ಅಶ್ಲೀಲ ವೆಬ್‌ಸೈಟ್‌ಗಳಿಗೆ ವಿದ್ಯಾರ್ಥಿನಿಯರ ಫೋಟೋ ಅಪ್‌ಲೋಡ್‌: ಇಬ್ಬರ ಬಂಧನ

Kannadaprabha News   | Asianet News
Published : Jul 31, 2020, 07:31 AM IST
ಅಶ್ಲೀಲ ವೆಬ್‌ಸೈಟ್‌ಗಳಿಗೆ ವಿದ್ಯಾರ್ಥಿನಿಯರ ಫೋಟೋ ಅಪ್‌ಲೋಡ್‌: ಇಬ್ಬರ ಬಂಧನ

ಸಾರಾಂಶ

ಅಶ್ಲೀಲ ವೆಬ್‌ಸೈಟ್‌ಗೆ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳು ಸೇರಿ 30ಕ್ಕೂ ಹೆಚ್ಚಿನ ಜನರ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದ ಆರೋಪಿಗಳು|ಈ ಬಗ್ಗೆ ಸಿಇಎನ್‌ ಠಾಣೆಗೆ ದೂರು ನೀಡಿದ್ದ ಸಹಾಯಕ ಪ್ರಾಧ್ಯಾಪಕಿ| ದೂರಿನ ಮೇರೆಗೆ ತನಿಖೆಗಿಳಿದ ಸೈಬರ್‌ ಕ್ರೈಂ ಪೊಲೀಸರು, ದೂರು ದಾಖಲಾದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ| 

ಬೆಂಗಳೂರು(ಜು.31): ಅಶ್ಲೀಲ ವೆಬ್‌ಸೈಟ್‌ಗಳಿಗೆ ತನ್ನ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ವಿದ್ಯಾರ್ಥಿಗಳ ಫೋಟೋಗಳನ್ನು ಆಪ್‌ಲೋಡ್‌ ಮಾಡಿದ್ದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹಾಗೂ ಆತನ ಗೆಳೆಯನನ್ನು ಸಿಸಿಬಿ ಸೈಬರ್‌ ಕ್ರೈಂ ಹಾಗೂ ಸಿಇಎನ್‌ ಠಾಣೆಗಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಸಿ.ವಿ.ರಾಮನ್‌ನಗರದ ಅಜಯ್‌ ತನಿಕಾಚಲಂ (37) ಮತ್ತು ರಾಜಾಜಿನಗರದ ವಿಶ್ವಕ್‌ ಸೇನ್‌ (27) ಬಂಧಿತರು. ಅಶ್ಲೀಲ ವೆಬ್‌ಸೈಟ್‌ಗೆ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳು ಸೇರಿ 30ಕ್ಕೂ ಹೆಚ್ಚಿನ ಜನರ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದರು. ಈ ಬಗ್ಗೆ ಸಿಇಎನ್‌ ಠಾಣೆಗೆ ಸಹಾಯಕ ಪ್ರಾಧ್ಯಾಪಕಿ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಸೈಬರ್‌ ಕ್ರೈಂ ಪೊಲೀಸರು, ದೂರು ದಾಖಲಾದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಬಲೆ ಹಾಕಿದ್ದಾರೆ.

ಬೆಂಗ್ಳೂರು ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಪೋರ್ನ್ ಸೈಟ್ಸ್‌ನಲ್ಲಿ ಪತ್ತೆ..!

