
ಬೆಂಗಳೂರು(ನ.20): ಸಾಕು ನಾಯಿಯ ಜೊತೆ ರಾತ್ರಿ ವಾಕಿಂಗ್‌ಗೆ ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ಹೆಸರು ವಿಘ್ನೇಶ್ (19), ಬ್ಯಾಡರಹಳ್ಳಿ ನಿವಾಸಿಯಾಗಿರುವ ಆರೋಪಿ ಇದೇ ನವೆಂಬರ್ 7ರಂದು ರಾತ್ರಿ ಸುಮಾರು 10:30ರ ವೇಳೆ ಕೃತ್ಯ ಎಸಗಿದ್ದಾನೆ. ಉಪಕಾರ್ ಲೇಔಟ್‌ನಲ್ಲಿ ಮಹಿಳೆ ತಮ್ಮ ಪ್ರೀತಿಯ ಸಾಕು ನಾಯಿಯ ಜೊತೆ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಮಹಿಳೆಯ ಬಳಿ ಬಂದ ಆರೋಪಿ ವಿಘ್ನೇಶ್ 'ನಿಮ್ಮ ನಾಯಿ ತುಂಬಾ ಚೆನ್ನಾಗಿದೆ, ಮುಟ್ಟಬಹುದೇ?' ಎಂದು ಕೇಳಿದ್ದಾನೆ. ಮಹಿಳೆ ಸಮ್ಮತಿ ತಿಳಿಸಿದ ಬಳಿಕ ನಾಯಿಯನ್ನು ಮುಟ್ಟುವ ನೆಪದಲ್ಲಿ ಆಕೆಯ ದೇಹದ ಸೂಕ್ಷ್ಮ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
19 ವರ್ಷದ ಎಳೆ ಹುಡುಗನ ಕೃತ್ಯಕ್ಕೆ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಯುವಕನ ದುರ್ವರ್ತಗೆ ಮಹಿಳೆ ಗಾಬರಿಯಾಗಿ ಕೈಯಲ್ಲಿದ್ದ ಮೊಬೈಲ್ ಫೋನ್ ಕೆಳಗೆ ಬೀಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಕೆಳಗೆ ಬಿದ್ದ ಮಹಿಳೆಯ ಫೋನ್ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಮಹಿಳೆ ತಕ್ಷಣ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ. ಇದೇ ರೀತಿ ಬೇರೆ ಯಾರಿಗಾದರೂ ಕಿರುಕುಳ ನೀಡಿದ್ದಾನೆಯೇ? ಕಳ್ಳತನ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