ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ; ಪ್ರತಿವರ್ಷ 148 ಮಹಿಳೆಯರ ಮೇಲೆ ಅತ್ಯಾಚಾರ, 2,630 ಮಂದಿಗೆ ಕಿರುಕುಳ

By Sathish Kumar KH  |  First Published Feb 26, 2024, 2:39 PM IST

ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಸರಾಸರಿ 148 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಇದನ್ನು ಒಳಗೊಂಡಂತೆ ಸರಾಸರಿ 2,636 ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿ ಆಗುತ್ತಿವೆ.


ಬೆಂಗಳೂರು (ಫೆ.26): ಸಿಲಿಕಾನ್‌ ಟಿಸಿ, ಐಟಿ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತೊಯಾಗಿರುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ವರದಿ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಸರಾಸರಿ 148 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಇದನ್ನು ಒಳಗೊಂಡಂತೆ ಸರಾಸರಿ 2,636 ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿ ಆಗುತ್ತಿವೆ ಎಂದು ಕರ್ನಾಟಕ ಗೃಹ ಇಲಾಖೆಯ ವರದಿಯಿಂದ ಬಹಿರಂಗವಾಗಿದೆ.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿ ಕೇಳಿದ್ದು, ರಾಜ್ಯ ಸರ್ಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಕಳೆದ 3 ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು, ಮಾನಭಂಗಕ್ಕೆ ಯತ್ನ, ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಸೇರಿದಂತೆ ಒಟ್ಟು 7,910 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2021ರಲ್ಲಿ 116, 2022ರಲ್ಲಿ 152 ಹಾಗೂ 2023ರಲ್ಲಿ 176 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಉಳಿದಂತೆ 2021ರಲ್ಲಿ 573, 2022ರಲ್ಲಿ 731 ಹಾಗೂ 2023ರಲ್ಲಿ 1,135 ಮಾನಭಂಗ ಯತ್ನ ಪ್ರಕರಣಗಳು ದಾಖಲು ಮಾಡಲಾಗಿದೆ. ಇದರಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಮಹಿಳಾ ದೌರ್ಜನ್ಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಅಂಕಿ ಅಂಶಗಳನ್ನು ನೋಡಿದರೆ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಭಾವನೆ ಕಂಡುಬರುತ್ತಿದೆ.

Tap to resize

Latest Videos

ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು

ಮಹಿಳೆಯರ ಸುರಕ್ಷತೆಗೆ 496 ಕೋಟಿ ರೂ. ಖರ್ಚು ಮಾಡಿದರೂ 444 ಅತ್ಯಾಚಾರ:
ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್‌ ಸಿಟಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸೇಫ್‌ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ ಬರೋಬ್ಬರಿ 496.57 ಕೋಟಿ ರೂ. ಹಣವನ್ನು ಖರ್ಚು ಮಾಡಿ 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಆದರೂ, ವಾರ್ಷಿಕ 2,636 ಮಹಿಳಾ ದೌರ್ಜನ್ಯ ಪ್ರಕರಣದಂತೆ ಕಳೆದ ಮೂರು ವರ್ಷಗಳಲ್ಲಿ 7,910 ಮಹಿಳಾ ದೌರ್ಜನ್ಯ ಕೇಸ್‌ಗಳು ದಾಖಲಾಗಿವೆ. ಬೆಂಗಳೂರು ನಗರದ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿರವರುಗಳ ಕಛೇರಿ ಮತ್ತು 111 ಪೊಲೀಸ್ ಠಾಣೆಗಳಿಗೆ ಕ್ಯಾಮೆರಾಗಳ ದೃಶ್ಯಾವಳಿಗಳ ನೇರ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೂ, ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆ ಆಗಿತ್ತಿಲ್ಲ.

ಬೆಂಗಳೂರಲ್ಲಿ 3 ವರ್ಷಗಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು:

  • ಅತ್ಯಾಚಾರ ಪ್ರಕರಣ- 444
  • ಮಹಿಳೆಯರಿಗೆ ಕಿರುಕುಳ - 2,439
  • ಮಹಿಳೆಯರ ಮುಂದೆ ಅಶ್ಲೀಲ ಕೃತ್ಯ, ಸನ್ನೆಗಳು- 108
  • ವರದಕ್ಷಿಣೆ ಕಿರುಕುಳಕ್ಕೆ ಸಾವು- 80
  • ಗಂಡ ಹಾಗೂ ಮನೆಯವರಿಂದ ವರದಕ್ಷಿಣೆ ಕಿರುಕುಳ- 1,698
  • ಮಹಿಳೆಯರ ಅನೈತಿಕ ಸಾಗಣೆ- 445
  • ವರದಕ್ಷಿಣೆ ನಿಷೇಧ ಕಾಯ್ದೆಯಡಿ ದೂರು- 2,696
  • ಒಟ್ಟು ಮಹಿಳಾ ದೌರ್ಜನ್ಯದ ಪ್ರಕರಣಗಳು= 7,910

'ಎಚ್ಚರವಾದಾಗ ಆತ ರೇಪ್‌ ಮಾಡ್ತಿದ್ದ..' ಡ್ರಗ್‌ ನಶೆಯಲ್ಲಿದ್ದ ಯುವತಿ ಮೇಲೆ ಇನ್ಸ್‌ಟಾಗ್ರಾಮ್‌ ಸ್ನೇಹಿತನಿಂದ ಅತ್ಯಾಚಾರ!

ವರ್ಷವಾರು ದೌರ್ಜನ್ಯಗಳ ವಿವರ

  • ವರ್ಷ- ದೌರ್ಜನ್ಯ ಪ್ರಕರಣಗಳು
  • 2021- 2020 ಪ್ರಕರಣಗಳು
  • 2022- 2,630 ಪ್ರಕರಣಗಳು
  • 2023- 3,260 ಪ್ರಕರಣಗಳು

click me!