ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!

Published : Dec 09, 2022, 08:13 PM IST
ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!

ಸಾರಾಂಶ

ತಂದೆ ಕೊಲೆಗೆ ಪ್ರತೀಕಾರವಾಗಿ ಎದುರಾಳಿ ತಂಡದ ಮೂವರನ್ನ ಶಿವಶಂಕರ್ ರೆಡ್ಡಿ ಕೊಲೆ ಮಾಡಿದ್ದನಂತೆ. ಮೂವರ ಹತ್ಯೆಗೆ ಪ್ರತೀಕಾರವಾಗಿ ಶಿವಶಂಕರ್ ರೆಡ್ಡಿ ಮೇಲೆ ಅಟ್ಯಾಕ್ ಮಾಡಿರುವ ಶಂಕೆ. 

ಬೆಂಗಳೂರು(ಡಿ.09): ಬೆಂಗಳೂರಿನಲ್ಲಿ ಮದನಪಲ್ಲಿ ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ. ರೌಡಿ ಶಿವಶಂಕರ್ ರೆಡ್ಡಿ ಮೇಲಿನ ದಾಳಿಯ ಹಿಂದೆ ಫ್ಯಾಮಿಲಿ ರಿವೆಂಜ್ ಇದೆ ಎಂಬ ಸತ್ಯ ಬಯಲಾಗಿದೆ. 

2011 ರಲ್ಲಿ ಶಿವಶಂಕರ್ ರೆಡ್ಡಿ ತಂದೆ ಗ್ಯಾಂಗ್‌ವೊಂದು ಕೊಲೆಗೈದಿತ್ತು. ತಂದೆ ಕೊಲೆಗೆ ಪ್ರತೀಕಾರವಾಗಿ ಎದುರಾಳಿ ತಂಡದ ಮೂವರನ್ನ ಶಿವಶಂಕರ್ ರೆಡ್ಡಿ ಕೊಲೆ ಮಾಡಿದ್ದನಂತೆ. ಮೂವರ ಹತ್ಯೆಗೆ ಪ್ರತೀಕಾರವಾಗಿ ಶಿವಶಂಕರ್ ರೆಡ್ಡಿ ಮೇಲೆ ಅಟ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರದ ಮದನಪಲ್ಲಿಯಿಂದ ಹಿಂಬಾಲಿಸಿ ಬಂದು ಶಿವಶಂಕರ್ ರೆಡ್ಡಿ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪುರ ಪೊಲೀಸರು ಈಗಾಗಲೇ ಮದನಪಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ.  

ಒಂದು ರಾತ್ರಿ ಎರಡೆರಡು ಬಾರಿ ಸೆಕ್ಸ್ ನಿರಾಕರಿಸಿದ ಪತ್ನಿಯ ಹತ್ಯೆ, ಗಂಡನ ನಾಟಕಕ್ಕೆ ಪೊಲೀಸರೇ ಸುಸ್ತು!

ಫೈರಿಂಗ್ ಗ್ಯಾಂಗ್ ಪತ್ತೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ. ಮದನಪಲ್ಲಿಯಲ್ಲಿ ಹಳೇ ಪ್ರಕರಣಗಳ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮದನಪಲ್ಲಿ ಸೇರಿದಂತೆ ಹಲವಡೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. 

ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್

ಶಿವಶಂಕರ್ ರೆಡ್ಡಿ 17ನೇ ವಯಸ್ಸಿಗೆ ಮೊದಲ ಕೊಲೆಯಲ್ಲಿ ಭಾಗಿಯಾಗಿದ್ದನು. ಇದೇ ಕಾರಣಕ್ಕೆ ಶಿವಶಂಕರ್ ರೆಡ್ಡಿ ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಮದನಪಲ್ಲಿಯ ಪೆದ್ದಪಲ್ಲಿ ಶಿವಾರೆಡ್ಡಿ ಅಲಿಯಾಸ್ ಶಿವಶಂಕರ್ ರೆಡ್ಡಿಯನ್ನ ಹೊಡೆಯಲು ಆಗಲ್ಲ ಅಂತ ಬೆಂಗಳೂರಿನಲ್ಲಿ ಅಟ್ಯಾಕ್ ಮಾಡಲಾಗಿತ್ತು. ಸುಪಾರಿ ಕಿಲ್ಲರ್ಸ್ ಮೂಲಕ‌ ಕೊಲೆಗೆ ಯತ್ನಿಸಿರುವ ಸಾಧ್ಯತೆ ಇದೆ. ಕೊಲೆ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಶಿವಶಂಕರ್ ರೆಡ್ಡಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದನಂತೆ. ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಘಟಕದಲ್ಲಿ ಶಿವಶಂಕರ್ ರೆಡ್ಡಿ ಸಕ್ರಿಯವಾಗಿದ್ದಾನೆ ಅಂತ ತಿಳಿದು ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!