ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕದ್ದ ಕಾರು ಚಾಲಕ: ಉಂಡ ಮನೆಗೇ ಕನ್ನ ಹಾಕಿದ ಸಂತೋಷ್‌!

By Sathish Kumar KH  |  First Published Nov 2, 2023, 1:28 PM IST

ಅಡಿಕೆ ವ್ಯಾಪಾರಿಗೆ ಸೇರಿದ 1 ಕೋಟಿ ರೂ. ಹಣವನ್ನು ಆತನ ಕಾರು ಚಾಲಕನೇ ಕದ್ದು ಯಾಮಾರಿಸಿರುವ ಘಟನೆ ಬೆಂಗಳೂರಿನ ಗಾಂಧಿನಗರದಲ್ಲಿ ನಡೆದಿದೆ. 


ಬೆಂಗಳೂರು (ನ.02): ಅಡಿಕೆ ವ್ಯಾಪಾರಿಗೆ ಸೇರಿದ 1 ಕೋಟಿ ರೂ. ಹಣವನ್ನು ಆತನ ಕಾರು ಚಾಲಕನೇ ಕದ್ದು ಮಾಲೀಕನಿಗೆ ಯಾಮಾರಿಸಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಗಾಂಧಿನಗರದಲ್ಲಿ ನಡೆದಿದೆ. 

ಬೆಂಗಳೂರಿನಲ್ಲಿ ಚಾಲಕನಿಂದಲೇ ಮಾಲೀಕನ ಹಣ ಕಳ್ಳತನ ಮಾಡಲಾಗಿದೆ. ಅಂತರರಾಜ್ಯ ಅಡಿಕೆ ವ್ಯಾಪಾರಿ ಎಚ್.ಎಸ್. ಉಮೇಶ್ ಅವರಿಗೆ ಸೇರಿದ್ದ 1 ಕೋಟಿ ರೂ. ಹಣವನ್ನು ಆತನ ಕಾರು ಚಾಲಕ ಸಂತೋಷ್‌ ಎನ್ನುವಾತ ಕದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಚಿತ್ರದುರ್ಗದಿಂದ ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗೆ ಕಾರಿನಲ್ಲಿ 1 ಕೋಟಿ ರೂ. ಹಣವನ್ನು ತರಲಾಗಿತ್ತು. ಆದರೆ, ಕಾರಿನ ಮಾಲೀಕನಿಗೆ ತಿಳಯದೇ ಡ್ರೈವರ್‌ ತನ್ನ ಮೂವರು ಸಹಚರರೊಂದಿಗೆ ಸೇರಿಕೊಂಡು ಅಷ್ಟೂ ಹಣವನ್ನು ಕದ್ದು ಯಾಮಾರಿಸಿದ್ದಾನೆ. ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸರು ಆರೋಪಿಗಳ ಜಾಡು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ. 

Latest Videos

undefined

Bengaluru ನಾಲ್ಕು ದಿನ ಆಹಾರವಿಲ್ಲದೇ ಬಳಲಿದ್ದ ಚಿರತೆ ಎದೆಗೆ ಗುಂಡಿಟ್ಟು ಕೊಂದ ಅರಣ್ಯ ಇಲಾಖೆ: ಈ ಸಾವು ನ್ಯಾಯವೇ?

ಅಂತರರಾಜ್ಯ ಅಡಿಕೆ ವ್ಯಾಪಾರಿ ಉಮೇಶ್‌ ಅವರು ಅಕ್ಟೋಬರ್ 7 ರಂದು ಚಿತ್ರದುರ್ಗದಿಂದ ಅಡಿಕೆ ವ್ಯಾಪಾರ ಸಲುವಾಗಿ ಹಣ ತಂದಿದ್ದರು. ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀ‌ನಗರಕ್ಕೆ ಬಂದಿದ್ದ ವೇಳೆ ಕೃತ್ಯ ನಡೆದಿದೆ. ಬ್ಯಾಗಿನಲ್ಲಿ ಬರೋಬ್ಬರಿ 1 ಕೋಟಿ ಹಣ ತಂದಿದ್ದರು. ಹಣವನ್ನ ಕಾರಿನ ಡಿಕ್ಕಿಯಲ್ಲಿಟ್ಟು ಊಟಕ್ಕೆಂದು ಗಾಂಧೀನಗರದ ಹೋಟೇಲ್ ಮುಂಭಾಗ ನಿಲ್ಲಿಸಿದ್ದರು. ಆ ಬಳಿಕ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿ ಕಾರು ನಿಲ್ಲಿಸಿದ್ದರು. ಸಂಜೆ 7.45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದ್ದರು. ಈ ವೇಳೆ ಹಣ ಕಳವು ಬೆಳಕಿಗೆ ಬಂದಿತ್ತು.

