ಆನ್‌ಲೈನ್ ಜಾಬ್ ಆಮಿಷವೊಡ್ಡಿ 40 ಕೋಟಿ ಪಂಗನಾಮ: ಯೂನಸ್, ಅರ್ಬಾಜ್, ಖಲಿಮುಲ್ಲಾ ಬಂಧನ

By Sathish Kumar KHFirst Published Dec 3, 2023, 2:55 PM IST
Highlights

ಆನ್‌ಲೈನ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯೋಗ ಆಕಾಂಕ್ಷಿಗಳಿಗೆ ಹಲವು ಟಾಸ್ಕ್‌ ಕೊಟ್ಟು ಕೋಟಿ ಕೋಟಿ ರೂ. ವಂಚನೆ ಮಾಡಿದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರು (ಡಿ.03): ಬೆಂಗಳೂರಿನಲ್ಲಿ ಕಷ್ಟಪಟ್ಟು ದುಡಿದವರಿಗೆ ಹಣವನ್ನು ಪಡೆಯುವುದು ದೊಡ್ಡ ಸವಾಲಾಗಿರುತ್ತದೆ. ಅಂಥದ್ದರಲ್ಲಿ ನೀವು ಆನ್‌ಲೈನ್‌ನಲ್ಲಿ ಕೇವಲ ಲೈಕ್ ಬಟನ್ ಒತ್ತಿ, ಮೆಸೇಜ್‌ ಫಾರ್ವರ್ಡ್‌ ಮಾಡುವ ಕೆಲಸ ಕೊಟ್ಟು ಸಾವಿರಾರು ರೂ. ಸಂಬಳ ಕೊಡಿಸುತ್ತೇವೆ ಎಂದು ಹೇಳಿಕೊಂಡು ನೂರಾರು ಜನರಿಂದ ಕೋಟಿ ಕೋಟಿ ರೂ. ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ನೀವು ಮನೆಯಲ್ಲಿದ್ದುಕೊಂಡೇ ಆನ್‌ಲೈನ್‌ನಲ್ಲಿ ಕೆಲಸ ಮಾಡಿಕೊಂಡು ಸಾವಿರಾರು ರೂ. ಹಣ ಗಳಿಸಬಹುದು ಎಂಬ ಲಿಂಕ್ ಅನ್ನು ಕೊಡಲಾಗುತ್ತದೆ. ಈ ಲಿಂಕ್‌ ಒತ್ತಿದಾಕ್ಷಣ ನಿಮ್ಮ ಮೊಬೈಲ್‌ ನಂಬರ್‌ನ ವಾಟ್ಸಾಪ್ ಮತ್ತು ಟೆಲಿಗ್ರಾಂ ನಲ್ಲಿ ಮೆಸೇಜ್‌ಗಳು ಬರುತ್ತವೆ. ಅವರು ಕಳುಹಿಸುವ ಕೆಲವು ಸಾಮಾಜಿಕ ಜಾಲತಾಣದ ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಂ ಲಿಂಕ್‌ಗಳನ್ನು ಲೈಕ್‌ ಮಾಡುವುದಕ್ಕೆ ಹೇಳುತ್ತಾರೆ. ಆಗ ನೀವು ಲೈಕ್ ಮಾಡಿದಾಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ 150 ರೂ. ಗಳಿಂದ 500 ರೂ. ಹಣವನ್ನು ಹಾಕುತ್ತಾರೆ.

ರಾಮನಗರ: ಪಾರ್ಟ್ ಟೈಮ್ ಜಾಬ್ ನಂಬಿ 11 ಲಕ್ಷ ಕಳೆದುಕೊಂಡ ಯುವಕ

ಮೊದಲು ಹಣ ಕೊಡುತ್ತಾರೆಂಬ ಆಸೆಯನ್ನು ಒಡ್ಡುವ ಅಸಾಮಿಗಳು ನಂತರದ ಹಂತದಲ್ಲಿ ತಮ್ಮ ಅಸಲಿ ಆಟವನ್ನು ಶುರು ಮಾಡುತ್ತಾರೆ. ಆನ್‌ಲೈನ್ ಜಾಬ್ ಮಾಡುವ ಅಭ್ಯರ್ಥಿಗಳಿಗೆ ನೀವು ಎರಡನೇ ಹಂತಕ್ಕೆ ಸೆಲೆಕ್ಟ್ ಆಗಿದ್ದೀರಿ, ನಿಮ್ಮನ್ನು ನಮ್ಮ ಗ್ರೂಪ್‌ಗೆ ಸೇರಿಸುತ್ತೇವೆ ಎಂದು ಹೇಳುತ್ತಾರೆ. ಇನ್ನು ಕೆಲಸದ ಗುಂಪಿಗೆ ಸೇರಲು ತಲಾ 5 ರಿಂದ 10 ಸಾವಿರ ರೂ. ಹಣವನ್ನು ಹೂಡಿಕೆ ಮಾಡಬೇಕು ಎಂದು ಹೇಳುತ್ತಿದ್ದರು. ನಂತರ ಅವರಿಗೆ ಕೆಲವು ಟಾಸ್ಕ್‌ಗಳನ್ನು ನೀಡಿ ನಿಮ್ಮ ಖಾತೆಗೆ 50 ಸಾವಿರ ರೂ. ಜಮೆಯಾಗಿದೆ ಎಂದು ನಕಲಿ ರಿಸಿಪ್ಟ್ ನೀಡುತ್ತಿದ್ದರು. 

