
ಬೆಂಗಳೂರು (ಜು.29): ಪತ್ನಿ ಮೇಲೆ ಆ್ಯಸಿಡ್ ಎರಚಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. 2017ರ ಜುಲೈ 14ರಂದು ಕೆ.ಜಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ಎಸಗಿದ್ದ ಆರೋಪಿ ಚನ್ನೇಗೌಡ ಮದುವೆಯಾದ ನಂತರ ತನ್ನ ಪತ್ನಿ ಜೊತೆ ಆಗಾಗ ಜಗಳ ಮಾಡುತ್ತಿದ್ದ, ಅಕ್ರಮ ಸಂಬಂಧ ಶಂಕೆಯಿಂದ ಪತ್ನಿ ಜೊತೆ ಜಗಳ ತೆಗೆಯುತ್ತಿದ್ದ. ಮತ್ತೊಂದು ದಿನ ಆರೋಪಿ ಚನ್ನೇಗೌಡ ಕುಮಾರೇಶ ಎಂಬಾತನ ಬಳಿ ಆ್ಯಸಿಡ್ ತರಿಸಿಕೊಂಡು ಪತ್ನಿ ಮೇಲೆ ಎರಚಿದ್ದ. ಗಂಭೀರ ಗಾಯವಾಗಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ಆಗಸ್ಟ್ 2017ರಂದು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಳು. ಈ ಸಂಬಂಧ ಆರೋಪಿಯನ್ನ ಬಂಧಿಸಿ ಕೆಜಿ ನಗರ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ವಿಚಾರಣೆ ಮುಗಿದಿದ್ದು, ಪ್ರಕರಣ ಸಂಬಂಧ ಅಫರಾಧಿ ಚೆನ್ನೇಗೌಡನಿಗೆ ಜೀವಾವಧಿ ಶಿಕ್ಷೆ ಮತ್ತು 10,000 ದಂಡ ಪ್ರಕಟಿಸಿ 46 ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿ ಚನ್ನೇಗೌಡ ಸುಮಾರು 21 ವರ್ಷಗಳ ಹಿಂದೆ ಮಂಜುಳಾ ಎಂಬುವವರನ್ನು ಮದುವೆಯಾಗಿದ್ದ, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಚನ್ನೇಗೌಡ ಪ್ರತೀದಿನ ಕುಡಿದು ಗಲಾಟೆ ಮಾಡುತ್ತಿದ್ದ ಮತ್ತು ನೀನು ಸುಂದರವಾಗಿದ್ದೀಯಾ, ಯಾವುದೋ ಬೇರೆ ಗಂಡಸಿನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಹೊಡೆದು ಮಾನಸಿಕ ಹಿಂಸೆ ನೀಡುತ್ತಿದ್ದ, ದೈಹಿಕ ಕಿರುಕುಳ ನೀಡುತ್ತಿದ್ದ. ನೀನು ಸುಂದರವಾಗಿದ್ದರೆ ತಾನೇ ಇತರರು ನಿನ್ನನ್ನು ನೋಡುವುದು. ಗಂಡಸರ ಜೊತೆಗೆ ನೀನು ಮಾತನಾಡುವುದು ಎಂದು ಹೇಳುತ್ತಿದ್ದ. ಈ ಹಿನ್ನೆಲೆಯಲ್ಲಿ ಮಂಜುಳಾ ನನ್ನು ಕೊಲೆ ಮಾಡುವ ಉದ್ದೇಶದಿಂದ ಕುಮಾರೇಶ ಎಂಬವನ ಜೊತೆಗೆ ಆ್ಯಸಿಡ್ ತರಿಸಿ ಅದನ್ನು ಪತ್ನಿಯ ಮೇಲೆ ಸುರಿದಿದ್ದ. ಸುಮಾರು ಒಂದೂವರೆ ತಿಂಗಳ ಸಾವು ಬದುಕಿನ ಹೋರಾಟದ ನಂತರ ಪತ್ನಿ ಮೃತಪಟ್ಟಿದ್ದಳು.
Bengaluru Crime; ಎಣ್ಣೆ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದ ಗೆಳೆಯ!
ಕ್ರೇಜ್‌ಗಾಗಿ ದುಬಾರಿ ಬೈಕ್‌ಕದಿಯುತ್ತಿದ್ದ ವಿದ್ಯಾರ್ಥಿ
ಬೆಂಗಳೂರು: ಬೈಕ್ ಮೇಲಿನ ಕ್ರೇಜ್‌ಗೆ ದುಬಾರಿ ಮೌಲ್ಯದ ಬೈಕ್ ಕಳ್ಳತನ ಮಾಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವಿದ್ಯಾರಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿದ್ಯಾಣ್ಯಪುರದ ಪಿಜಿ ನಿವಾಸಿ ಕಿಶನ್ ಚೌಧರಿ ಬಂಧಿತನಾಗಿದ್ದು, ಆರೋಪಿಯಿಂದ .11 ಲಕ್ಷ ಮೌಲ್ಯದ 13 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಆರ್ಕಿಡ್ ಲೇಔಟ್‌ನ ವೆಂಕಟೇಶ್ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಬ್ ಇನ್‌ಸ್ಪೆಕ್ಟರ್ ಕೆ.ಪ್ರಭು ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
Vijayanagara Crime; ಕುತ್ತಿಗೆಗೆ ಹಗ್ಗ ಬಿಗಿದು ಯುವಕನ ಹತ್ಯೆ ಶಂಕೆ, ಘಟನಾ ಸ್ಥಳಕ್ಕೆ ಶ್ವಾನದಳ ಭೇಟಿ
ಚಿಕ್ಕಬಳ್ಳಾಪುರದ ಬಿಎಂಟಿಸಿ ಚಾಲಕನ ಪುತ್ರ ಕಿಶನ್, ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಬಳಿ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ. ಕೆಲ ತಿಂಗಳಿಂದ ಕಾಲೇಜಿಗೆ ಹೋಗದೆ ಆತ, ವಿದ್ಯಾರಣ್ಯಪು ಹತ್ತಿರ ಟಿವಿಎಸ್ ಬೈಕ್ ಸವೀರ್‍ಸ್ ಸೆಂಟರ್‌ನಲ್ಲಿ ವ್ಯವಸ್ಥಾಪಕನಾಗಿದ್ದ. ವಿದ್ಯಾರಣ್ಯಪುರದಲ್ಲಿ ಪಿಜಿಯಲ್ಲಿ ನೆಲೆಸಿದ್ದ ಕಿಶನ್‌ಗೆ ಬೈಕ್‌ಗಳ ಮೇಲೆ ವಿಪರೀತ ಕ್ರೇಜ್ ಇತ್ತು. ಆತನ ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಕ್ರೇಜ್‌ಗಾಗಿ ಬೈಕ್ ಕಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಅಪ್ರಾಪ್ತ ವಯಸ್ಸಿನಲ್ಲೇ ಬೈಕ್ ಕಳ್ಳತನ ಮೇಲೆ ಬಾಲ ಮಂದಿರ ಸೇರಿ ಬಳಿಕ ಹೊರ ಬಂದಿದ್ದ ಆತ, ಮತ್ತೆ ತನ್ನ ಚಾಳಿ ಮುಂದುವರೆಸಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