ದುಬಾರಿ ಎಣ್ಣೆ ಹೊಡೆಯಲು ಮನೆಗಳ್ಳತವನ್ನೇ ದಂಧೆ ಮಾಡಿಕೊಂಡಿದ್ದ!

By Suvarna News  |  First Published Dec 27, 2020, 3:55 PM IST

ಬೆಂಗಳೂರಿನಲ್ಲಿ ಮನೆಗಳ್ಳನ ಬಂಧನ ಪ್ರಕರಣ/ ದುಬಾರಿ ಮದ್ಯ ಸೇವನೆಗೆ ಕಳ್ಳತನ ಮಾಡ್ತಿದ್ದ/ ಜಾನಿ ವಾಕರ್ ಮದ್ಯ ಸೇವಿಸುತ್ತಿದ್ದ ಮನೆಗಳ್ಳ/ ಸಂತೋಷ್  ಅಲಿಯಾಸ್ ಎಮ್ಮೆ ಬಂಧಿತ ಮನೆಗಳ್ಳ/ ಸುದ್ದಗುಂಟೆಪಾಳ್ಯ ಪೊಲೀಸರಿಂದ ಬಂಧನ/  ರಾಜ್ಯದ ವಿವಿಧ ಠಾಣೆಗಳಲ್ಲಿ ಸಂತೋಷ್ ವಿರುದ್ಧ ಕೇಸ್


ಬೆಂಗಳೂರು (ಡಿ. 27)  ಇವ ಅಂತಿಂಥ ಮನೆಗಳ್ಳ ಅಲ್ಲ. ಎಣ್ಣೆ ಹೊಡೆಯಲು ಕಳ್ಳತನವನ್ನೇ  ಬಂಡವಾಳ ಮಾಡಿಕೊಂಡಿದ್ದ. ಫಾರಿನ್ ಬ್ರ್ಯಾಂಡ್‌ ಗಳೇ ಬೇಕು. ದುಬಾರಿ ಮದ್ಯ ಸೇವನೆಗೆ ಕಳ್ಳತನ ಮಾಡ್ತಿದ್ದ. 

ಜಾನಿ ವಾಕರ್ ಮದ್ಯ ಸೇವನನೆಗೋಸ್ಕರ ಮನೆಕಳ್ಳತನಕ್ಕೆ ಇಳಿದಿದ್ದ ಚಾಲಾಕಿ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ.  ಸಂತೋಷ್ ಅಲಿಯಾಸ್ ಎಮ್ಮೆ ಬಂಧಿತ ಮನೆಗಳ್ಳ.  ಸುದ್ದಗುಂಟೆಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tap to resize

Latest Videos

ವಾಹನ ಕಳ್ಳತನಕ್ಕೆ ಹೊಸ ತಂತ್ರ... ಬಾಡಿಗೆ ಪಡೆದು ಎಸ್ಕೇಪ್

ರಾಜ್ಯದ ವಿವಿಧ ಠಾಣೆಗಳಲ್ಲಿ ಸಂತೋಷ್ ವಿರುದ್ಧ ಕೇಸ್ ಇದೆ 100ಕ್ಕೂ ಅಧಿಕ ಮನೆಗಳ್ಳತನ ಮಾಡಿರುವ ಸಂತೋಷ್ ಚಾಲಾಕಿ ಚತುರ. ಗೇಟ್‌ಗೆ ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್ ಆಗುತ್ತಿದ್ದವು.

ಗೇಟ್‌ಗೆ ಬೀಗ ಹಾಕಿದ್ರೆ ಮನೆಯಲ್ಲಿ ಯಾರೂ ಇಲ್ಲ  ಎಂಬುದನ್ನು ಖಾತ್ರಿ ಮಾಡಿಕೊಂಡು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ. ಮನೆಯ ಹಿಂಬದಿ ಬಾಗಿಲು ಮುರಿದು ಒಳಪ್ರವೇಶ ಮಾಡುತ್ತಿದ್ದ. ಬಾಗಿಲು ಮುರಿಯೋಕೆ ಅಂತನೇ ಕಬ್ಬಿಣದ ರಾಡ್ ಒಂದನ್ನು ಮಾಡಿಸಿ ಇಟ್ಟುಕೊಂಡಿದ್ದ.ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ತಮಿಳುನಾಡು ಕಡೆ ಚಿನ್ನ ಮಾರಾಟ ಮಾಡಡಿ ಹಣ ಜೇಬಿಗೆ ಇಳಿಸುತ್ತಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ ಈತ  ದುಬಾರಿ ಮೌಲ್ಯದ ಕಾರು ಇಟ್ಟುಕೊಂಡಿದ್ದ.  

click me!