ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾದರು

By Suvarna News  |  First Published May 23, 2022, 12:27 PM IST

* ಉಡುಪಿಯಲ್ಲಿ ಯುವ ಜೋಡಿ ಆತ್ಮಹತ್ಯೆ ಪ್ರಕರಣ
* ಉಡುಪಿಯಲ್ಲೇ ನಡೆದ ಅಂತ್ಯಸಂಸ್ಕಾರ
* ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾದರು


ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಮೇ.23):
ಕಾರಿನೊಳಗೆ ಕೂತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಯುವಜೋಡಿಯ ಅಂತ್ಯಸಂಸ್ಕಾರ ಉಡುಪಿಯಲ್ಲೇ ನಡೆದಿದೆ. ಒಟ್ಟಿಗೆ ಬದುಕಲು ಸಾಧ್ಯವಾಗದಿದ್ದರೂ ಈ ಯುವಜೋಡಿಯನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಗಿದೆ. 

ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಗುರುತು ಪತ್ತೆಯಾಗದ ರೀತಿಯಲ್ಲಿ ಯಶವಂತ ಯಾದವ್ ಮತ್ತು ಜ್ಯೋತಿಯ ಶವ ಸಿಕ್ಕಿತ್ತು. ಶವದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯೇ ನಡೆಸಲಾಯಿತು. ನಡುರಾತ್ರಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಎರಡು ಕುಟುಂಸ್ಥರು ಸೇರಿ ಶವಗಳ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಿದರು. 

Tap to resize

Latest Videos

ಅಲ್ಲಿ ಸಂಸ್ಕಾರ ಮಾಡುವುದಕ್ಕೆ ಏನೂ ಉಳಿದಿರಲಿಲ್ಲ.‌ ಘಟನಾ ಸ್ಥಳದಲ್ಲೇ ಶವ ಸಂಪೂರ್ಣ ಸುಟ್ಟು ಹೋಗಿತ್ತು. ಆದರೆ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ನಡೆಸಲೇಬೇಕು.‌ ಹಾಗಾಗಿ ಸುಟ್ಟು ಕರಕಲಾದ ಶವವನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಬದಲಾಗಿ ಉಡುಪಿಯಲ್ಲೇ ಸಂಸ್ಕಾರ ಮಾಡಲು ಎರಡು ಕುಟುಂಬಿಕರು ನಿರ್ಧರಿಸಿದ್ರು. ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಮಣಿಪಾಲದಿಂದ ಸ್ವಲ್ಪವೇ ದೂರದಲ್ಲಿರುವ ಇಂದ್ರಾಳಿ ಸ್ಮಶಾನದಲ್ಲಿ, ಅಂತಿಮ ಸಂಸ್ಕಾರ ನಡೆಸಲಾಯಿತು. 

ಕಾರಿನಲ್ಲೇ ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್, ಸಾವಿಗೆ ಕಾರಣ ಬಯಲು

ಒಂದೇ ಚಿತೆಯಲ್ಲಿ ಬೂದಿಯಾದ ಪ್ರೇಮಿಗಳು
ಶವ ಪತ್ತೆಯಾದಾಗಲೂ  ಈ ಯುವಜೋಡಿ ಕಾರಿನ ಹಿಂದಿನ ಸೀಟಿನಲ್ಲಿ ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸುಟ್ಟು ಕರಕಲಾದರೂ ಒಬ್ಬರಿಗೊಬ್ಬರು ಅಂಟಿಕೊಂಡಿದ್ದರು. ಕೊನೆಗೆ ಅಂತಿಮ ಸಂಸ್ಕಾರವನ್ನು ಕೂಡ, ಒಂದೇ ಚಿತೆಯಲ್ಲಿ ನಡೆಸಲಾಯಿತು. ಎರಡು ದೇಹಗಳನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಯಿತು. ಬಳಿಕ ಬೂದಿಯನ್ನು ಎರಡು ಕುಟುಂಬಗಳು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಪ್ರೀತಿಯ ವಿಚಾರ ಗೊತ್ತೇ ಇರಲಿಲ್ಲವಂತೆ
ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯವರು ವಿರೋಧಿಸಿದರೆಂದು ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿತ್ತು. ಕೊನೆಯದಾಗಿ ಕಳಿಸಿದ್ದ ವಾಟ್ಸಪ್ ಮೆಸೇಜ್ ನಲ್ಲಿ ಇದೆ ವಿಚಾರ ಬರೆಯಲಾಗಿತ್ತು. ಮನೆಯವರನ್ನು ಬಿಟ್ಟಿರೋದು ಸಾಧ್ಯವಿಲ್ಲ ನಾವಿಬ್ಬರೂ ಬೇರೆ ಆಗುವುದಿಲ್ಲ, ಹಾಗಾಗಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇವೆ ಕ್ಷಮಿಸಿ ಎಂದು ಬರೆಯಲಾಗಿತ್ತು. ಆದರೆ ಈ ಯುವಜೋಡಿಗಳ ಎರಡು ಕುಟುಂಬದವರು ಹೇಳುವುದೇ ಬೇರೆ.

ಪ್ರೀತಿಯ ವಿಚಾರ ಹೇಳಿದ್ರೆ ಮದುವೆ ಮಾಡಿಸುತ್ತಿದ್ದೆವು
ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ ಎಂದು ಜ್ಯೋತಿಯ ಮನೆಯವರು ಹೇಳುತ್ತಾರೆ.ಪ್ರೀತಿ ವಿಷಯ ಪ್ರಸ್ತಾಪ ಮಾಡಿದಿದ್ದರೆ ಕೂತು ಮಾತಾಡಿ ಮದುವೆ ಆದರೂ ಮಾಡಿಸ್ತಾಯಿದ್ದೆವು.ಹಣ ಕಾಲಿಯಾಗುವವರೆಗೆ ಸುತ್ತಾಡಿ ಕೈಯಲ್ಲಿ ಹಣ ಇಲ್ಲದಿದ್ದಾಗ ಬದುಕುವ ಧೈರ್ಯ ಇಲ್ಲದೇ ಹೀಗೆ ಮಾಡಿಕೊಂಡಿದ್ದಾರೆ. ಕಷ್ಟ ಪಟ್ಟು ದುಡಿದು ಸಾಕುವ ತಾಕತ್ತು ಇಲ್ಲದ ಮೇಲೆ ಪ್ರೀತಿ ಮಾಡಿ ಏಕೆ ಓಡಿಹೋಗಬೇಕಿತ್ತು? ಎಂದು ಬೇಸರದ ಮಾತನಾಡಿದ್ದಾರೆ.ಪ್ರೀತಿ ಮಾಡಿ ಹುಡುಗಿಯನ್ನ ಕರೆದುಕೊಂಡು ಹೋಗಿ ಶೋಕಿ ಮಾಡಬಾರದು.ಕೂಲಿ ನಾಲಿ ಮಾಡಿ ಹುಡುಗಿಯನ್ನು ಸಾಕಬೇಕು. ಭಯಬಿದ್ದು ಜೀವ ತೆಗೆದುಕೊಳ್ಳೋದು ತುಂಬಾ ‌ತಪ್ಪು. ಹುಡುಗಿ ಬಿಕಾಂ ಓದಿದ್ದಾಳೆ ಬುದ್ದಿವಂತೆ ಕೂಡ ಆದರೆ ಭಯದ ಸ್ವಭಾವ.ಎರಡು ವರ್ಷದಿಂದ ಮನೆಯಲ್ಲೇ ಇದ್ಲು ಎಲ್ಲೂ ಆಚೆ ಹೋಗ್ತಿರಲಿಲ್ಲ.ಅದ್ಹೇಗೆ ಈ ಹುಡುಗನೊಂದಿಗೆ ಸಂಪರ್ಕ ಆಯಿತು ಗೊತ್ತಿಲ್ಲ ಎನ್ನುತ್ತಾರೆ.

