾಜಿಸಲಾಗಿದೆ. 

ಕಾಂಗ್ರೆಸ್‌ ಗ್ಯಾರಂಟಿ- 4 'ಯುವನಿಧಿ' ಘೋಷಣೆ: ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಭತ್ಯೆ

100 ವರ್ಷ ದುಡಿದರೂ ಅರ್ಧದಷ್ಟು ಆಸ್ತಿ ಮಾಡಲಾಗಲ್ಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮದ ಬಳಿ ಪಾರ್ಮ್ ಹೌಸ್ ಪತ್ತೆಯಾಗಿದೆ. ಇಲ್ಲಿ ಮನೆ, ಕುರಿ, ಕೋಳಿ ಶೆಡ್ಗಳನ್ನು ನಿರ್ಮಿಸಲಾಗಿದೆ. ದಾಳಿಯ ವೇಳೆ ಅಧಿಕಾರಿಗಳಿಗೆ 710 ಗ್ರಾಂ ಚಿನ್ನಾಭರಣ, 3.5 ಕೆಜಿ ಬೆಳ್ಳಿ ಪದಾರ್ಥಗಳು, 1 ಇನ್ನೋವಾ ಕ್ರಿಸ್ಟಾ ಕಾರು, 1 ಪಾರ್ಚುನರ್ ಕಾರು ಪತ್ತೆಯಾಗಿತ್ತು. ಇವುಗಳ ಮಾರುಕಟ್ಟೆ ಮೌಲ್ಯ ಹಲವು ಕೋಟಿಗಳನ್ನು ದಾಟುತ್ತದೆ. ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್ ಅವರು ಸರ್ಕಾರಿ ಸೇವೆಯಲ್ಲಿ ನೂರು ವರ್ಷ ಸೇವೆ ಮಾಡಿದರೂ ಕಾನೂನು ಬದ್ಧವಾಗಿ ಇದರಲ್ಲಿ ಅರ್ಧ ಆಸ್ತಿ ಮಾಡಲು ಸಾಧ್ಯವಿಲ್ಲ. ಆದರೆ ಈ ಪ್ರಮಾಣದ ಆಸ್ತಿ ಯಾವ ಆದಾಯದಿಂದ ಮಾಡಿದ್ದಾರೆ ಎಂಬುದನ್ನು ಸಮರ್ಥನೆ ಮಾಡಿಕೊಳ್ಳಲಾಗದೇ ಅನಧಿಕೃತವಾಗಿ ಗಳಿಸಿದ ಬಗ್ಗೆ ವರದಿ ನೀಡಲಾಗಿತ್ತು.

click me!