ಬೆಂಗಳೂರಿನಲ್ಲಿ ಪ್ರೀತಿಸಿದ ಹುಡುಗಿ ಬ್ರೇಕಪ್ ಹೇಳಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಯುವತಿಯಿಂದ ದೂರವಾದ ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು (ಜ.03): ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆ ಮಾಡಿಕೊಳ್ಳಲು ಒಪ್ಪದೇ ಬ್ರೇಕಪ್ ಹೇಳಿದ್ದಳು. ಆದರೆ, ಹಲವು ವರ್ಷಗಳಿಂದ ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಯುವಕ ಸತೀಶ್ ಕುಮಾರ್(25) ಎಂದು ಗುರುತಿಸಲಾಗಿದ್ದು, ಈ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲೇಜು ಓದುತ್ತಿದ್ದ ವೇಳೆ ಯುವಕ ಸತೀಶ್ ಕುಮಾರ್, ಯುವತಿಯನ್ನು ಪ್ರೀತಿಸುತ್ತಿದ್ದನು. ಆಗ ಯುವತಿಯೂ ಈತನನ್ಉ ಪ್ರೀತಿ ಮಾಡುತ್ತಿದ್ದಳು. ಇದರಿಂದಾಗಿ ಕಾಲೇಜು ಕ್ಲಾಸಿಗೆ ಬಂಕ್ ಮಾಡಿ ಪಾರ್ಕ್, ಶಾಪಿಂಗ್ ಮಾಲ್, ಸಿನಿಮಾ, ದೇವಸ್ಥಾನ ಎಂದೆಲ್ಲಾ ವಿವಿಧೆಡೆ ಜಂಟಿಯಾಗಿ ಸುತ್ತಾಡಿದ್ದಾರೆ. ಇದಾದ ನಂತರ ಯುವಕ ತನ್ನ ಪ್ರೀತಿ ಉಳಿಸಿಕೊಳ್ಳಬೇಕು ಎಂದು ಓದು ಮುಗಿದ ಕೂಡಲೇ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ, ಇದೀಗ ಯುವಕ ಹುಡುಗಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ಕಾರಣ ಆತನಿಂದ ದೂರವಾಗಲು ಮುಂದಾಗಿದ್ದಾಳೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಮತ್ತೊಬ್ಬ ಗುತ್ತಿಗೆ ಇಂಜಿನಿಯರ್ ಆತ್ಮಹತ್ಯೆ!
ಇನ್ನು ಬರಬರುತ್ತಾ ಯುವಕನಿಂದ ಅಂತರ ಕಾಪಾಡಿಕೊಂಡಿದ್ದ ಯುವತಿ ಈತನಿಗೆ ಬ್ರೇಕಪ್ ಹೇಳಿ ಶಾಶ್ವತವಾಗಿ ದೂರವಿರಲು ನಿರ್ಧರಿಸಿದ್ದಾಳೆ. ಇದರಿಂದಾಗಿ ಲವ್ ಫೇಲ್ಯೂರ್‌ನಿಂದ ಕೆಲವು ದಿನಗಳಿಂದ ಮನನೊಂದಿದ್ದ ಸತೀಶ್ ಕುಮಾರ್ ಯುವತಿಯನ್ನು ಮರು ಮನವೊಲಿಸಲು ತುಂಬಾ ಪ್ರಯತ್ನ ಮಾಡಿದ್ದಾನೆ. ಇಷ್ಟಾಗಿಯೂ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಸತೀಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಈ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೂಸಲೇ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ ಪೊಲೀಸರು, ನಂತರ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ.