ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚು: ಪೊಲೀಸ್​ ಇಲಾಖೆಯ ಈ ಕುತೂಹಲದ ಪ್ರಕಟಣೆಯಲ್ಲಿ ಏನಿದೆ ನೋಡಿ!

ಯುಗಾದಿ ಹಬ್ಬದಿಂದ 3 ದಿನ ಕಳ್ಳರ ಕಾಟ ಹೆಚ್ಚಾಗಿರುತ್ತದೆ. ಇಂಥದ್ದೊಂದು ಪ್ರಕಟಣೆಯನ್ನು ಪೊಲೀಸ್​ ಇಲಾಖೆ ಹೊರಡಿಸಿದೆ. ಏನಿದರ ವಿಶೇಷತೆ?
 

The police departments notification about theft during Yugadi in 1966 gone viral suc

'ಯುಗಾದಿ ಹಬ್ಬದ ಬಳಿಕ ಮೂರು ದಿನಗಳವರೆಗೆ ಕಳ್ಳರ ಕಾಟ ಹೆಚ್ಚಾಗಿರುತ್ತದೆ ರಾತ್ರಿಯ ವೇಲೆ ಕಳ್ಳತನವಾಗುವ ಸಂಭವವಿದೆ. ನಿಮ್ಮ ಮನೆ, ಅಂಗಡಿಗಳಲ್ಲಿ ಇರುವ ಹಣ, ಬೆಳ್ಲಿ, ಬಂಗಾರ, ಭಾರಿ ಬಟ್ಟೆ ಭದ್​ರವಾಗಿ ಇಟ್ಟುಕೊಳ್ಳಿ. ಆಲಸ್ಯದಿಂದ ಅನಾಹುತ ಎನ್ನುವುದನ್ನು ಮರೆಯಬೇಡಿ. ಪೊಲೀಸರೊಂದಿಗೆ ಸಹಕರಿಸಿ, ನಿಮ್ಮ  ದ್ರವ್ಯವನ್ನು ಕಾಪಾಡಿಕೊಳ್ಳಿ. ಆ ದಯಾಮಯನಾದ ಪರಮಾತ್ಮನು ತಮಗೆಲ್ಲರಿಗೂ ಶುಭ, ಸಂಪತ್ತು ಮತ್ತು ಶ್ರೇಯಸ್ಸನ್ನು ಕೊಟ್ಟು ಯುಗದ ಆದಿಯಾಗಿ ಸದಾ ಸುಖವಾಗಿಡಲೆಂದು ಪ್ರಾರ್ಥಿಸುತ್ತೇವೆ. ಯುಗಾದಿ ಹಬ್ಬದಲ್ಲಿ ಇಸ್ಪೀಟು ವಗಯರೆ ಜೂಜಾಟಗಳನ್ನು ಆಡಿ ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ...'

ಹೀಗೆಂದು ಪ್ರಕಟಣೆ ಹೊರಡಿಸಿರುವುದು ಪೊಲೀಸ್​ ಇಲಾಖೆ, 'ಸಜ್ಜನರಿಗೆ ಅರಮನೆ, ದುರ್ಜನರಿಗೆ ಸೆರೆಮನೆ, ತಿಪಟೂರು ಸರ್ಕಲ್​  ಪೊಲೀಸ್​ ಸಿಬ್ಬಂದಿ' ಎಂದು ತುಮಕೂರು ಜಿಲ್ಲೆಯ ತಿಪಟೂರಿನ ಪೊಲೀಸ್​ ಇಲಾಖೆಯಿಂದ ಇಂಥದ್ದೊಂದು ಪ್ರಕಟಣೆ ಹೊರಡಿಸಲಾಗಿದೆ. ಇನ್ನೇನು ಯುಗಾದಿ ಹತ್ತಿರ ಬಂದಿದೆ. ಈ ಯುಗಾದಿಗೆ ಪೊಲೀಸರು ಹೀಗೊಂದು ಪ್ರಕಟಣೆ ಹೊರಡಿಸಿದ್ದಾರೆ ಎಂದುಕೊಳ್ಳಬೇಡಿ ಮತ್ತೆ. ಇದು ಪ್ರಕಟವಾಗಿದ್ದು, 1966ರಲ್ಲಿ! 59 ವರ್ಷಗಳ ಹಿಂದಿನ ಈ ಪ್ರಕಟಣೆಯು ಈಗ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಹಬ್ಬದ ಸಂದರ್ಭಗಳಲ್ಲಿ ಚಿನ್ನ, ಒಡವೆ ಇತ್ಯಾದಿಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಿರುವುದರಿಂದ ಆಗ ಪೊಲೀಸ್​ ಇಲಾಖೆ ಇಂಥದ್ದೊಂದು ಪ್ರಕಟಣೆ ಹೊರಡಿಸಿತ್ತು. 

