ಪರೀಕ್ಷೆಯಲ್ಲಿ ಮೊಬೈಲ್ ನೋಡಿಕೊಂಡು ಕಾಪಿ ಮಾಡುತ್ತಿದ್ದ ವೇಳೆ ಮೊಬೈಲ್ ಕಸಿದುಕೊಂಡ ಹೊರಗೆ ಕಳಿಸಿದ ಉಪನ್ಯಾಸಕ. ಮನನೊಂದ ವಿದ್ಯಾರ್ಥಿ 8ನೇ ಮಹಡಿಯಿಂದ ಬಿದ್ದು ಸಾವು.
ಬೆಂಗಳೂರು (ಜು.17): ಬೆಂಗಳೂರಿನ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮೊಬೈಲ್ ನೋಡಿಕೊಂಡು ಕಾಪಿ ಮಾಡುತ್ತಿದ್ದುದನ್ನು ಗುರುತಿಸಿದ ಉಪನ್ಯಾಸಕರು ಆತನ ಮೊಬೈಲ್ ಕಸಿದುಕೊಂಡು ಹೊರಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಪಿಇಎಸ್ ಕಾಲೇಜಿನ 8ನೇ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಆದಿತ್ಯ ಪ್ರಭು (19) ಎಂದು ಗುರುತಿಸಲಾಗಿದೆ. ಬಿಇ ವಿದ್ಯಾರ್ಥಿ ಆಗಿರುವ ಆದಿತ್ಯ ಪ್ರಭು, ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಕಾಪಿ ಹೊಡೆಯುತ್ತಿದ್ದನು. ಈ ವೇಳೆ ಕಾಲೇಜಿನ ಉಪನ್ಯಾಸಕರು ಮೊಬೈಲ್ ಕಿತ್ತುಕೊಂಡು ಹೊರಗೆ ಕಳುಹಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಉಪನ್ಯಾಸಕರು ವಿದ್ಯಾರ್ಥಿ ಆದಿತ್ಯ ಪ್ರಭು ಅವರ ತಾಯಿಗೆ ಕರೆ ಮಾಡಿ ಕಾಪಿ ಹೊಡೆಯುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಾಲೇಜಿನ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರ್ಯಾದೆ ಹೋಗುತ್ತೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
undefined
Bengaluru: ಪಾದಚಾರಿ ಮಹಿಳೆ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ
ಮಂಗಳೂರು ಮೂಲದ ವಿದ್ಯಾರ್ಥಿ: ಇನ್ನು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಆದಿತ್ಯಪ್ರಭು ಮಂಗಳೂರಿನ ಮೂಲದವನಾಗಿದ್ದಾನೆ. ಬಿಇ ದ್ವಿತೀಯ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದನು. ಆದರೆ, ಪರೀಕ್ಷೆಯಲ್ಲಿ ನಡೆದ ಘಟನೆಯಿಂದ ದುರ್ಘಟನೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಈ ವಿಚಾರವನ್ನು ಮೃತ ವಿದ್ಯಾರ್ಥಿಯ ಪೋಷಕರಿಗೂ ತಿಳಿಸಲಾಗಿದೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಪೋಷಕರಿಗೆ ಹಸ್ತಾಂತರ ಮಾಡಲಾಗುವುದು ಎಂದು ದಕ್ಷಿಣ ವಲಯದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಅಸ್ಸಾಂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಬೆಂಗಳೂರು (ಜು.17) : ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ ಯುವತಿಯನ್ನು ಪ್ರಿಯಕರನೇ ರೂಮಿನಲ್ಲಿ ಕೂಡಿಹಾಇ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸ್ಸಾಂ ಮೂಲದ 20 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪ್ರಿಯಕರ ಶಾಹೀದ್ ಉದ್ದೀನ್ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೆಲಸದ ನಿಮಿತ್ತ ಪರಿಚಿತನಾದ ನಂತರ ದೈಹಿಕ ಸಂಪರ್ಕ: ಅಸ್ಸಾಂ ಮೂಲದ ಸಂತ್ರಸ್ತೆ ಮತ್ತು ಆರೋಪಿ ಶಾಹೀದ್ ಕಳೆದ ವರ್ಷ ಪಾರ್ಕ್‌ನಲ್ಲಿ ಪರಸ್ಪರ ಪರಿಚಿತರಾಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಪ್ರೀತಿಸಲು ಆರಂಭಿಸಿದ್ದರು. ಆರೋಪಿ ಶಾಹೀದ್ ಮದುವೆ ಆಗುವುದಾಗಿ ಸಂತ್ರಸ್ತೆಯನ್ನು ನಂಬಿಸಿ ಕಳೆದ ಜೂನ್‌ನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿದ್ದ. ದೊಡ್ಡ ನಾಗಮಂಗಲದ ಬಾಡಿಗೆ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಿ, ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದನು.
Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇತ ಊರು ಬಿಟ್ಟ ಆರೋಪಿ
ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ: ಕೆಲ ದಿನಗಳ ಬಳಿಕ ಶಾಹೀದ್‌ಗೆ ಬೇರೆ ಹೆಂಗಸಿನ ಜತೆಗೆ ಮದುವೆ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಬೆಲ್ಟ್‌ನಿಂದ ಹಲ್ಲೆ ನಡೆಸಿ ಮನೆಯ ರೂಮ್‌ನಲ್ಲಿ ಕೂಡಿ ಹಾಕಿದ್ದ. ಬಳಿಕ ನಾಲ್ವರು ಅಪರಿಚಿತರನ್ನು ಮನೆಗೆ ಕರೆಸಿ ಸಂತ್ರಸ್ತೆಯ ರೂಮ್‌ಗೆ ಕಳುಹಿಸಿದ್ದ. ಈ ವೇಳೆ ಸಂತ್ರಸ್ತೆ ಎಷ್ಟೇ ಬೇಡಿಕೊಂಡರೂ ಬಿಡದೆ ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವೇಶ್ಯಾವಾಟಿಕೆ ದಂಧೆಗೆ ಇಳಿಸುವ ಉದ್ದೇಶದಿಂದ ಆರೋಪಿ ಶಾಹೀದ್ ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಗಿ ಮದುವೆ ಆಗುವುದಾಗಿ ನಂಬಿಸಿ ಅಸ್ಸಾಂನಿಂದ ಬೆಂಗಳೂರಿಗೆ ಕರೆತಂದಿರುವುದು ಗೊತ್ತಾಗಿದೆ.