ಬೆಂಗಳೂರು ಮನೆಮುಂದೆ ನಾಯಿ ಗಲೀಜು ಮಾಡಿಸಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಕೊಲೆಗೈದ ಪಾಪಿಗಳು

By Sathish Kumar KH  |  First Published Apr 11, 2023, 11:17 AM IST

ನಾಯಿಯನ್ನು ಕರೆತಂದು ಮಲ ವಿಸರ್ಜನೆ ಮಾಡಿಸುತ್ತಿದ್ದವರಿಗೆ ಬುದ್ಧಿ ಹೇಳಿದ ಮನೆ ಮಾಲೀಕನನ್ನೇ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ಬೆಂಗಳೂರಿನ ಸೂಲದೇವನಹಳ್ಳಿಯಲ್ಲಿ ನಡೆದಿದೆ. 


ಬೆಂಗಳೂರು (ಏ.11): ಪ್ರತಿನಿತ್ಯ ಮನೆಯ ಮುಂದೆ ಬಂದು ನಾಯಿಯನ್ನು ಕರೆತಂದು ಮಲ ವಿಸರ್ಜನೆ ಮಾಡಿಸುತ್ತಿದ್ದವರಿಗೆ ಬುದ್ಧಿ ಹೇಳಿದ ಮನೆ ಮಾಲೀಕನನ್ನೇ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ದುರ್ಘಟನೆ ಬೆಂಗಳೂರಿನ ಸೂಲದೇವನಹಳ್ಳಿಯಲ್ಲಿ ನಡೆದಿದೆ. 

ವಿವಿಧ ತಳಿಯ ನಾಯಿಗಳನ್ನು ಸಾಕುವುದು ಪ್ರಾಣಿ ಪ್ರಿಯರ ಹವ್ಯಾಸವಾಗಿರುತ್ತದೆ. ಇದಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಯಾವುದೇ ನಾಯಿಗಳ ಮಾಲೀಕರು ರಸ್ತೆ, ಬೀದಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ತಮ್ಮ ನಾಯಿಗಳನ್ನು ಮಲ ವಿಸರ್ಜನೆ ಮಾಡಿಸಿದರೆ ಸಂಬಂಧಪಟ್ಟ ನಾಯಿಗಳ ಮಾಲೀಕರೇ ಅದನ್ನು ಸ್ವಚ್ಛಗೊಳಿಸಬೇಕು ಎಂದು ನಿಯಮವಿದೆ. ಆದರೆ, ಯಾರೊಬ್ಬರೂ ಕೂಡ ಈ ನಿಯಮವನ್ನು ಪಾಲಿಸುವುದಿಲ್ಲ. ಇನ್ನು ಇಲ್ಲೊಬ್ಬ ನಾಯಿ ಸಾಕಿದ ಮಾಲೀಕ ಬೇರೊಬ್ಬರ ಮನೆಮುಂದೆ ಹೋಗಿ ಮಲ ವಿಸರ್ಜನೆ ಮಾಡಿಸಿ, ಬುದ್ಧಿ ಹೇಳಿದ್ದಕ್ಕೆ ಅವರನ್ನೇ ಕೊಲೆಗೈದ ಘಟನೆ ನಡೆದಿದೆ.

Tap to resize

Latest Videos

ಆಟವಾಡುವುದಾಗಿ ಹೇಳಿ ಮೀನು ಹಿಡಿಯಲು ಹೋದ ಮಕ್ಕಳು: ಕೆರೆಯಲ್ಲಿ ಮುಳುಗಿ ಸಾವು

ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ: ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುನಿರಾಜು ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಇದೇ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಮುರುಳಿ ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂಬ ಮೂವರು ಮುನಿರಾಜು ಅವರನ್ನು ಕೊಲೆ ಮಾಡಿದ ಅರೋಪಿಗಳಾಗಿದ್ದಾರೆ. ಪ್ರತಿನಿತ್ಯ ಮುನಿರಾಜು ಅವರ ಮನೆಮುಂದೆ ಪ್ರಮೋದ್ ಎಂಬಾತ ತನ್ನ ನಾಯಿ ಕರೆದುಕೊಂಡು ಬರುತ್ತಿದ್ದನು. ಅಲ್ಲಿ ನಾಯಿಯಿಂದ ವಿಸರ್ಜನೆ ಮಾಡಿಸಿ ಗಲೀಜು ಮಾಡಿ ಹೋಗುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯಿತು.

