ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಲು ಬಂದವ ಕೇರಳ, ಉಡುಪಿ-ಮಂಗಳೂರು ಭಾಗದವನು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.2): ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ಟವರ್ ಡಂಪ್ ಅಧರಿಸಿ ಓರ್ವನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯ ಬೆನ್ನಲ್ಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಲು ಬಂದವ ಕೇರಳ, ಉಡುಪಿ-ಮಂಗಳೂರು ಭಾಗದವನು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೊರ ರಾಜ್ಯಾದಿಂದ ಕರಾವಳಿ ಭಾಗದ ಮೂಲಕ ಬಂದು ಹೋಗಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಹೀಗಾಗಿ ಈ ಹಿಂದೆ ಕೇರಳ ಮೂಲದ ಶಂಕಿತ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಹಿಂದೆ ನಡೆದ ಸ್ಪೋಟಗಳಲ್ಲಿ ಭಾಗಿಯಾಗಿದ್ದ ಸಂಘಟನೆಗಳ ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತೀಚೆಗೆ ಯಾವುದಾದ್ರು ನಿಷೇಧಿತ ಸಂಘಟನೆ ಆಕ್ಟಿವ್ ಅಗಿದ್ಯಾ ಎನ್ನುವ ಬಗ್ಗೆ ಕೂಡ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ, ಟವರ್ ಡಂಪ್ ಅಧರಿಸಿ ಓರ್ವ ಶಂಕಿತ ಬಂಧನ
ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದ್ದು, ಚೆನ್ನೈನಿಂದ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿದೆ. ಸುಮಾರು 10 ಜನರು ಇರುವ ಚೆನ್ನೈ ನ BDS ತಂಡ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓರ್ವ ಎಸ್ ಪಿ, ಓರ್ವ ಡಿವೈಎಸ್ ಪಿ, ಇಬ್ಬರು ಇನ್ಸ್ಪೆಕ್ಟರ್ ರ್ಯಾಂಕ್ ನ ಒಳಗೊಂಡ ತಂಡ ಭೇಟಿ ನೀಡಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ತಮಿಳುನಾಡಿನಿಂದ ಬಂದಿದ್ದು ತನಿಖೆಯಲ್ಲಿ ಭಾಗಿಯಾಗಿದ್ದಾರೆ.
ಬಾಂಬ್ ತಯಾರಿಕೆಗೆ ಬಳಸಿರುವ ವಸ್ತುಗಳಾದ ಬ್ಯಾಟರಿ, ಸರ್ಕ್ಯೂಟ್, ಟೈಮರ್, ಡಿಟೋನೇಟರ್ ಘಟನಾ ಸ್ಥಳದಲ್ಲಿ ಸಿಕ್ಕಿದ್ದು, ಇವೆಲ್ಲವೂ IED ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳಾಗಿವೆ. ಸದ್ಯ ಇವುಗಳನ್ನು ಜಪ್ತಿ ಮಾಡಿ FSL ಗೆ ಪೊಲೀಸರು ರವಾನಿಸಿದ್ದಾರೆ. ಹೀಗಾಗಿ ಈ ಹಿಂದೆ ನಡೆದ ಬ್ಲಾಸ್ಟ್‌ಗಳಿಗೂ ಈ ಘಟನೆ ಹೋಲುವಂತಿದೆಯೇ ಎಂದೆಲ್ಲ ತನಿಖೆ ನಡೆಯುತ್ತಿದೆ.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
ಸರಿಯಾಗಿ ನಿನ್ನೆ ಬೆಳಗ್ಗೆ 11.34 ಗಂಟೆಗೆ ದಿ ರಾಮೇಶ್ವರಂ ಕೆಫೆಗೆ ಉಗ್ರ ಎಂಟ್ರಿ ಕೊಟ್ಟಿದ್ದು, ಆನ್ ಲೈನ್ ಪೇಮೆಂಟ್ ಮಾಡಿದ್ರೆ ಸಿಕ್ಕಿ ಹಾಕಿಕೊಳ್ಳುವ ದೃಷ್ಠಿಯಿಂದ ನಗದು ಹಣ ಕೊಟ್ಟೆ ರೆವಾ ಇಡ್ಲಿ ಖರೀದಿ ಮಾಡಿದ್ದ. ಬಳಿಕ ಕಪ್ಪು ಬಣ್ಣದ ಬ್ಯಾಗ್ ಒಳಗೆ ಇಟ್ಟು ಹೋಗಿದ್ದ ಶಂಕಿತ ಉಗ್ರ ಟೈಮರ್ ಬಾಂಬ್ ಇಟ್ಟು ಸ್ಪೋಟಿಸಿದ್ದಾನೆ. ಸ್ಪೋಟದ ತೀವ್ರತೆ ರಾಮೇಶ್ವರಂ ಕೆಫೆಯ ಚಾವಣಿಯ ಶೀಟ್ ಗೆ ಬಡಿದ ಕಾರಣ ಗ್ರಾಹಕರು ಇರುವ ಕಡೆ ಸ್ಪೋಟದ ತೀವ್ರತೆ ಬಂದಿಲ್ಲ. ಹೀಗಾಗಿ ಸಾವು ನೋವು ಹೆಚ್ಚು ಸಂಭವಿಸಿಲ್ಲ.
ಕೆಪ್ಪು ಬಣ್ಣದಲ್ಲಿ ಬಾಂಬ್ ಸ್ಫೋಟದ ತೀವ್ರತೆ ಮೇಲ್ಬಾಗಕ್ಕೆ ಚಿಮ್ಮಿದೆ. ಆ ಸ್ಫೋಟದ ತೀವ್ರತೆ ಅಡ್ಡಡ್ಡವಾಗಿ ಸ್ಫೋಟಿಸಿದ್ರೆ,10 ರಿಂದ 15 ಸಾವು ಸಂಭವಿಸುತ್ತಿತ್ತು. ಸ್ಪೋಟದ ರಭಸಕ್ಕೆ ರಾಮೇಶ್ವರಂ ಕೆಫೆಯ ಶೀಟ್ ಪುಲ್ ಡ್ಯಾಮೇಜ್ ಆಗಿದೆ. ಮತ್ತೊಂದು ಕಡೆ ಕೆಫೆಗೆ ಅಳವಡಿಸಿದ್ದ ಗಾಜುಗಳು ಪುಡಿ ಪುಡಿಯಾಗಿವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.