Latest Videos

ರಜೆಚೀಟಿಯಲ್ಲಿ ಸಿಕ್ಕಾಪಟ್ಟೆ ಸ್ಪೆಲ್ಲಿಂಗ್​ ಮಿಸ್ಟೆಕ್​: ಲೇಡಿ ಸಬ್ ಇನ್ಸ್‌ಪೆಕ್ಟರ್ ಅರೆಸ್ಟ್​! ಅಷ್ಟಕ್ಕೂ ಆಗಿದ್ದೇನು ನೋಡಿ...

ಹಾಗೆ ನೋಡಿದರೆ, ಈಗಲೂ ಇದು ಪ್ರಸ್ತುತ ಎನ್ನಬಹುದು. ಏಕೆಂದರೆ ಇಂದಿಗೂ ಕಳ್ಳರ ಕಣ್ಣು ಹಬ್ಬಗಳ ಮೇಲೆಯೇ ನೆಟ್ಟಿರುತ್ತದೆ. ಅದರಲ್ಲಿಯೂ ಯುಗಾದಿ, ಲಕ್ಷ್ಮೀ ಪೂಜೆ ಇಂಥ ಸಂದರ್ಭಗಳಲ್ಲಿ ಮನೆಯಲ್ಲಿ ಹಬ್ಬ ಮಾಡುವ ಸಲುವಾಗಿ ಬ್ಯಾಂಕ್​ನಲ್ಲಿ ಇಟ್ಟಿರೋ ಚಿನ್ನಾಭರಣಗಳನ್ನು ಮನೆಗೆ ತರಲಾಗುತ್ತದೆ. ಮದುವೆಯ ಸಂದರ್ಭಗಳಿಗೂ ಇದು ಅನ್ವಯ. ಇಂಥ ಮನೆಯಗಳನ್ನೇ ಹೊಂಚು ಹಾಕಿ ದರೋಡೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ಪೊಲೀಸರು ಇಂಥ ಪ್ರಕಟಣೆ ಹೊರಡಿಸುವುದಿಲ್ಲವಷ್ಟೇ. 

ಇಂದು ಯುಗಾದಿ ಅಥವಾ ಇನ್ನಿತರೇ ಸಂದರ್ಭಗಳಲ್ಲಿ ಜ್ಯೋತಿಷಿಗಳು ಜಾತಕದ ಫಲ, ರಾಶಿ ಫಲ ಇತ್ಯಾದಿಗಳನ್ನು ಹೇಳುವುದು ಸಾಮಾನ್ಯವಾಗಿದೆ.   ಈಗ ಇಂತಿಂಥ ರಾಶಿಯವರಿಗೆ ಕಳ್ಳರ ಭಯವಿದೆ, ಯುಗಾದಿಯ ಬಳಿಕ ಹೀಗಾಗಲಿದೆ, ಇಂಥ ರಾಶಿಯವರಿಗೆ ಈ ರೀತಿಯ ಫಲವಿದೆ ಎಂದು ಹೇಳುತ್ತಾರೆ. ಆದರೆ ಅಂದು, ಪೊಲೀಸ್​ ಇಲಾಖೆಯವರು ಜನರಿಗೆ ಈ ರೀತಿ ಎಚ್ಚರಿಕೆ ಕೊಡುತ್ತಿದ್ದರು. 

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್​ ಜಡಿದಳು- ಏನಾಯ್ತು ನೋಡಿ

 

vuukle one pixel image
click me!