ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ವಿದೇಶಿ ಫಂಡಿಂಗ್; ಯಾವ ದೇಶದ ಹಣ ಗೊತ್ತಾ?

By Sathish Kumar KH  |  First Published Apr 13, 2024, 4:32 PM IST

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಶಂಕಿತ ಉಗ್ರರಿಗೆ ವಿದೇಶಗಳಿಂದ ಫಂಡಿಂಗ್ ಬಂದಿದ್ದು, ಯಾವ ದೇಶದಿಂದ ಯಾರು ಕಳಿಸಿದ್ದಾರೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ.


ಬೆಂಗಳೂರು (ಏ.13): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್ಐಎ) ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಈ ಹತ್ತು ದಿನಗಳಲ್ಲಿ ಶಂಕಿತ ಉಗ್ರರಿಗೆ ಯಾವ ದೇಶದಿಂದ ಫಂಡಿಂಗ್ ಬಂದಿದೆ? ಬಾಂಬ್ ತಯಾರಿಕೆ ಕಲಿತದ್ದು ಹಾಗೂ ಬಾಂಬ್ ತಯಾರಿಕೆಗೆ ಕಚ್ಚಾ ಸಾಮಗ್ರಿ ಪೂರೈಕೆ ಆಗಿದ್ದು ಎಲ್ಲಿಂದ ಎಂಬುದನ್ನು ಬಾಯಿ ಬಿಡಿಸಬೇಕಿದೆ.

ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಶಂಕಿತ ಉಗ್ರರಾದ ಮತೀನ್ ತಾಹಾ ಹಾಗೂ ಮುಸಾಮೀರ್ ನನ್ನು ಹೊರ ರಾಜ್ಯದಲ್ಲಿ ನಕಲಿ ಆಧಾರ್ ಕಾರ್ಡ್‌ ಬಳಿಸಿ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಕಳೆದ ತಿಂಗಳಿಂದ ತೀವ್ರ ಹುಡುಕಾಟ ಮಾಡುತ್ತಿದ್ದ ಎನ್‌ಐಎ ಪೊಲೀಸರಿಗೆ ಸುಳಿವು ಸಿಕ್ಕಿದ್ದೇ ತಡ, ಶಂಕಿತ ಉಗ್ರರನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ನಂತರ, ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ವಿಚಾರಣೆ ಮಾಡಿದ ನ್ಯಾಯಾಧೀಶರು ಎನ್‌ಐಎ ಪೊಲೀಸರ ವಾದವನ್ನು ಆಲಿಸಿ 10 ದಿನಗಳ ಕಾಲ ಬಂಧಿತ ಉಗ್ರರನ್ನು ಎನ್‌ಎಐ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

Latest Videos

undefined

ತೀರ್ಥಹಳ್ಳಿ: ರಾಮೇಶ್ವರಂ ಕೆಫೆ ಸ್ಫೋಟದ ಮಾಸ್ಟರ್‌ ಮೈಂಡ್‌ ತಾಹ ನಿವೃತ್ತ ಯೋಧರ ಪುತ್ರ..!

