ಹಾಸನದ ದಾಸರಕೊಪ್ಪದ ಮನೆಯಲ್ಲಿ ತಾಯಿ, ಎರಡು ಮಕ್ಕಳ ನಿಗೂಢವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು. ಅಂದು ನಡೆದಿದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ಹಾಸನ (ಜ.7): ಹಾಸನದ ದಾಸರಕೊಪ್ಪದ ಮನೆಯಲ್ಲಿ ತಾಯಿ, ಎರಡು ಮಕ್ಕಳ ನಿಗೂಢವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು. ಅಂದು ನಡೆದಿದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ನಿಂಗಪ್ಪ ಕಾಗವಾಡ ಕೊಲೆ ಮಾಡಿರುವ ಆರೋಪಿ. ಆರೋಪಿ ವಿಜಯಪುರ ಮೂಲದವನಾಗಿದ್ದು, ಆರೋಪಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಿವಮ್ಮ ಅವನಿಂದಲೇ ಕೊಲೆಯಾಗಿದ್ದಳು. ಆದರೆ ಮೊದಲಿಗೆ ಇದು ಆತ್ಮಹತ್ಯೆ ಎಂದು ನಂಬಲಾಗಿತ್ತು. ಪೊಲೀಸ್ ತನಿಖೆ ವೇಳೆ ಬಯಲಾಗಿದ್ದೇ ಬೇರೆ.
ಬೇಕರಿ ಕೆಲಸ ಮಾಡಿಕೊಂಡಿದ್ದ ಪತಿ:
ಬಿಜಾಪುರದಲ್ಲಿ ಬೇಕರಿ ಇಟ್ಟು ಸಂಸಾರ ಸಾಗಿಸುತ್ತಿದ್ದ ಶಿವಮ್ಮ ಪತಿ ತೀರ್ಥಪ್ರಸಾದ್. ಈ ವೇಳೆ ಶಿವಮ್ಮಗೆ ಪರಿಚಯ ಆದವನೇ ನಿಂಗಪ್ಪ ಕಾಗವಾಡ. ಕಾರು ಚಾಲಕನೆಂದು ಗಂಡನಿಗೆ ಪ್ರಿಯಕರನ ಪರಿಚಯ ಮಾಡಿಸಿದ್ದ ಶಿವಮ್ಮ. ಆ ಬಳಿಕ ಬೇಕರಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಪತಿ ತೀರ್ಥಪ್ರಸಾದ್. ಬಿಜಾಪುರದಿಂದ ತುಮಕೂರಿನ ಬೇಕರಿಗೆ ಕೆಲಕ್ಕೆ ಸೇರಿದ್ದ ತೀರ್ಥ. ಪತ್ನಿ ಮಕ್ಕಳು ಸಮೇತ ಹಾಸನ ದಾಸರಕೊಪ್ಪದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಕೆಲಸಕ್ಕೆ ತುಮಕೂರಿಗೆ ಹೋಗುತ್ತಿದ್ದ ಪತಿ ಬರುತ್ತಿದ್ದುದ್ದು ತಿಂಗಳಿಗೊಮ್ಮೆ. ಇತ್ತ ತಿಂಗಳಗಟ್ಟಲೇ ಮನೆಯಿಂದ ಪತಿ ದೂರವಿದ್ದರಿಂದ ಪ್ರಿಯಕರನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಶಿವಮ್ಮ.
ಹಾಸನ: ಹೃದಯ ವಿದ್ರಾವಕ ಘಟನೆ; ಮಕ್ಕಳಿಗೆ ವಿಷವುಣಿಸಿ ತಾಯಿನೂ ಆತ್ಮಹತ್ಯೆ!