ತಮಿಳುನಾಡು ಮೂಲದ ಎಂಬಿಎ ಪದವೀಧರ ಅಜಯ್‌, ವ್ಯಾಸಂಗ ಮುಗಿದ ಬಳಿಕ ಸಿ.ವಿ.ರಾಮನ್‌ ನಗರ ಸಮೀಪ ಸಾಫ್ಟ್‌ವೇರ್‌ ಕಂಪನಿ ಆರಂಭಿಸಿದ್ದ. ಮೊದಲಿನಿಂದ ಆತನಿಗೆ ಅಶ್ಲೀಲ ವೆಬ್‌ಸೈಟ್‌ ನೋಡುವ ಚಟವಿತ್ತು. ಇನ್‌ಸ್ಟಾಗ್ರಾಂನಲ್ಲಿ ಯುವತಿ ಭಾವಚಿತ್ರ ಬಳಸಿ ಖಾತೆ ಹೊಂದಿದ್ದ ವಿಶ್ವಕ್‌ಗೆ ಕೆಲ ದಿನಗಳ ಹಿಂದೆ ಅಜಯ್‌ ಪರಿಚಯವಾಗಿದೆ. ವಿಶ್ವಕ್‌ನನ್ನು ಯುವತಿ ಎಂದೇ ಭಾವಿಸಿ ಅಜಯ್‌ ಚಾಟಿಂಗ್‌ ಮಾಡಿದ್ದ. ತೀರಾ ಖಾಸಗಿ ಮಾತುಕತೆಗಳು ಸಹ ಅವರಿಬ್ಬರ ಮಧ್ಯೆ ನಡೆದಿದ್ದವು.

ಆಗ ‘ನಿನ್ನ ಬಳಿ ಹುಡುಗಿಯರ ಫೋಟೋಗಳಿದ್ದರೆ ಕೊಡು. ನಾನು ಪೋರ್ನ್‌ ವೆಬ್‌ಸೈಟ್‌ಗೆ ಹಾಕುತ್ತೇನೆ’ ಎಂದು ಅಜಯ್‌ ಪುಸಲಾಯಿಸಿದ್ದ. ಈ ಮಾತು ಕೇಳಿದ ವಿಶ್ವಕ್‌, ತನ್ನ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಇದ್ದ ಫೋಟೋಗಳನ್ನು ಗೆಳೆಯನಿಗೆ ಕಳುಹಿಸಿದ್ದ. ತರುವಾಯ ಅವುಗಳನ್ನು ಪೋರ್ನ್‌ ವೆಬ್‌ಸೈಟ್‌ಗಳಿಗೆ ಅಜಯ್‌ ಅಪ್‌ಲೋಡ್‌ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಫೋಟೋಗಳು ವೈರಲ್‌ ಆಗಿದ್ದವು. ಇದನ್ನು ಗಮನಿಸಿದ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಧ್ಯಾಪಕರ ಗಮನಕ್ಕೆ ತಂದಿದ್ದರು. ತಕ್ಷಣವೇ ಸಹಾಯಕ ಪ್ರಾಧ್ಯಾಪಕಿ, ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿ ವಿಳಾಸ ಮೂಲದ ಆರೋಪಿಗಳನ್ನು ಬಲೆಗೆ ಹಾಕಿದ್ದಾರೆ. ಠಾಣೆಯಲ್ಲಿ ಪೊಲೀಸರು, ಅಜಯ್‌ಗೆ ‘ಏ ನೋಡೋ ನಿನ್ನ ಗಲ್‌ರ್‍ಫ್ರೆಂಡ್‌ ಇವನೇ’ ಎಂದೂ ವಿಶ್ವಕ್‌ನನ್ನು ತೋರಿಸಿದಾಗ ಬೆಸ್ತು ಬಿದ್ದಿದ್ದಾನೆ ಎಂದು ಮೂಲಗಳು ಹೇಳಿವೆ.

ಕಂಪನಿ ನಷ್ಟದಿಂದ ಉಂಟಾದ ಬೇಸರದಲ್ಲಿ ಈ ಕೃತ್ಯ ಎಸಗಿದೆ. ವಿಶ್ವಕ್‌ನನ್ನು ನಾನು ಹುಡುಗಿಯೇ ಭಾವಿಸಿದ್ದೆ. ಯಾವತ್ತೂ ನಾವು ಮಾತನಾಡಿರಲಿಲ್ಲ’ ಎಂದು ಅಜಯ್‌ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