ನವಿ ಮುಂಬೈನಲ್ಲಿ 20 ವರ್ಷದ ಹುಡುಗಿ ಯಶಶ್ರೀ ಶಿಂಧೆ ಕೊಲೆ ಕೇಸ್‌ನಲ್ಲಿ ಆಕೆಯ ಬಾಯ್‌ಫ್ರೆಂಡ್ ದಾವೂದ್ ಶೇಖ್‌ನನ್ನು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಯಾದಗಿರಿ (ಜು.30): ನವಿ ಮುಂಬೈನಲ್ಲಿ 20 ವರ್ಷದ ಯುವತಿ ಯಶಶ್ರೀ ಶಿಂಧೆ ಕೊಲೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆಕೆಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿ ಪೊದೆಯಲ್ಲಿ ಶವ ಎಸೆದು ಹೋಗಿದ್ದ ಆಕೆಯ ಬಾಯ್‌ಫ್ರೆಂಡ್ ದಾವೂದ್ ಶೇಖ್‌ನನ್ನು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಬಂಧಿಸಲಾಗಿದೆ. ಶಹಾಪುರ ತಾಲೂಕಿನ ಆಲ್ದಾಳ್ ಗ್ರಾಮದ 28 ವರ್ಷದ ದಾವೂದ್ ಶೇಖ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಯಶಶ್ರೀ ಶಿಂಧೆ ಕೊಲೆಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆಕೆಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದ ದಾವೂದ್ ಶೇಖ್ ಬಳಿಕ ತನ್ನೂರಿಗೆ ಓಡಿ ಬಂದಿದ್ದ. ಯಶಶ್ರೀ ಹಾಗೂ ದಾವೂದ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇನ್ನು ದಾವೂದ್ ಶೇಖ್ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಫೇಸ್‌ಬುಕ್ ಮೂಲಕ ಪರಿಚಯವಾಗಿ ಬಳಿಕ ಇಬ್ಬರು ಪ್ರೀತಿ ಮಾಡುತ್ತಿದ್ದರು. ಬಳಿಕ ಮುಂಬೈಗೆ ಹೋಗಿ ಆಕೆಯನ್ನು ಕೊಲೆ ಮಾಡಿ ಬಂದಿದ್ದಾರೆ. ನಿನ್ನೆ ರಾತ್ರೋರಾತ್ರಿ ನಗರಕ್ಕೆ ಆಗಮಿಸಿದ ನವೀ ಮುಂಬೈನ ಅರ್ಬನ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯನ್ನ ಬಂಧಿಸಿದ್ದಾರೆ. ಅರ್ಬನ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.
ಯಶಶ್ರೀ ಶಿಂಧೆಯ ಕೊಲೆ ಮಾಡಿದ್ದ ದಾವೂದ್ ಶೇಖ್ ಆಕೆಯ ಶವವನ್ನು ನವಿ ಮುಂಬೈನ ರೈಲ್ವೆ ನಿಲ್ದಾಣದ ಬಳಿಯ ಪೊದೆಗಳಲ್ಲಿ ಎಸೆದಿದ್ದ. ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಅವರು ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಗಳಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಶನಿವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಈ ವೇಳೆ ದೇಹದ ಮೇನೆ ಅನೇಕ ಗಾಯದ ಗುರುತುಗಳು ಆಗಿದ್ದವು. ಅದಲ್ಲದೆ, ಚೂರಿ ಇರಿತದ ಮಾರ್ಕ್‌ಗಳು ಕೂಡ ಇದ್ದವು. ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.' ಕೊಲೆಯಾದ ಮಹಿಳೆಯನ್ನು ಯಶಶ್ರೀ ಶಿಂಧೆ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಾಗಿತ್ತು. 20 ವರ್ಷದ ಯುವತಿ ಊರನ್ ನಿವಾಸಿಯಾಗಿದ್ದು, ಸುಮಾರು 25 ಕಿ.ಮೀ ದೂರದ ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದಳು' ಎಂದು ಪೊಲೀಸರು ಮಾಹಿತಿ ನೀಡಿದ್ದರು.
undefined
ಇದಕ್ಕೂ ಮೊದಲು, ಕರ್ನಾಟಕದ ಮೊಹ್ಸಿನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ನವಿ ಮುಂಬೈ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಈತ ಯಶಶ್ರೀ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ದೂರವಾಣಿ ಕರೆ ವಿವರಗಳಿಂದ ಸಿಕ್ಕಿದೆ. ಆರಂಭದಲ್ಲಿ ಮೊಹ್ಸಿನ್ ಹಾಗೂ ಯಶಶ್ರೀ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಪ್ರಮುಖ ಆರೋಪಿಯೊಂದಿಗೆ ಆತನ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮೊಹ್ಸಿನ್‌ನನ್ನು ಇಂದು ಉರಾನ್‌ಗೆ ಕರೆತರುವ ಸಾಧ್ಯತೆಯಿದೆ.
20 ವರ್ಷದ ಹುಡುಗಿಯ ಕೊಲೆ, ಶವವನ್ನು ಪೊದೆಯಲ್ಲಿ ಎಸೆದು ಹೋದ ಬಾಯ್‌ಫ್ರೆಂಡ್!
ತ್ರಿಕೋನ ಪ್ರೇಮಕಥೆ?: ಪೊಲೀಸರು ಈ ಕೇಸ್‌ನಲ್ಲಿ ಮೊಹ್ಸಿನ್ ಹಾಗೂ ದಾವೂದ್ ಶೇಖ್‌ನನ್ನು ಬಂಧನ ಮಾಡಿದ್ದು, ಇದರ ನಡುವೆ ತ್ರಿಕೋನ ಪ್ರೇಮಕಥೆಯ ಸಾಧ್ಯತೆ ಇರಬಹುದು ಎಂದು ಅಂದಾಜಿಸಲಾಗಿದೆ. ದಾವೂದ್ ಶೇಖ್‌ಗೆ ಯಶಶ್ರೀ 2019ರಿಂದಲೇ ಪರಿಚಯ. ಆಕೆಗೆ ತೊಂದರೆ ಕೊಡುತ್ತಿದ್ದ ಕಾರಣಕ್ಕೆ ಯಶಶ್ರೀ ಶಿಂಧೆಯ ಪೋಷಕರು ಪೋಕ್ಸೋ ಕೇಸ್ ದಾಖಲು ಮಾಡಿದ್ದರು. ಇದರಿಂದ ದಾವೂದ್ ಶೇಖ್ 6 ತಿಂಗಳು ಜೈಲಿಗೆ ಹೋಗಿ ಬಂದಿದ್ದ. ಈ ನಡುವೆ ಮೊಹ್ಸಿನ್ ಜೊತೆ ಯಶಶ್ರೀ ಆತ್ಮೀಯವಾಗಿ ಮಾತನಾಡುತ್ತಿದ್ದ ಕಾರಣಕ್ಕೆ ದಾವೂದ್ ಸಿಟ್ಟಾಗಿದ್ದ ಎನ್ನಲಾಗಿದೆ.
ಇದೆಂಥಾ ಪ್ರೀತಿ! ಎಲ್ಲಾ ಕಾನೂನು ಮೀರಿ ಕೈದಿಗೆ ತಾಜ್ ಮಹಲ್ ತೋರಿಸಲು ಕರೆದುಕೊಂಡು ಬಂದ ಪೊಲೀಸ್!