ಪ್ರಿಯಕರನೊಂದಿಗೆ ಮನೆಯಲ್ಲಿ ವಾಸ:
ಪತಿ ತೀರ್ಥಪ್ರಸಾದ್ ಬರುವುದು ತಿಂಗಳಿಗೊಮ್ಮೆ ಹೀಗಾಗಿ ಶಿವಮ್ಮ ಜೊತೆ ಅಕ್ರಮ ಸಂಬಂಧ ಹೊಂದಿ ಆಕೆಯ ಜೊತೆಯಲ್ಲೆ ವಾಸವಿದ್ದ ಆರೋಪಿ ನಿಂಗಪ್ಪ ಕಾಗವಾಡ. ಇಬ್ಬರ ನಡುವೆ ಅದೇನಾಯ್ತೋ ಏನೋ ಕೊಲೆಗೆ ಸಂಚು ಮಾಡಿದ್ದ ನಿಂಗಪ್ಪ. ಜನೆವರಿಂದ ಒಂದರಂದು ರಾತ್ರಿ ಕತ್ತು ಹಿಸುಕಿ ಪ್ರಿಯತಮೆ ಶಿವಮ್ಮ, ಮಕ್ಕಳಾದ ಸಿಂಚನಾ,ಪವನ್ ಕೊಲೆಗೈದಿದ್ದ ಪಾಪಿ. ಕೊಂದ ಬಳಿಕ ಕೊಲೆಯ ಅನುಮಾನ ಬಾರದಿರಲೆಂದು ಸಿಲಿಂಡರ್ ಪೈಪ್ ತೆಗೆದಿದ್ದ ಕಿರಾತಕ. ಅನಿಲ ಸೋರಿಕೆ ಯಿಂದ ಸಾವನ್ನಪ್ಪಿರೋ ರೀತಿ ಬಿಂಬಿಸಲು ಪ್ಲಾನ್ ಮಾಡಿದ್ದ. ಕೊಲೆ ಬಳಿಕ ಆಕೆಯ ಕೊರಳಲ್ಲಿದ್ದ ತಾಳಿ ಸರ ಮೊಬೈಲ್‌ನೊಂದಿಗೆ ಪರಾರಿಯಾಗಿದ್ದ.
ಆದರೆ ಅದೇ ದಿನ ತುಮಕೂರಿನಿಂದ ಪತಿ ತೀರ್ಥ ಪ್ರಸಾದ್ ತುಮಕೂರಿನಿಂದ ಮನೆಗೆ ಬರುತ್ತಿರುವುದಾಗಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದ. ಮನೆಗೆ ಬಂದಾಗ ಬಾಗಿಲು ಒಳಗಿನಿಂದಲೇ ಲಾಕ್ ಆಗಿತ್ತು. ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿತ್ತು. ಅವತ್ತು ರಾತ್ರಿ ಪೂರ್ತಿ ಮನೆ ಮೇಲೆ ಮಲಗಿದ್ದ ಪತಿ. ಬೆಳಗಿನ ಜಾವ ಬಾಗಿಲು ಬಡಿದರೂ ಬಗಿಲು ತೆಗೆದಿರಲಿಲ್ಲ. ಹೀಗಾಗಿ ಮನೆ ಬಾಗಿಲು ಒಡೆದು ಒಳಗೆ ಬಂದಾಗ ಕೊಲೆ ನಡೆದ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೆನ್ಷನ್ ಮೊಹಲ್ಲಾ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಬೆಂಗಳೂರಲ್ಲಿ ನ್ಯೂ ಇಯರ್ ರಾತ್ರಿ ಯುವಕನ ಭೀಕರ ಹತ್ಯೆ! ಕಂಠಪೂರ್ತಿ ಕುಡಿದ ಗೆಳೆಯರೇ ಹತ್ಯೆಗೈದು ಪರಾರಿ!
ಸದ್ಯ ಕೊಲೆ ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದ ಪೆನ್ಷನ್ ಮೊಹಲ್ಲಾ ಪೊಲೀಸರು. ವಿಚಾರಣೆ ಮುಂದವುರಿಸಿದ್ದಾರೆ.