ಬೆಂಗಳೂರಿನ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಅತ್ತೆ ಮತ್ತು ಹೆಂಡತಿಯೇ ಆರೋಪಿಗಳು ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹ ಮತ್ತು ಬೆದರಿಕೆ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು (ಮಾ.24): ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿ ಹಾಗೂ ಶಾಸಕ ಬಾಲಕೃಷ್ಣ ಅವರ ಆಪ್ತನಾಗಿದ್ದ ಲೋಕನಾಥ್ ಸಿಂಗ್ ಕೊಲೆ ಪ್ರಕರಣಕ್ಕೆ ಇದೀಗ ಭಾರೀ ಟ್ವಿಸ್ಟ್ ಸಿಕ್ಕಿದೆ. ಲೋಕನಾಥ್‌ಗೆ ಹೆಣ್ಣು ಕೊಟ್ಟ ಅತ್ತೆಯಿಂದಲೇ ಆತನ ಕೊಲೆಗೆ ಸ್ಕೆಚ್ ಹಾಕಿ ಕೊಲೆ ಮಾಡಿರುವ ವಿಚಾರವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಮಾ.23 ರಂದು ಸಂಜೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಲೋಕನಾಥ್ ಸಿಂಗ್ ಕೊಲೆಯಾಗಿದ್ದ ವ್ಯಕ್ತಿಯನ್ನು ತಾಯಿ-ಮಗಳು ಸೇರಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆಯಾದ ಲೋಕನಾಥ್ ಸಿಂಗ್ ಅತ್ತೆ ಹೇಮಾಬಾಯಿ ಹಾಗೂ ಆತನ ಹೆಂಡತಿ ಯಶಸ್ವಿನಿ ಕೊಲೆ ಆರೋಪಿಗಳಾಗಿದ್ದಾರೆ. ಯಶಸ್ವಿನಿ ಜೊತೆ ಲೋಕನಾಥ್ ಮದುವೆಯಾಗಿದ್ದನು. ಈ ಬಗ್ಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಿಜಿಸ್ಟರ್ ಮ್ಯಾರೆಜ್ ಆಗಿತ್ತು. ಇವರಿಬ್ಬರ ನಡುವೆ ಸಂಬಂಧ ಸರಿಯಿರಲಿಲ್ಲ. ಹಂಡತಿ ಹೇಳಿದ್ದ ಮಾತು ಕೇಳುತ್ತಿರಲಿಲ್ಲ ಎಂದು ಯಶಸ್ವಿನಿ ಅಮ್ಮನ ಬಳಿ ಹೇಳುತ್ತಿದ್ದಳು.
ಯಶಸ್ವಿನಿ ತನ್ನ ತಾಯಿ ಬಳಿ ಗಂಡ ಲೋಕನಾಥ್ ತೊಂದರೆ ಕೊಡುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಆದರೆ, ಲೋಕನಾಥ್‌ಗೆ ಯಶಸ್ವಿನಿ ಸಂಬಂಧಿಕರೇ ಆಗಿದ್ದರೂ, ಕುಟುಂಬಸ್ಥರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಕೊಂಡಿದ್ದನು. ಮದುವೆಯಾದ ಕೆಲವು ದಿನಗಳ ನಂತರ ಯಶಸ್ವಿನಿಗೆ ಕಿರುಕುಳ ಕೊಡಲಾರಂಭಿಸಿದ್ದಾನೆ. ಗಂಡನ ಕಿರುಕುಳ ತಾಳಲಾರದೇ ಯಶಸ್ವಿನಿ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆಗ ಇಬ್ಬರೂ ಸೇರಿ ಉದ್ಯಮಿ ಲೋಕನಾಥ್‌ನನ್ನು ಕೊಲೆ ಮಾಡುವುದಕ್ಕೆ ನಿರ್ಧರಿಸಿದ್ದರು. ಅದರಂತೆ ತಾಯಿ-ಮಗಳು ಇಬ್ಬರೂ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಘಟನೆ ಸೋಲದೇವನಹಳ್ಳಿ ಪೊಲೀಸರು ತಾಯ, ಮಗಳನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಧಿ ಸಿಕ್ಕಿದೆ ಎಂದು ಮಣ್ಣಿನ ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಮಾರುತ್ತಿದ್ದ ವಂಚಕರ ಬಂಧನ!
ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಮಾತನಾಡಿ, ಮಾರ್ಚ್ 22 ರಂದು ಸಂಜೆ 5:30 ಕ್ಕೆ ಲೋಕನಾಥ್ ಎಂಬಾಂತಾನ ಕೊಲೆಯಾಗಿದೆ. 112 ಗೆ ಕರೆ ಮಾಡಿ ಸ್ಥಳೀಯರ ಮಾಹಿತಿ ನೀಡುತ್ತಾರೆ. ಸ್ಥಳಕ್ಕೆ ಹೋದಾಗ ಲೋಕನಾಥ್ ಸಿಂಗ್ 37 ವರ್ಷದ ವ್ಯಕ್ತಿ ಕೊಲೆಯಾಗಿರೋದು ಗೊತ್ತಾಗುತ್ತದೆ. ಆತನ ಹಿನ್ನೆಲೆ ನೋಡಿದಾಗ ಆತ ಮಾಗಡಿ ಮೂಲದ ಕುದೂರನವರು ಅಂತ ಗೊತ್ತಾಗುತ್ತದೆ. ಅವರ ಸಹೋದರನ ದೂರಿನ ಮೇಲೆ ಮರ್ಡರ್ ಕೇಸ್ ನಲ್ಲಿ ಎಫ್ಐಆರ್ ಆಗುತ್ತದೆ. ತನಿಖೆ ಮಾಡಿ ಇಬ್ಬರು ಮಹಿಳೆಯರು ಬಂಧಿಸಲಾಗಿದೆ. ಆರೋಪಿಗಳು ಆತನ ಪತ್ನಿ ಮತ್ತು ಅತ್ತೆಯೇ ಆಗಿದ್ದಾರೆ ಎಂದು ಹೇಳಿದರು.
