ಬಿಲ್ಡಿಂಗ್‌ನಿಂದ ಹಾರಿ ಟೆಕ್ಕಿ ಉತ್ತಮ್ ಹೆಗಡೆ  ಆತ್ಮಹತ್ಯೆ, ಕಾರಣ ನಿಗೂಢ

By Suvarna News  |  First Published May 21, 2020, 8:29 PM IST

ಬಿಲ್ಡಿಂಗ್ ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ/   ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಟೆಕ್ಕಿ/  ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಸಮೀಪದ ಅಪಾರ್ಟ್ ಮೆಂಟ್ ವೊಂದರಲ್ಲಿ ಘಟನೆ/ ಉತ್ತಮ್ ಹೆಗಡೆ (30) ಸಾವನ್ನಪ್ಪಿದ ಟೆಕ್ಕಿ/ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ವಾಸಮಾಡುತ್ತಿದ್ದ ಟೆಕ್ಕಿ‌ ಕುಟುಂಬ/


ಬೆಂಗಳೂರು(ಮೇ 21) ಅಪಾರ್ಟ್ ಮೆಂಟ್ ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಉತ್ತಮ್ ಹೆಗಡೆ (30) ಸಾವನ್ನಪ್ಪಿದ ಟೆಕ್ಕಿ. ಮೃತ ಟೆಕ್ಕಿ ತನ್ನ ಕುಟುಂಬದೊಂದಿಗೆ ಅಪಾರ್ಟ್‍ಮೆಂಟ್‍ನ ಫ್ಲ್ಯಾಟ್‍ವೊಂದರಲ್ಲಿ ವಾಸಮಾಡುತ್ತಿದ್ದ. ನಗರದ ಖಾಸಗಿ ಕಂಪನಿಯಲ್ಲಿ  ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಉತ್ತಮ್ ಹೆಗಡೆ ಬುಧವಾರ ರಾತ್ರಿ ಎಂದಿನಂತೆ ಎಲ್ಲರೊಂದಿಗೆ ಬೆರೆತು ಊಟ ಮಾಡಿ ಮಲಗಿದ್ದ.

Tap to resize

Latest Videos

ಹೆಂಡತಿ ವರ್ತನೆಗೆ ಬೇಸತ್ತ ಗಂಡ ಆತ್ಮಹತ್ಯೆಗೆ ಶರಣು

ಆದರೆ ಗುರುವಾರ ನಸುಕಿವ ಜಾವ 3 ಗಂಟೆ ಸಮಯದಲ್ಲಿ ಅಪಾರ್ಟ್‍ಮೆಂಟ್ ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸಿವಿ ರಾಮನ್ ನಗರ ಆಸ್ಪತ್ರೆಗೆ ಕಳುಹಿಸಲಾಗಿದೆ. ಮದುವೆ ವಿಚಾರಕ್ಕೆ ಸಂಬಂಧಿಸಿದ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
 

click me!