
ಹೈದರಾಬಾದ್/ ಬೆಂಗಳೂರು(ಆ. 21) ತಂದೆ ತಾಯಿಗೆ ತಿಳಿಸದೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷ ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಹೈದರಾಬಾದ್ ನ ನಾಗಾರ್ಜುನ ಕಾಲೋನಿಯ ನಿವಾಸಿ 30 ವರ್ಷದ ಎಸ್ ಪವನ್ ಎಂಬಾತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2017ರಲ್ಲಿ ಈತ ಯುವತಿಯನ್ನು ಪ್ರೀತಿಸಿ ಮದುವೆಯಾಗುವ ನಾಟಕ ಮಾಡಿದ್ದಾನೆ.
ಯುವಕರೆ ಹುಷಾರ್, ಹಳ್ಳಿ ಹುಡುಗನ ಕೈಗೆ ಚಿಪ್ಪಿಟ್ಟ ಲಕ್ಷ್ಮೀ
ಇದಾದ ಮೇಲೆ ಪವನ್ ಗುಟ್ಟಾಗಿ ಸಂಸಾರ ನಡೆಸಿದ್ದಾನೆ. ಹಿಲ್ಸ್ ಸ್ಟೇಶನ್ ಗೆ ಹನಿಮೂನ್ ಗೂ ಕರೆದೊಯ್ದಿದ್ದಾನೆ. ನಂತರ ಆಕೆಯನ್ನು ಹೈದರಾಬಾದ್ ನ ತವರು ಮನೆಯಲ್ಲಿ ಇರುವಂತೆ ತಿಳಿಸಿ ತನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ.
ಮೋಸ ಮಾಡುವ ಆಲೋಚನೆ ಹೊಂದಿದ್ದ ಪವನ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಎಲ್ಲಾ ಖಾತೆಯನ್ನು ಬ್ಲಾಕ್ ಮಾಡಿ ಫೋನ್ ಸ್ವೀಚ್ ಆಫ್ ಮಾಡಿದ್ದಾನೆ. ಎಷ್ಟು ಬಾರಿ ಪ್ರಯತ್ನಿಸಿದರು ಯುವತಿಗೆ ಆತನ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ತಾನು ಅನ್ಯಾಯಕ್ಕೆ ಒಳಗಾಗಿರುವುದು ಗೊತ್ತಾದ ಮೇಲೆ ಪೊಲೀರಿಗೆ ಯುವತಿ ದೂರು ನೀಡಿದ್ದಾಳೆ.
ಎರಡು ವರ್ಷಗಳ ಬಳಿಕ ಪವನ್ ಹೈದರಾಬಾದ್ ಗೆ ಮರಳಿರುವುದು ಗೊತ್ತಾಗಿ ಆತನ ಮನೆಗೆ ತೆರಳಿದರೆ 10 ಲಕ್ಷ ರುಪಾಯಿ ನೀಡಿ ಎಲ್ಲವನ್ನು ಮರೆತುಬಿಡು ಎಂದು ಹೇಳಿದ ಎಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನು ಸರೋರ್ ನಗರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