ಲೋಕನಾಥ್ ಸಿಂಗ್ ಬ್ಯಾಂಕಿಂಗ್ ಲೋನ್ ಮಾಡಿಸೋದು, ರಿಯಲ್ ಎಸ್ಟೇಟ್ ಮಾಡುತ್ತಾ ಇದ್ದರು. ಇವರ ಮಾವ ಕೃಷ್ಣ ಸಿಂಗ್ ಕೂಡ ಬಿಸಿನೆಸ್ ಮಾಡಿಕೊಂಡಿರಿತ್ತಾರೆ. ಪತ್ನಿಯನ್ನ ಎರಡು ವರ್ಷದಿಂದ ಪ್ರೀತಿಸುತ್ತಿರುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಕುಣಿಗಲ್‌ನಲ್ಲಿ ರಿಜಿಸ್ಟರ್ ಮ್ಯಾರೇಜ್ ಕೂಡ ಆಗುತ್ತಾರೆ. ಆದರೆ ಈ ವಿಚಾರ ಪತ್ನಿ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಮದುವೆ ಬಳಿಕ ಹುಡುಗಿಯನ್ನ ಪೋಷಕರ ಜೊತೆಯೇ ಬಿಟ್ಟು ಹೋಗಿರುತ್ತಾನೆ. ಮಗಳನ್ನ ಪ್ರೀತಿಸುತ್ತಿದ್ದಾಗ ವಯಸ್ಸಿನ ಅಂತರಕ್ಕೆ ಪೋಷಕರು ಮದುವೆಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಕುಣಿಗಲ್ ನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿರುತ್ತಾರೆ. ಆದರೆ ಕೆಲ ದಿನಗಳಲ್ಲಿ ಇತನ ವ್ಯವಹಾರ ಅಕ್ರಮ ಸಂಬಂಧ, ವ್ಯವಹಾರಗಳ ಬಗ್ಗೆ ಗೊತ್ತಾಗುತ್ತದೆ. ಆಗ ಗಂಡ ಹೆಂಡತಿ ಇಬ್ಬರ ನಡುವೆ ಜಗಳ ಆಗುತ್ತದೆ. ಡಿವೋರ್ಸ್ ಗೆ ಮಾತುಕತೆ ಆಗಿರುತ್ತದೆ.
ಇದನ್ನೂ ಓದಿ: ರಜತ್, ವಿನಯ್ ಗೌಡ ಪೊಲೀಸರ ವಶಕ್ಕೆ; ಮಚ್ಚು ಹಿಡಿದು ರೀಲ್ಸ್ ಹುಚ್ಚಾಟ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿಗಳು!
ಎರಡು ವಾರದ ಹಿಂದೆ ಕುಟುಂಬಕ್ಕೆ ಮದುವೆ ಆಗಿರೋದು ಗೊತ್ತಾಗುತ್ತದೆ. ಆಗ ಲೋಕನಾಥ್, ಹುಡುಗಿ ಕುಟುಂಬದ ಮೇಲೆ ಬೆದರಿಕೆ ಹಾಕಲು ಮುಂದಾಗ್ತಾರೆ. ಇದರಿಂದ ಇತನನ್ನ ಕೊಲೆ ಮಾಡಲು ಅತ್ತೆ, ಪತ್ನಿ ಪ್ಲ್ಯಾನ್ ಮಾಡುತ್ತಾರೆ. ಪ್ಲ್ಯಾನ್ ಮಾಡಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲೇ ಕತ್ತಿಯಿಂದ ಕುತ್ತಿಗೆ ಚುಚ್ಚಿ ಕೊಲೆ ಮಾಡ್ತಾರೆ. ಇಬ್ಬರು ಅಲ್ಲಿಂದ ತಪ್ಪಿಸಿಕೊಂಡು ಬರ್ತಾರೆ. ಪತ್ನಿಯೇ ಲೋಕನಾಥನನ್ನ ಮಾತನಾಡಬೇಕು ಅಂತ ಚಿಕ್ಕಬಾಣವರಕ್ಕೆ ಕರೆಸಿಕೊಂಡು, ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಹಿಂದೆಯಿಂದ ಆಟೋದಲ್ಲಿ ತಾಯಿ ಕೂಡ ಫಾಲೋ ಮಾಡಿಕೊಂಡು ಹಿಂದೆ ಹೋಗಿ ಪ್ಲ್ಯಾನ್ ಮಾಡಿ ಮರ್ಡರ್ ಮಾಡ್ತಾರೆ. ಈ ಹಿಂದೆ ಬೆಂಗಳೂರು ಸಿಸಿಬಿಯಲ್ಲಿ ಲೋಕನಾಥ್ ಮೇಲೆ ವಂಚನೆ ಪ್ರಕರಣ ಕೂಡ ದಾಖಲಾಗಿತ್ತು ಎಂದು ಡಿಸಿಪಿ ಅದಾವತ್ ತಿಳಿಸಿದ್ದಾರೆ.