ಬುದ್ಧಿ ಹೇಳಿದರೂ ಕೇಳದೇ ಪುಂಡಾಟ ಮುಂದುವರಿಕೆ: ಇನ್ನು ಪ್ರಮೋದ್‌ ಎಂಬಾತನಿಗೆ ನೀನು ನಾಯಿ ಕರೆದುಕೊಂಡು ಬಂದು ಇಲ್ಲಿ ಗಲೀಜು ಮಾಡಿಸಿದರೆ ನಮ್ಮ ಮನೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಇದ್ದು, ಅವರ ಸಂಚಾರಕ್ಕೆ ಸಮಸ್ಯೆ ಆಗಲಿದೆ ಎಂದು ಬುದ್ಧಿ ಹೇಳಿದ್ದಾರೆ. ಪುನಃ ಅದನ್ನೇ ಮುಂದುವರೆಸಿದಾಗ ನಾಯಿ ಕರೆದುಕೊಂಡು ಬರದಂತೆ ಬೈದು ಹೇಳಿದ್ದಾರೆ. ಇದಾದ ನಂತರವೂ ತನ್ನ ಹಠವನ್ನೇ ಮುಂದುವರೆಸಿದ ಪ್ರಮೋದ್‌ ತನ್ನ ಸ್ನೇಹಿತನೊಂದಿಗೆ ನಾಯಿಯನ್ನು ಕರೆತಂದು ಮುನಿರಾಜು ಮನೆ ಮುಂದೆ ನಾಯಿಯಿಂದ ಗಲೀಜು ಮಾಡಿಸಿದ್ದಲ್ಲದೇ, ಸಿಗರೇಟ್‌ ಸೇದಿ ಮತ್ತಷ್ಟು ಸಮಸ್ಯೆ ಉಂಟು ಮಾಡಿದ್ದಾರೆ. 

ಪೊಲೀಸ್‌ ಠಾಣೆಗೆ ದೂರು ನೀಡಿದ ಮುನಿರಾಜು: ಇನ್ನು ಮನೆಯ ಮಾಲೀಕ ಮುನಿರಾಜು ಅವರು ಎಷ್ಟೇ ಬುದ್ಧಿ ಹೇಳಿದರೂ ಕೇಳದ ಪ್ರಮೋದ್‌ಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಸೂಲದೇವನಹಳ್ಳಿ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಪ್ರಮೋದ್‌ ಮತ್ತು ಆತನ ಸ್ನೇಹಿತ ರವಿಕುಮಾರ್‌ ಅವರನ್ನು ಕರೆಸಿ ಬೈದು, ಬುದ್ಧಿ ಹೇಳಿ ಕಳುಹಿಸಿದ್ದಾರೆ. ಜೊತೆಗೆ, ಇಬ್ಬರಿಂದಲೂ ಈ ರೀತಿ ಮತ್ತೊಮ್ಮೆ ಮಾಡುವುದಿಲ್ಲ ಎನ್ನುವಂತೆ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಾಗಿತ್ತು. ಇದರಿಂದ ತೀವ್ರ ಕುಪಿತಗೊಂಡ ಅವರು ಮನೆಯಲ್ಲಿ ಬಂದು ಪತ್ನಿಗೆ ವಿಚಾರ ತಿಳಿಸಿದ್ದಾರೆ. ನಂತರ, ಮೂವರೂ ಸೇರಿಕೊಂಡು ಮರ್ಯಾದೆ ಹೋಗಲು ಕಾರಣವಾದ ಮುನಿರಾಜು ಮೇಲೆ ಹಲ್ಲೆ ಮಾಡಲು ಸ್ಕೆಚ್‌ ಹಾಕಿದ್ದಾರೆ.

ಆಟವಾಡುವಾಗ ಹಾವು ಕಚ್ಚಿದರೂ ಮನೆಯಲ್ಲಿ ತಿಳಿಸದ ಬಾಲಕ: ಬಾಯಲ್ಲಿ ನೊರೆ ಬಂದು ಸಾವು 

ಪೊಲೀಸರು ಕರೆದು ಬೈದಿದ್ದಕ್ಕೆ ಕೊಲೆಗೆ ಸ್ಕೆಚ್: ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದರಿಂದ ಮರ್ಯಾದೆ ಹೋದಂತಾಗಿದ್ದ ಪ್ರಮೋದ್‌ ಹಾಗೂ ಆತನ ಪತ್ನು ಮರುದಿನ ಬಂದು ಮುನಿರಾಜು ಮನೆಯ ಬಳಿ ನಾಯಿಯಿಂದ ಗಲೂಜು ಮಾಡಿಸಿ ಗಲಾಟೆ ತೆಗೆದಿದ್ದಾರೆ. ಇನ್ನು ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆತನ ಸ್ನೇಹಿತ ರವಿಕುಮಾರ್‌ನನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ಪ್ರಮೋದ್ ಮತ್ತು ರವಿಕುಮಾರ್ ಸೇರಿಕೊಂಡು ಮುನಿರಾಜುಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ತೀವ್ರ ತರಹದ ಹಲ್ಲೆ ಮಾಡಿದ್ದರಿಂದ ಮುನಿರಾಜು ಸ್ಥಳದಲ್ಲಿಯೇ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ. 

ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಾಥ್: ಈ ಘಟನೆಯಲ್ಲಿ ಮುನಿರಾಜು ಅವರ ಸಹಾಯಕ್ಕೆಂದು ಬಂದಿದ್ದ ಮುರುಳಿ ಎಂಬಾತನ ಮೇಲೂ  ತೀವ್ರ ಹಲ್ಲೆ ಮಾಡಲಾಗಿದೆ. ಈಗ ಮುರುಳಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇನ್ನು ಈ ಕೊಲೆ ಘಟನೆಗೆ ಪಗ್ರಮೋದ್ ಅವರ ಪತ್ನಿ ಪಲ್ಲವಿ ಕೂಡ ಸಾಥ್‌ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಅರೋಪಿಗಳ ಅರೆಸ್ಟ್ ಮಾಡಿದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

click me!