ಗೂಗಲ್ ಪೇ ಬಳಕೆದಾರರೆ ಎಚ್ಚರ,  ನಿಮಗೂ ಇಂಥ ಕರೆ ಬರಬಹುದು!

By Suvarna News  |  First Published Jul 29, 2020, 5:22 PM IST

ಸೈಬರ್ ವಂಚಕರು ಯಾವೆಲ್ಲ ಜಾಲ ಬೀಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ/  ಗೂಗಲ್ ಪೇ ಯೂಸ್ ಮಾಡುತ್ತಿದ್ದವನಿಗೆ ಮೋಸ/ ಕರೆ ಮಾಡಿದ್ದಕ್ಕೆ ಖಾತೆಯಲ್ಲಿ ಇದ್ದ ಹಣವೆಲ್ಲ ಖತಂ


ಬೆಂಗಳೂರು(ಜು.  29)  ಗೂಗಲ್ ಪೇ ಆ್ಯಪ್ ಯೂಸ್ ಮಾಡೋ ಗ್ರಾಹಕರೇ ಹುಷಾರ್. ಈ ಸುದ್ದಿ ನಿಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳುಸುತ್ತದೆ. ಸಮಸ್ಯೆ ಆಯ್ತು ಅಂಥ ಕಸ್ಟಮರ್ ಕೇರ್ ಮೊರೆ ಹೋದವನಿಗೆ ಸರಿಯಾದ ಶಾಕ್ ಸಿಕ್ಕಿದೆ.

ಬೆಂಗಳೂರಿನ ಗವಿಪುರಂ ನಿವಾಸಿ ಹರೀಶ್ ಮೋಸ ಹೋದ ಯುವಕ. ಗೂಗಲ್ ಪೇ ಓಪನ್ ಆಗದ ಹಿನ್ನೆಲೆ, ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಕರೆಮಾಡಿದ್ದ. ಗೂಗಲ್ ನಲ್ಲಿ ಸರ್ಚ್ ಮಾಡಿ ಸಿಕ್ಕ ನಂಬರ್ ಗೆ ಕರೆ ಮಾಡಿದ್ದ.  9901771222 ನಂಬರ್ ಗೆ ಕರೆ ಮಾಡಿದ್ದ ಹರೀಶ್ ಗೆ ಯಾವುದೆ ಪ್ರತಿಕ್ರಿಯೆ ಬಂದಿರಲಿಲ್ಲ.

Tap to resize

Latest Videos

undefined

ಬಲೆಗೆ ಬಿದ್ದ ಸ್ವಪ್ನ ಸುಂದರಿ, ನಾಲ್ಕು ಗಂಡರ ಕಳ್ಳ ಹೆಂಡತಿ

ಇದಾದ ತಕ್ಷಣ 06291766339 ನಂಬರ್ ನಿಂದ ಹರೀಶ್ ಗೆ ಅಪರಿಚಿತನೊಬ್ಬ ಕರೆ ಮಾಡಿದ್ದಾನೆ. ಆ ಕಡೆಯಿಂದ ನಿಮ್ಮ ಗೂಗಲ್ ಪೇ ಸಮಸ್ಯೆ ಆಗಿದೆ ನಾವು ಕೇಳುವ ಡಿಟೇಲ್ಸ್  ನೀಡಿದ್ರೆ ಬಗೆಹರಿಯುತ್ತೆ ಎಂದಿದ್ದಾನೆ. ಅಪರಿಚಿತ ವ್ಯಕ್ತಿ ಕೇಳ್ತಿದ್ದಂತೆ ಡೆಬಿಟ್ ಕಾರ್ಡ್ ನಂಬರ್, ಪಿನ್ ಕೋಡ್, ಓಟಿಪಿಯನ್ನು ಹರೀಶ್ ನೀಡಿದ್ದಾರೆ.

ಬಳಿಕ ಅಪರಿಚಿತ ವ್ಯಕ್ತಿ ನಿಮ್ಮ ಗೂಗಲ್ ಪೇ ಸರಿ ಆಗಿದೆ, ಈಗ ಓಪನ್ ಮಾಡಿ ಅಂಥ ಕಾಲ್ ಕಟ್ ಮಾಡಿದ್ದಾನೆ. ಕಾಲ್ ಕಟ್ ಮಾಡಿ ನೋಡ್ತಿದ್ದಂತೆ ಅಕೌಂಟ್ ನಲ್ಲಿದ್ದ 24,500 ರೂಪಾಯಿ ಮಾಯವಾಗಿದೆ. ಅಕೌಂಟ್ ನಲ್ಲಿದ್ದ ಹಣ ಇಲ್ಲವಾದ ಬಳಿಕ ಶಾಕ್ ಆಗಿ ಮತ್ತೇ ಅದೇ ನಂಬರ್ ಗೆ ಕಾಲ್ ಮಾಡಿದರೆ ಸ್ವಿಚ್ ಆಫ್ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ ಎಫ್ ಐಆರ್ ದಾಖವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

click me!