ಬುಧವಾರ ಬೆಳಗ್ಗೆ11.30ಕ್ಕೆ ಇಂಟರ್ ವ್ಯೂ ಹೇಳಿ ಹೊರಗೆ ಹೋದ ಮನೆ ಮಗಳು ಸಂಜೆ ವರೆಗೂ ಬಂದಿಲ್ಲ.ಮರು ದಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.ಭಾನುವಾರ ಮುಂಜಾನೆ ೩ಗಂಟೆ ಸುಮಾರಿಗೆ ಈ ಆತ್ಮಹತ್ಯೆ ಗಮನಕ್ಕೆ ಬಂದಿದೆ. ಮಂಗಳೂರಿನಲ್ಲಿ ೧೨ ಸಾವಿರಕ್ಕೆ ಬಾಡಿಗೆ ಮನೆಯಲ್ಲೂ ಇದ್ದಿದ್ದಾರೆ. ತದನಂತರ ಸುತ್ತಾಡಲು ಹೋಗಿ ಹಣ ಖಾಲಿಯಾದ ಮೇಲೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ೨೦ ರಿಂದ ೩೦ ಸಾವಿರ ಹಣ ಖರ್ಚು ಮಾಡಿ ಹಣ ಖಾಲಿಯಾಗಿದೆ. ಮನೆಯವರಿಗೂ ಈ ಬಗ್ಗೆ ಲೊಕೇಶನ್ ಸಹಿತ ಮೆಸೆಜ್ ರವಾನಿಸಿದ್ದಾರೆ.ಹುಡುಗ ಹುಡುಗಿ ಇಬ್ಬರದ್ದು ತಪ್ಪಿದೆ ಈ ತಪ್ಪಿನಿಂದ ಈ ಅನಾಹುತ ‌ನಡೆದಿದೆ ಎಂದಿದ್ದಾರೆ.

ನನ್ನ ಮಗ ಮುಗ್ಧ
ಮೃತ ಯಶವಂತ್ ತಂದೆ ವೆಂಕಟರಾವ್ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇರಲಿಲ್ಲ ಎನ್ನುತ್ತಾರೆ. ನನ್ಗ ಮಗ ತುಂಬ ಮುಗ್ಧ ಸ್ವಭಾವದವನು ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ.ಬುಧವಾರ ಮಧ್ಯಾಹ್ನ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಕಂಪ್ಯೂಟರ್ ತರಗತಿಗೆ ಎಂದು ಹೋಗಿದ್ದಾನೆ.ಆ ಬಳಿಕ ಮೊಬೈಕ್ ಸ್ವಿಚ್ ಆಫ್ ಮಾಡಿದವ ಈವರೆಗೂ ಆನ್ ಮಾಡಿಲ್ಲ.ಬೇರೆಯವರ ಮೊಬೈಲ್ ನಿಂದ ೩ ಗಂಟೆ ಏಳು ನಿಮಿಷಕ್ಕೆ ಲಾಸ್ಟ್ ಮೆಸೇಜ್ ಮಾಡಿದ್ದಾನೆ.