ಕಾರಿನಲ್ಲಿ ತಂದಿದ್ದ 1 ಕೋಟಿ ರೂ. ಹಣ ಕಳ್ಳತನ ಆಗಿರುವ ಬಗ್ಗೆ ವ್ಯಾಪಾರಿ ಉಮೇಶ್‌ ಅವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಅಡಿಕೆ ವ್ಯಾಪಾರಿಯ ದೂರಿನ ಹಿನ್ನಲೆಯಲ್ಲಿ ಉಪ್ಪಾರಪೇಟೆ ಠಾಣೆಯಲ್ಲಿ FIR ದಾಖಲಾಗಿತ್ತು. ಹಣ ಕಳ್ಳತನ ಜಾಡು ಹಿಡಿದು ಕಳ್ಳರ ಬೆನ್ನಟ್ಟಿದ ಉಪ್ಪಾರಪೇಟೆ ಪೊಲೀಸರು ಡ್ರೈವರ್‌ ಸೇರಿದಂತೆ ನಾಲ್ವರು ಖದೀಮರನ್ನು ಬಂಧಿಸಿದ್ದು, ಇನ್ನಷ್ಟು ಇಂತಹ ಕೃತ್ಯಗಳನ್ನು ಎಸಗಿದ್ದಾರೆಯೇ ಎನ್ನುವ ಮಾಹಿತಿ ಹೊರಗೆಳೆಯಲು ತನಿಖೆಯನ್ನು ಮುಂದುವರೆಸಿದ್ದಾರೆ.

ವರ್ಷದ ಬಳಿಕ ಬಾಗಿಲು ತೆರೆದ ಹಾಸನಾಂಬೆ ದೇಗುಲ, ನ.14ರವರೆಗೆ ದೇವರ ದರ್ಶನ

ಬಂಧಿತರಿಂದ 90 ಲಕ್ಷ ರೂ. ಹಣ ರಿಕವರಿ: ಇನ್ನು ಅಡಿಕೆ ವ್ಯಾಪಾರಿ ಬಳಿ ಒಂದು ಕೋಟಿ ಕಳವು ಪ್ರಕರಣದ ನಾಲ್ವರು ಆರೋಪಿಗಳನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 90,19,500 ಹಣವನ್ನು ರಿಕವರಿ ಮಾಡಲಾಗಿದೆ. ಒಟ್ಟು 1 ಕೋಟಿ ರೂ. ಹಣವನ್ನು ಕಳ್ಳತನ ಮಾಡಿದ್ದ ಆರೋಪಿಗಳು ಅದರಲ್ಲಿ 6.49 ಲಕ್ಷ ಹಣ ಖರ್ಚು ಮಾಡಿದ್ದರು. ಕದ್ದ ಹಣದಲ್ಲಿ 2 ಐಪೋನ್, ಆಪಲ್ ಕಂಪನಿಯ ವಾಚ್, ಇಯರ್ ಬಡ್ಸ್ ಹಾಗೂ 2 ಫಾಸಿಲ್ ವಾಚ್ ಖರೀದಿಸಿದ್ದರು. ಹಣ ಸಿಕ್ಕಿದೆಯೆಂದು ಐಷಾರಾಮಿ ಜೀವನ ನಡೆಸಲು ಮುಂದಾಗಿದ್ದ ಆರೋಪಿಗಳು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.

click me!