ಬೆಂಗಳೂರು ರಂಜಾನ್ ಕಿಟ್ ವಂಚನೆ: ದಂಪತಿಯಿಂದ 21 ಗ್ರಾಂ ಚಿನ್ನ, 9 ಸಾವಿರ ಕಿತ್ತುಕೊಂಡು ಪರಾರಿಯಾದ ಅಬ್ದುಲ್ಲಾ

By Sathish Kumar KH  |  First Published Apr 3, 2024, 12:08 PM IST

ಬೆಂಗಳೂರಿನಲ್ಲಿ ರಂಜಾನ್ ಕಿಟ್‌ ಕೊಡಿಸುವ ಹೆಸರಿನಲ್ಲಿ ದಂಪತಿಯನ್ನು ಕರೆದುಕೊಂಡು ಹೋದ ಅಬ್ದುಲ್ಲಾ ಅವರಿಗೆ ಚಾಕು ತೋರಿಸಿ 21 ಗ್ರಾಂ ಚಿನ್ನ ಹಾಗೂ 9 ಸಾವಿರ ರೂ. ಹಣವನ್ನು ದೋಚಿ ಪರಾರಿ ಆಗಿದ್ದಾನೆ.


ಬೆಂಗಳೂರು (ಏ.03): ದೇಶದಾದ್ಯಂತ ರಂಜಾನ್ ಮಾಸಾಚರಣೆ ಶುರುವಾಗಿದೆ. ಮುಸ್ಲಿಂ ಸಮುದಾಯದವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಉಪವಾಸ, ಪ್ರಾರ್ಥನೆ, ಇಫ್ತಿಯಾರ್ ಕೂಟ ಹಾಗೂ ದಾನವನ್ನು ನೀಡುವುದು ಸಾಆನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಬ್ದುಲ್ಲಾ ನಿಮಗೆ ರಂಜಾನ್ ಕಿಟ್‌ ಕೊಡಿಸುವುದಾಗಿ ಹೇಳಿ ದಂಪತಿಯನ್ನು ಕರೆದುಕೊಂಡು ಹೋಗಿ ಚಾಕು ತೋರಿಸಿ ಮೈಮೇಲಿದ್ದ 21 ಗ್ರಾಂ ಚಿನ್ನ ಹಾಗೂ 9 ಸಾವಿರ ರೂ. ನಗದು ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

'ಹೌದು, ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಂಜಾನ್ ಕಿಟ್ ಕೊಡಿಸುವ ಹೆಸರಲ್ಲಿ ರಾಬರಿ ಮಾಡಾಲಾಗಿದೆ. ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ ಅಬ್ದುಲ್ಲಾ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಈ ಹಿಂದೆಯೂ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ರಾಬರಿ ಮಾಡಿದ್ದ ಆರೋಪಿ ಅಬ್ದುಲ್ಲಾ ಜೈಲು ಸೇರಿದ್ದನು. ಕಳೆದ ತಿಂಗಳು 26 ರಂದು ಜೈಲಿಂದ ರಿಲೀಸ್ ಆಗಿದ್ದನು. ಈಗ ರಂಜಾನ್ ಕಿಟ್ ಕೊಡಿಸ್ತೀನಿ ಬನ್ನಿ ಅಂತಾ ರಶೀದ್ ಎಂಬುವರನ್ನು ಬೈಕಲ್ಲಿ ಕರೆದುಕೊಂಡು ಹೋಗಿದ್ದನು. ನಂತರ, ಹೊಸೂರು ರಸ್ತೆಯ ಆನೇಪಾಳ್ಯ ಮೋರಿ ಬಳಿ ಬೈಕ್‌ ಹೋದ ನಂತರ ರಿಶೀದ್‌ಗೆ ಚಾಕು ತೋರಿಸಿ ಆತನ ಬಳಿಯಿದ್ದ 5 ಸಾವಿರ ರೂ. ನದು ಹಣವನ್ನು ದೋಚಿದ್ದನು. ನಂತರ, ಆತನನ್ನು ಅಲ್ಲಿಯೇ ಬಿಟ್ಟು ಮೊಬೈಲ್‌ ಕಿತ್ತುಕೊಂಡು ಪುನಃ ಅವರ ಮನೆಗೆ ಬಂದಿದ್ದಾನೆ.

Tap to resize

Latest Videos

undefined

ಮುಸ್ಲಿಂ ಮಹಿಳೆ ಜತೆ ಅನೈತಿಕ ಸಂಬಂಧ ಆರೋಪ; ಸಾಮಾಜಿಕ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ!

