ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:| ಆರೋಪಿಗೆ ಧರ್ಮದೇಟು| ತರಕಾರಿ ತರಲು ಹೋಗುತ್ತಿದ್ದವಳ ಮೇಲೆ ದೌರ್ಜನ್ಯ
ಬೆಂಗಳೂರು(ಏ.28): ತರಕಾರಿ ತರಲೆಂದು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸ್ಥಳೀಯರು ಥಳಿಸಿ, ಪೊಲೀಸರಿಗೆ ಒಪ್ಪಿರುವ ಘಟನೆ ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
20 ವರ್ಷದ ಸಂತ್ರಸ್ತ ವಿದ್ಯಾರ್ಥಿನಿ ಕೊಟ್ಟದೂರಿನ ಮೇರೆಗೆ ಕಾಟನ್‌ಪೇಟೆಯ ಸಿದ್ಧಾರ್ಥ ನಗರ ನಿವಾಸಿ ಮೊಹಮ್ಮದ್ ಫಯಾಜ್ (21) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲೂಡೋ ಗೇಮ್‌ನಲ್ಲಿ ಸೋಲಿಸಿದ ಹೆಂಡತಿ ಬೆನ್ನುಮೂಳೆ ಮುರಿದ ಗಂಡ!
ಏ.25ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಯುವತಿ ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿರುವ ಚಿಕ್ಕ ಮಾರ್ಕೆಟ್‌ನಲ್ಲಿ ತರಕಾರಿ ತರಲೆಂದು ಓಬಯ್ಯ ಲೇನ್‌ನ 1ನೇ ಕ್ರಾಸ್‌ನ ಕಿರಿದಾದ ರಸ್ತೆಯಲ್ಲಿ ಹೋಗುತ್ತಿದ್ದಳು. ರಸ್ತೆಯಲ್ಲಿ ಜನರಾರಯರು ಇರಲಿಲ್ಲ. ಈ ವೇಳೆ ಎದುರಿಗೆ ಬಂದ ಆರೋಪಿ ಯುವತಿಯ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಯುವತಿ ಕೂಡಲೇ ಪ್ರತಿರೋಧವೊಡ್ಡಿ ಚೀರಾಡಿದ್ದು, ಆರೋಪಿಯನ್ನು ಮುಖ್ಯರಸ್ತೆಗೆ ಎಳೆದುಕೊಂಡು ಬಂದಿದ್ದಾಳೆ. ಈ ವೇಳೆ ಆರೋಪಿಯು, ಯುವತಿಯ ಎಡಗೈ ಮುಷ್ಠಿಯನ್ನು ಕಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ದ್ರೋಹ: ಪ್ರಿಯಕರನಿಂದಲೇ ಹತ್ಯೆ ಯತ್ನ!
ಆರೋಪಿ ಮೊಹಮ್ಮದ್ ಫಯಾಜ್ ಪ್ಲಂಬರ್ ಕೆಲಸ ಮಾಡುತ್ತಿದ್ದ. ಈತ ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಸರ ಕಳವು ಮಾಡಿ ಬಾಲಪರಾಧಿಯಾಗಿ ಜೈಲು ಸೇರಿದ್ದ. ಈತನ ಮೇಲೆ ಕೆಂಗೇರಿ ಸೇರಿದಂತೆ ಕೆಲ ಠಾಣೆಯಲ್ಲಿ ಅಪರಾಧ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.