ಸಾರಿ ತಂದೆ ತಾಯಿಗೆ ತುಂಬ ನೋವು ಕೊಟ್ಟಿದ್ದೇನೆ.ನಾನು ಒಬ್ಬನೇ ಇರಕ್ಕಾಗುತ್ತಿಲ್ಲ ನಾನು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಹುಡುಗಿ ಬಗ್ಗೆ ಈವರೆಗೂ ನಮಗೆ ಗೊತ್ತೇ ಇಲ್ಲ ಈ ಮೊದಲು ಮನೆಯಲ್ಲೂ ಹೇಳಿಕೊಂಡಿಲ್ಲ.ಹೊರಗೆ ಸ್ನೇಹಿತರೂ ಕಡಿಮೆ , ಹಾಗಾಗಿ ಹೆಚ್ವಾಗಿ ಮನೆಯಲ್ಲಿ ಇರುತ್ತಿದ್ದ.ಟಿವಿ ನೋಡುವುದು ಬಿಟ್ಟರೆ‌ ಮೊಬೈಲ್ ನಲ್ಲೇ ಹೆಚ್ಚು ಇರುತ್ತಿದ್ದ . ಕೇಳಿದಾಗಲೆಲ್ಲ ಬ್ಯಾಂಕ್ ಎಕ್ಸಾಮ್ ಗೆ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಿದ್ದ. ಆದರೆ ಈ ಘಟನೆ ಬಳಿಕ ನಮಗೆ ಶಾಕ್ ಆಗಿದೆ.ಪ್ರೀತಿ ಬಗ್ಗೆ ಹೇಳಿದ್ದರೆ ನಾವೇ ಮದುವೆ ಮಾಡಿ ಕೊಡುತ್ತಿದ್ದೆವು.ಈ ಕೆಟ್ಟ ನಿರ್ಧಾರಕ್ಕೆ ಬರುವ ಮೊದಲು ಹೆತ್ತವರಿಗೆ ಕರೆ ಮಾಡಬಹುದಿತ್ತು ಎಂದು ಹೇಳುತ್ತಾರೆ.

ಒಂದು ವೇಳೆ ಇವರು ಹೇಳುತ್ತಿರುವುದು ನಿಜವಾದರೆ , ಆತ್ಮಹತ್ಯೆ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋ ಸಂಶಯ ಮೂಡುತ್ತೆ . ಇಬ್ಬರಿಗೂ ಇನ್ನೂ ಎಳಸು ಪ್ರಾಯ . ಸರಿಯಾದ ಉದ್ಯೋಗ ಇಲ್ಲ . ಸೂಕ್ತ ನಿರ್ಧಾರ ತೆಗೆದುಕೊಳ್ಳುವಷ್ಟು ಧೈರ್ಯವೂ ಇರಲಿಲ್ಲ ಅನಿಸುತ್ತೆ .

ಒಂದು ಕಡೆ ತಮ್ಮ ಪ್ರೀತಿಯನ್ನು ಕುಟುಂಬದವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅನ್ನುವ ಭಯ, ಮತ್ತೊಂದು ಕಡೆ ಕಿಸೆಯಲ್ಲಿದ್ದ ಹಣವೆಲ್ಲ ಖರ್ಚಾಗಿ, ಭಯದಿಂದಲೇ ಈ ಜೋಡಿ ಸಾವಿನ ನಿರ್ಧಾರ ಕೈಗೊಂಡಿರುವ ಸಾಧ್ಯತೆಯೂ ಇದೆ. ಸತ್ತ ನಂತರ ಎರಡು ಕುಟುಂಬದವರು ಹೇಳುವುದು ಕೇಳಿದರೆ, ಇವರಿಬ್ಬರು ಮದುವೆಯಾಗುವುದಕ್ಕೆ ಯಾರಿಂದಲೂ ಅಡ್ಡಿ ಇರಲಿಲ್ಲ ಅನ್ನಿಸುತ್ತೆ. ಒಂದೇ ವಠಾರ ಒಂದೇ ಸಮುದಾಯದವರು ಆದಕಾರಣ ಎಲ್ಲರೂ ಕೂತು ಮಾತನಾಡಿದರೆ ಸಮಸ್ಯೆ ಬಗ್ಗೆ ಹರಿಯುತ್ತಿತ್ತು. ಆದರೆ ಕಾಲ ಮಿಂಚಿ ಹೋಗಿದೆ, ಪ್ರೀತಿಗಿಂತ ಭಯ ಹೆಚ್ಚಾದರೆ ಬದುಕೋದು ಕಷ್ಟ, ಭಯಗ್ರಸ್ತ ಜೋಡಿಯೊಂದು ಮನೆಯಲ್ಲಿ ಒಂದಾಗಿ ಬದುಕುವುದರ ಬದಲು ಚಿತೆಯಲ್ಲಿ ಒಂದಾಗಿ ಅಂತಿಮ ಪ್ರಯಾಣ ಬೆಳೆಸಿದರು.
 

click me!