ಇದಾದ ನಂತರ, ನಿಮ್ಮ ಹಣವನ್ನು ಪುನಃ ಹೂಡಿಕೆ ಮಾಡಿ ಅದನ್ನು ಕೆಲವು ಟಾಸ್ಕ್‌ ಕೊಡುತ್ತಿದ್ದರು. ನಂತರ ಅದನ್ನು ನೀವು ಪಾಸಾಗಿದ್ದೀರಿ 5 ಲಕ್ಷ ರೂ. ನಿಮ್ಮ ಖಾತೆಗೆ ಹಣ ಜಮೆಯಾಗಿದೆ. ಆದರೆ, ಈ ಹಣವನ್ನು ನೀವು ಡ್ರಾ ಮಾಡಿಕೊಳ್ಳಬೇಕಾದರೆ ಪುನಃ 50 ಸಾವಿರ ರೂ. ಹಣ ಕಟ್ಟಿಸಿಕೊಳ್ಳುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಪುನಃ ಟಾಸ್ಕ್‌ ಕೊಟ್ಟು ಹಣವನ್ನು ಪಾವತಿಸಿಕೊಳ್ಳುತ್ತಾ ನಿಮ್ಮ ಖಾತೆಗೆ 10 ಲಕ್ಷ ರೂ. ಹಣ ಜಮೆಯಾಗಿದೆ ಎಂದು ಹೇಳುತ್ತಾರೆ. ಕೊನೆಗೆ ನಿಮ್ಮ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳಿ ಹಣವನ್ನು ಹಾಕಿ ಎಂದು ಹೇಳುತ್ತಾರೆ. ಆಗ ದೊಡ್ಡ ಮೊತ್ತದ ಹಣ ಹಾಕಿದರೆ ಅವರನ್ನು ಪುನಃ ವಂಚನೆ ಮಾಡುತ್ತಾರೆ. ಇನ್ನು ಬಹುತೇಕರು 50 ಸಾವಿರ ರೂ. ಹಣವನ್ನು ಕಳೆದುಕೊಂಡು ಅಲ್ಲಿಗೆ ಇದು ವಂಚನೆ ಎಂದು ಸುಮ್ಮನಾಗುತ್ತಿದ್ದರು.

ಕುಡಿದ ಮತ್ತಿನಲ್ಲಿ ಪಾಕಿಸ್ತಾನ ಪರ ಘೋಷಣೆ;ಇಬ್ಬರ ಬಂಧನ

ಈ ಆನ್‌ಲೈನ್ ಜಾಬ್ ವಂಚನೆಗೆ ಸಂಬಂಧಿಸಿದಂತೆ ಯಲಹಂಕ ಸೆನ್ ಪೊಲೀಸರು ಸೈಯದ್ ಯೂನಸ್ ,ಸೈಯದ್ ಅರ್ಬಾಜ್, ಮೊಹಮ್ಮದ್ ಖಲಿಮುಲ್ಲಾ, ಇಬ್ರಾಹಿಮ್ ಕರ್ನೂಲ್ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧೆಡೆ 305ಕ್ಕೂ ಅಧಿಕ ಜನರಿಗೆ ಇದೇ ರೀತಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಇದೇ ರೀತಿ ಆರೋಪಿಗಳು ಬರೋಬ್ಬರಿ 40 ಕೋಟಿ ರೂ. ವಂಚಿಸಿರೋದು ಬೆಳಕಿಗೆ ಬಂದಿದೆ. ಬಂಧಿತರಿಂದ 4 ಮೊಬೈಲ್, 2 ಪಾಸ್ ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್‌ಗಳು, ಬಯೋಮೆಟ್ರಿಕ್ ಸಾಧನ‌, ಕಂಪನಿ ಸೀಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!