ಯುಪಿಐ ಸ್ಕ್ಯಾನರ್ ಅಪ್ಡೇಟ್ ಮಾಡುವ ನೆಪದಲ್ಲಿ ₹48,000 ವಂಚನೆ!

By Ravi JanekalFirst Published Apr 11, 2024, 10:51 AM IST
Highlights

ಯುಪಿಐ ಸ್ಕ್ಯಾನರ್ ಅಪ್ಡೇಟ್ ಮಾಡುವ ನೆಪದಲ್ಲಿ ಸೈಬರ್ ಖದೀಮರು ಹೋಟೆಲ್‌ ಮಾಲೀಕನಿಗೆ ಸಾವಿರಾರು ರುಪಾಯಿ ವಂಚನೆ ಮಾಡಿದ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ. 

ಬೆಂಗಳೂರು (ಏ.11): ಬ್ಯಾಂಕಿಂಗ್ ಡಿಜಿಟಲಿಕರಣ ವ್ಯವಹಾರ ಸುಲಭಗೊಳಿಸಿದೆ. ಬ್ಯಾಂಕ್‌ಗೆ ಹೋಗದೆ ಕುಳಿತಲ್ಲಿಂದಲೇ ಅಕೌಂಟ್‌ಗೆ ಹಣ ಹಾಕಬಹುದು, ಡ್ರಾ ಮಾಡಬಹುದು, ಕ್ಯಾಶ್‌ಲೆಸ್ ವ್ಯವಹಾರ ನಡೆಸಲು ಡಿಜಿಟಲ್ ಬ್ಯಾಂಕಿಂಗ್ ಅನುಕೂಲ ಕಲ್ಪಿಸಿದೆ. ಆದರೆ ಡಿಜಿಟಲ್ ಬ್ಯಾಂಕಿಂಗ್ ಬಳಕೆಗೆ ಬಂದ ಬೆನ್ನಲ್ಲೇ ಡಿಜಿಟಲ್ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೊಬೈಲ್‌ಗೆ ಕರೆ ಮಾಡಿ ಉಪಾಯದಿಂದ ಒಟಿಪಿ ಪಡೆದು ಬ್ಯಾಂಕ್ ಅಕೌಂಟ್‌ನಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದ ಸೈಬರ್ ಖದೀಮರು ಇದೀಗ ಒಂದು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೋಟೆಲ್, ಪ್ರಾವಿಷನ್ ಸ್ಟೋರ್ ಇನ್ನಿತರ ಕಡೆ ಇದೀಗ ಯುಪಿಐ ಸ್ಕ್ಯಾನರ್ ಅಥವಾ ಕ್ಯೂಆರ್ ಕೋಡ್ ಮೂಲಕ ಹಣ ಪಡೆಯುವುದು ಸಾಮಾನ್ಯವಾಗಿದೆ. ಇದನ್ನೇ ಬಂಡಾವಳ ಮಾಡಿಕೊಂಡ ಖದೀಮರು ಯುಪಿಐ ಸ್ಕ್ಯಾನರ್‌ನಿಂದಲೇ ಹಣ ಎಗರಿಸುವ ಹೊಸ ಉಪಾಯ ಹುಡುಕಿದ್ದಾರೆ. ಹೌದು ನೀವು ಸ್ವಲ್ಪ ಯಾಮಾರಿದೂ ನಿಮ್ಮ ಮುಂದೆಯೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುತ್ತದೆ.

ಎಚ್ಚರ, ಹೀಗೂ ವಂಚಿಸ್ತಾರೆ.. 514ರೂ. ಗ್ಯಾಸ್ ಬಿಲ್ ಬಾಕಿ ಚುಕ್ತಾ ಮಾಡಲು ಹೋಗಿ 16 ಲಕ್ಷ ಕಳೆದುಕೊಂಡ ವೃದ್ಧ!

ಯುಪಿಐ ಸ್ಕ್ಯಾನರ್ ಅಪ್ಡೇಟ್ ಹೆಸರಲ್ಲಿ ಹೋಟೆಲ್‌ ಮಾಲೀಕನಿಗೆ ಸಾವಿರಾರು ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ. ಭಾಸ್ಕರ್ ಎಂಬಾತ ಹಣ ಕಳೆದುಕೊಂಡ ವ್ಯಕ್ತಿ. ಕಲ್ಯಾಣನಗರದಲ್ಲಿ ಟಿಫನ್ ಸೆಂಟರ್ ನಡೆಸುತ್ತಿರುವ ಭಾಸ್ಕರ್. ಏ.4ರಂದು ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಹೋಟೆಲ್‌ಗೆ ಬಂದಿರುವ ಅಪರಿಚಿತ ಖದೀಮ. 'ನಿಮ್ಮ ಯುಪಿಐ ಸ್ಕ್ಯಾನರ್ ಅಪ್ಡೇಟ್ ಆಗಿಲ್ಲ ಎಂದಿದ್ದಾನೆ. ಬಳಿಕ ನಾನು ಅಪ್ಡೇಟ್ ಮಾಡಿಕೊಡುತ್ತೇನೆ ಎಂದು ಹೋಟೆಲ್‌ ಮಾಲೀಕ ಭಾಸ್ಕರನ ಬಳಿ ಮೊಬೈಲ್ ಪಡೆದಿದ್ದಾನೆ. ಬಳಿಕ ಅಪ್ಡೇಟ್ ಆಗಿದೆ ಎಂದು ಹೋಟೆಲ್ ಮಾಲೀಕ ಮೊಬೈಲ್‌ನಿಂದ 1 ರೂಪಾಯಿ ಕಳಿಸಿದ್ದಾನೆ. ಅದಾಗಿ ಸ್ವಲ್ಪ ಹೊತ್ತಿನಲ್ಲೇ 18000 ರೂಪಾಯಿ ಕಟ್ ಆಗಿದೆ, ಇನ್ನೊಮ್ಮೆ 30,000 ರೂಪಾಯಿ ಒಟ್ಟು 48000 ಸಾವಿರ ರೂಪಾಯಿ ಎಗರಿಸಿರುವ ಖದೀಮರು. ಮೊಬೈಲ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಭಾಸ್ಕರ್ ಶಾಕ್ ಆಗಿದ್ದಾರೆ.

ಕಲಬುರಗಿ: ವೀಸಾ ಕೊಡಿಸುವುದಾಗಿ ಹೇಳಿ 1.80 ಲಕ್ಷ ಪಡೆದು ಮೋಸ

ವಂಚನೆ ಬಗ್ಗೆ ಚಂದ್ರಾಲೈಔಟ್‌ ಪೊಲೀಸ್ ಠಾಣೆಗೆ ದೂರು ನೀಡಿರುವ ಹೋಟೆಲ್ ಮಾಲೀಕ. ಚೆಕ್ ಮಾಡಿದಾಗ ಮುಷರಫ್‌ ಖಾನ್‌, ಮೊಹಮ್ಮದ್‌ ಸಿರಾಜ್‌  ಹೆಸರಿನ ಖಾತೆಯಿಂದ ವಂಚನೆಯಾಗಿದ್ದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಮುಂದುವರಿಸಿರುವ ಪೊಲೀಸರು.

click me!