ನ್ಯಾಯಾಲಯದಿಂದ ಸೀದಾ ಜಯನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಅಲ್ಲಿಂದ ವಿಚಾರಣಾ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಶಂಕಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಿ ಹಲವು ವಿಚಾರಗಳನ್ನು ಬಾಯಿ ಬಿಡಿಸಬೇಕಿದೆ. ಸದ್ಯಕ್ಕೆ ಮಡಿವಾಳ ಎಫ್‌ಎಸ್‌ಎಲ್ ಕಡೆಗೆ ಉಗ್ರರನ್ನು ಕರೆದುಕೊಂಡು ಹೋಗಿ ಅಲ್ಲಿ ಎನ್‌ಐಎ ತಂಡದಿಂದ ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಶಂಕಿತ ಉಗ್ರರಿಂದ ಬಾಯಿ ಬಿಡಿಸಬೇಕಿರುವ ಅಂಶಗಳು:
ಶಂಕಿತ ಉಗ್ರರಾದ ಮಲೆನಾಡಿನ ಮತೀನ್ ತಾಹಾ ಹಾಗೂ ಮುಸಾಮೀರ್‌ಗೆ ವಿದೇಶದಿಂದ ಫಂಡಿಂಗ್ ಬಂದಿದ್ದು, ಅದನ್ನ ಕಳಿಸಿದವರು ಯಾರು?
ಬಾಂಬ್ ಸ್ಪೋಟಕಗಳನ್ನ ಎಲ್ಲಿಂದ ತಂದಿದ್ದಾರೆ?
ಬಾಂಬ್ ಬ್ಲಾಸ್ಟ್ ಹಿಂದಿನ ಸಂಚುಕೋರರು ಯಾರು.?
ಮಲೆನಾಡಿನ ಉಗ್ರರಿಗೆ ಫಂಡಿಂಗ್ ಮಾಡಿದ ವಿದೇಶಿಗರು ಯಾರು? 
ಕರ್ನಾಟಕದಲ್ಲಿ ತಲೆ‌ಮರೆಸಿಕೊಂಡಿದ್ದ ಶಂಕಿತ ಉಗ್ರರಿಗೆ 4 ವರ್ಷದಿಂದ ಆಶ್ರಯ ಕೊಟ್ಟವರು ಯಾರು?
ಬಂಧಿತ ಶಂಕಿತ ಉಗ್ರರು ಬಾಂಬ್ ತಯಾರಿಕೆ ಹೇಗೆ ಕಲಿತಿದ್ದರು.?
ಬೆಂಗಳೂರಿನಲ್ಲಿ ಬಾಂಬ್ ತಯಾರಿಸಲು ಕಚ್ಚಾ ವಸ್ತುಗಳು (Raw Meterials) ಎಲ್ಲಿಂದ‌ ತಂದಿದ್ದರು?
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆದ ನಂತರ ಶಂಕಿತರಿಗೆ ಆಶ್ರಯ ನೀಡಿದವರು ಯಾರು?
ಬಂಧಿತರಿಗೆ ಬಾಂಬ್ ಬ್ಲಾಸ್ಟ್ ಮಾಡಲು ಪ್ರಚೋದನೆ ಮಾಡಿದವರು ಯಾರು?

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಶಿಫ್ಟ್: ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ಧತೆ

ಈ ಮೇಲಿನ ಅಂಶಗಳನ್ನು ಬಂಧನವಾಗಿರುವ ಶಂಕಿತ ಉಗ್ರರಿಂದ ಬಾಯಿ ಬಿಡಿಸಬೇಕಿದೆ. ಇನ್ನು ಬಾಂಬ್ ಹಾಕಿದ ಆರೋಪಿಗಳು ದೇಶದಲ್ಲಿ ವಿವಿಧೆಡೆ ಬಾಂಬ್ ಸ್ಪೋಟ ಮಾಡಿದ ಪ್ರಕರಣಗಳಿಗೂ ಸಂಬಂಧ ಹೊಂದಿದ್ದರ ಬಗ್ಗೆ ಖಚಿತ ಮಾಡಿಕೊಳ್ಳುವುದು. ಇನ್ನು ಮುಂದಿನ ಯೋಜನೆಗಳೇನು ಎಂಬುದರ ಬಗ್ಗೆ ಉಗ್ರರಿಂದ ಸತ್ಯ ಕಕ್ಕಿಸವೇಕಿದೆ. ಈ ಎಲ್ಲ ಜವಾಬ್ದಾರಿಗಳನ್ನು ಎನ್‌ಐಎ ತಂಡದಿಂದ 10 ದಿನಗಳಲ್ಲಿ ಮಾಡಬೇಕಿದೆ. ಇದಾದ ನಂತರ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದರ ಹಿಂದಿನ ಉದ್ದೇಶ ತಿಳಿಯಲಿದೆ. ಜೊತೆಗೆ, ಶಂಕಿತ ಉಗ್ರರ ಮುಂದಿನ ದಾಳಿಯ ಕುರಿತಾದ ಯೋಜನೆಗಳನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗಲಿದೆ.

click me!