ರಶೀದ್‌ನನ್ನು ಆನೆಪಾಳ್ಯದಲ್ಲಿ ಬಿಟ್ಟು ಪುನಃ ರಶೀದ್‌ನ ಹೆಂಡತಿ ಅಕಿಲಾ ಬಳಿ ಬಂದು ನಿಮ್ಮ ಗಂಡ ರಂಜಾನ್ ಕಿಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆತನಿಗೆ ಕಿಟ್ ಸಾಮಾಗ್ರಿಗಳನ್ನು ಹೊತ್ತುಕೊಂಡು ಬರಲು ಆಗುವುದಿಲ್ಲ. ಹಾಗಾಗಿ, ನೀವು ಕೂಡ ಅಲ್ಲಿಗೆ ಬರಬೇಕಂತೆ ಎಂದು ರಶೀದನ ಅಕಿಲಾಳನ್ನು ಕರೆದುಕೊಂಡು ಹೋಗಿದ್ದನು. ನಂತರ, ಆಕೆಯನ್ನೂ ಊರಿನ ಹೊರಭಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಕು ತೋರಿಸಿ ಆಕೆಯ ಮೈಮೇಲಿದ್ದ 21 ಗ್ರಾಂ ಚಿನ್ನ, 4 ಸಾವಿರ ನಗದು ದೋಚಿ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ದಂಪತಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಅಬ್ದುಲ್ಲಾನನ್ನು ಬಂಧಿಸಿದ್ದಾರೆ.

ಕೇರಳದಿಂದ ಆನ್‌ಲೈನ್‌ನಲ್ಲಿ ಗಾಂಜಾ ಖರೀದಿಸಿ ಬೆಂಗಳೂರಲ್ಲಿ ಮಾರಾಟ: 
ಬೆಂಗಳೂರು(ಏ.03):  
ರಾಜಧಾನಿಯ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಶಿವಕೃಷ್ಣ ಹಾಗೂ ರೋಷನ್ ಸೇರಿ ಐವರು ಬಂಧಿತರಾಗಿದ್ದು, ಆರೋಪಿಗಳಿಂದ 5.180 ಕೇಜಿ ಗಾಂಜಾ ಸೇರಿ ಒಟ್ಟು ₹16.5 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ನಗರದ ಮೈಕೋ ಲೇಔಟ್‌, ಬಾಗಲೂರು ಹಾಗೂ ರಾಮಮೂರ್ತಿ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಜಾಲದ ಮೇಲೆ ಸಿಸಿಬಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರು: ದುಬಾರಿ ಬಡ್ಡಿಗೆ ಸಾಲ ನೀಡುತ್ತಿದ್ದ ತಂದೆ-ಮಕ್ಕಳು, ಸಿಸಿಬಿ ದಾಳಿ

ಸಿಗ್ನಲ್ ಆ್ಯಪ್ ಮೂಲಕ ಸಂಪರ್ಕ: ‘ವಿದೇಶಿ ಪೆಡ್ಲರ್‌ವೊಬ್ಬನನ್ನು ಸಿಗ್ನಲ್ ಆ್ಯಪ್ ಮೂಲಕ ಸಂಪರ್ಕಿಸುತ್ತಿದ್ದ ಶಿವಕೃಷ್ಣ, ಆನ್‌ಲೈನ್ ಮೂಲಕ ಹಣ ವರ್ಗಾಯಿಸಿ ಗಾಂಜಾ ಖರೀದಿಸುತ್ತಿದ್ದ. ಬಳಿಕ ದುಬಾರಿ ಬೆಲೆಗೆ ಗ್ರಾಹಕರಿಗೆ ಆತ ಮಾರುತ್ತಿದ್ದ. ಶಿವಕೃಷ್ಣ ಬಳಿ 5.180 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಮತ್ತೊಂದು ದಾಳಿಯಲ್ಲಿ ಗುಜರಿ ವ್ಯಾಪಾರಿ ರೋಷನ್ ಸಿಕ್ಕಿಬಿದ್ದಿದ್ದಾನೆ. ತನ್ನ ಗುಜರಿ ಮಳಿಗೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಆತ ಮಾರುತ್ತಿದ್ದ. ಈ ಇಬ್ಬರು ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನು ಬಾಗಲೂರು ಹಾಗೂ ರಾಮಮೂರ್ತಿ ನಗರ ವ್ಯಾಪ್ತಿಯಲ್ಲಿ ನೆಲೆಸಿದ್ದ ವಿದೇಶಿ ಪಡ್ಲರ್‌ಗಳನ್ನು ಸಿಸಿಬಿ ಸೆರೆ ಹಿಡಿದಿದೆ.

click me!