ಬೆಂಗಳೂರು ಪಾದಚಾರಿ ಮಹಿಳೆಯರ ಮೇಲೆ ಹರಿದ ಲಾರಿ: ರಸ್ತೆಗೆ ಅಪ್ಪಚ್ಚಿಯಾದ ದೇಹಗಳು

By Sathish Kumar KH  |  First Published Nov 2, 2023, 2:44 PM IST

ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೋಗಲು ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಬೆಂಗಳೂರು/ಆನೇಕಲ್ (ನ.02): ಸಿಲಿಕಾನ್‌ ಸಿಟಿ ಬೆಂಗಳೂರಿನ ಹೊರವಲಯ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೋಗಲು ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬೃಹತ್‌ ಲಾರಿ ಹರಿದು ಇಡೀ ದೇಹಗಳು ಛಿದ್ರವಾಗಿ ರಸ್ತೆಗೆ ಅಪ್ಪಚ್ಚಿಯಾದ ದುರ್ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳು ವಾಹನ ಸಂಚಾರಕ್ಕೆ ಮಾತ್ರ ಸೀಮಿತವಾಗಿವೆ ಎನ್ನುವಷ್ಟರ ಮಟ್ಟಿಗೆ ವಾಹನ ಸಂಚಾರ ಇರುತ್ತದೆ. ಪ್ರತಿವರ್ಷ ಸಾವಿರಾರು ಪಾದಚಾರಿಗಳು ವೇಗವಾಗಿ ಆಗಮಿಸುವ ವಾಹನಗಳಿಗೆ ಸಿಕ್ಕು ಬಲಿಯಾಗುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಎಲ್ಲ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಮದು ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಅದೇ ರೀತಿ, ಬೆಂಗಳುರಿನ ಹೊರ ವಲಯ ಹೊಸೂರು ರಸ್ತೆಯ ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿ ಇಬ್ಬರು ಮಹಿಳೆಯರ ಮೇಲೆ ಲಾರಿ ಹರಿದಿದ್ದು, ಮಹಿಳೆಯರ ದೇಹಗಳು ಛಿದ್ರಗೊಂಡಿವೆ. ಒಂದು ಮಹಿಳೆಯ ದೇ ರಸ್ತೆಗೆ ಅಪ್ಪಚ್ಚಿಯಾಗಿದ್ದು, ಇನ್ನಬ್ಬ ಮಹಿಳೆಯ ಅರ್ಧ ದೇಹವೇ ತುಂಡಾಗಿ ಹೋಗಿದೆ. 

Tap to resize

Latest Videos

undefined

Bengaluru ನಾಲ್ಕು ದಿನ ಆಹಾರವಿಲ್ಲದೇ ಬಳಲಿದ್ದ ಚಿರತೆ ಎದೆಗೆ ಗುಂಡಿಟ್ಟು ಕೊಂದ ಅರಣ್ಯ ಇಲಾಖೆ: ಈ ಸಾವು ನ್ಯಾಯವೇ?

ರಸ್ತೆ ದಾಟುವಾಗ ಏಕಾಏಕಿ ಬಂದ ಲಾರಿ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ರಸ್ತೆಯಲ್ಲಿ ಬಿದ್ದಿದ್ದಾರೆ. ಆದರೂ, ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಲಾರಿಯ ಚಕ್ರಗಳು ಮಹಿಳೆಯರ ದೇಹದ ಮೇಲೆ ಹರಿದಿವೆ. ಈ ಭೀಕರ ಅಪಘಾತದಲ್ಲಿ ಲಾರಿ ಹರಿದು‌ ಎರಡು ದೇಹಗಳು ಛಿದ್ರಗೊಂಡಿದ್ದು, ಇಬ್ಬರೂ ಮಹಿಳೆಯರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಮಹಿಳೆಯರು ವೈಟ್ ಪೀಲ್ಡ್ ನಿಂದ ಬಂದಿದ್ದರೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಇವರು ರಸ್ತೆಯ ಇನ್ನೊಂದು ಬದಿಯಲ್ಲಿದ್ದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ತೆರಳುತ್ತಿದ್ದಾರೆ ದುರ್ಘಟನೆ ನಡೆದಿದೆ.

ನಾರಾಯಣ ಹೃದಯಾಲಯದ ಬಳಿ ರೋಗಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟಿ ಹೋಗಲು ಅನುಕೂಲ ಆಗಲೆಂದು ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಇನ್ನು ಮೆಟ್ಟಿಲು ಹತ್ತುವುದಕ್ಕೂ ಸಮಸ್ಯೆ ಆಗಿದ್ದು, ಎಸ್ಕಲೇಟರ್ ಇಲ್ಲದ ಕಾರಣ ಬಹುತೇಕರು ರಸ್ತೆಯನ್ನು ದಾಟಿಕೊಂಡೇ ಹೋಗುತ್ತಾರೆ. ಹೀಗಾಗಿ, ಅನೇಕರು ರಸ್ತೆ ದಾಟುವಾಗ ವಾಹನಗಳಿಗೆ ಸಿಕ್ಕಿ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಯು ಕಾಳಜಿವಹಿಸಿ ಎಸ್ಕಲೇಟರ್‌ ನಿರ್ಮಾಣ ಮಾಡಿದ ಪಾದಚಾರಿಗಳ ಸಾವನ್ನು ತಡೆಗಟ್ಟಬಹುದು.

ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕದ್ದ ಕಾರು ಚಾಲಕ: ಉಂಡ ಮನೆಗೇ ಕನ್ನ ಹಾಕಿದ ಸಂತೋಷ್‌!

ಪ್ರತಿನಿತ್ಯ ರಸ್ತೆ ದಾಟುವ ಸಾವಿರಾರು ಜನರು: ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಮತ್ತು ಬಿಟಿಎಲ್ ಕಾಲೇಜಿದೆ. ಬೊಮ್ಮಸಂದ್ರ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಇಲ್ಲಿ ರಸ್ತೆ ದಾಟುತ್ತಾರೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ರಸ್ತೆ ದಾಟುತ್ತಾರೆ. ಪ್ರತಿ ನಿತ್ಯ  ಬಳಿಕ ಸ್ಕೈಯ್ ವಾಕ್ ಇದ್ದರೂ ಕೂಡ ರಸ್ತೆಯಲ್ಲಿ ದಾಟಲು ಹೋಗಿದ್ದ ಮಹಿಳೆಯರು ಇಂದು ಲಾರಿ ಹೊಟ್ಟೆ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. 

click me!