ಬೆಂಗಳೂರಿನ ಹೊರವಲಯ ಆನೇಕಲ್‌ನ ಮನೆಯೊಂದರಲ್ಲಿ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿದ ಕ್ರೂರಿ ತಂದೆ ಕೊನೆಗೆ ತಾನೂ ನೇಣು ಬಿಗಿದುಕೊಂಡಿರುವ ದುರ್ಘಟನೆ ನಡೆದಿದೆ.
ಆನೇಕಲ್ (ಮೇ 12): ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯ ಆನೇಕಲ್‌ನ ಮನೆಯೊಂದರಲ್ಲಿ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿದ ಕ್ರೂರಿ ತಂದೆ ಕೊನೆಗೆ ತಾನೂ ನೇಣು ಬಿಗಿದುಕೊಂಡಿರುವ ದುರ್ಘಟನೆ ನಡೆದಿದೆ.
ಬೆಂಗಳೂರಿನ ಆನೇಕಲ್‌ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿದ್ದಾನೆ. ಪತ್ನಿ ಶೋಕಿಗೆ ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣು ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಆನೇಕಲ್ ತಾಲೂಕಿನ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ಘಟನೆ ನಡೆದಿದೆ. ಬೆಂಗಳೂರು ನಗರದ ಬಿಟಿಎಂ ಬಡಾವಣೆ ನಿವಾಸಿ ಹರೀಶ್ ( 35) ಪ್ರಜ್ವಲ್(6) ರಿಷಬ್(4) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ (ಮೇ 10ರಂದು) ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Bengaluru Accident: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್: ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಮಹಿಳೆ
ಆತ್ಮಹತ್ಯೆಗೂ ಮುನ್ನ ಸ್ನೇಹಿತನಿಗೆ ಕರೆ: ಕೊಪ್ಪದ ನಿರ್ಮಣ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹರೀಶ್, ಪತ್ನಿಯ ಶೋಕಿ ಹುಚ್ಚಿನಿಂದ ಬೇಸತ್ತು ಮೊದಲು ತನ್ನ ಇಬ್ಬರೂ ಗಂಡು ಮಕ್ಕಳನ್ನು ಫ್ಯಾನಿಗೆ ನೇಣು ಹಾಕಿ ಸಾಯಿಸಿ, ಕೊನೆಗೆ ತಾನೂ ಇನ್ನೊಂದು ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಆತ್ಮಹತ್ಯೆಗೂ ಮೊದಲು ಮೃತ ಹರೀಶ್ ತನ್ನ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಕಾಲ್ ಮಾಡಿದ್ದಾನೆ. ತಾನು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತೇನೆ. ತನಗೆ ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಪತ್ನಿಗೆ ನೀಡುವಂತೆ ಹೇಳಿದ್ದಾನೆ. ಇನ್ನು ಹರೀಶ್ ವಾಟ್ಸಾಪ್ ಕರೆ ಮಾಡಿದ ಕೂಡಲೇ ಆತನಿರುವ ಲೊಕೇಷನ್ ಬಗ್ಗೆ ಹುಡುಕಾಟ ಮಾಡಿದರೂ ಸೂಕ್ತ ಲೊಕೇಷನ್ ತಿಳಿಯಲಿಲ್ಲ. ಇನ್ನು ಮೂರು ದಿನಗಳ ನಂತರ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹರೀಶ್ ಹಾಗೂ ಆತನ ಮಕ್ಕಳ ಶವಗಳು ಪತ್ತೆಯಾಗಿವೆ.
ಅಕ್ಕನ ಮಗಳನ್ನು ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ: 2007 ರಲ್ಲಿ ಅಕ್ಕನ ಮಗಳು ಅನನ್ಯಳನ್ನು ಹರೀಶ್ ಪ್ರೀತಿಸಿ ಮದುವೆ ಆಗಿದ್ದನು. ಬಳಿಕ ಬೆಂಗಳೂರಿನ ಗಾರ್ವೇಬಾವಿ ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದನು. ವಿವಾಹದ ಬಳಿಕ ಪತ್ನಿ ಅನನ್ಯ ಪದೇ ಪದೇ ಗಲಾಟೆ ಮಾಡುತ್ತಿದ್ದಳು. ಪತ್ನಿ ಅನನ್ಯಳ ಐಷಾರಾಮಿ ಜೀವನಕ್ಕೆ ಹಣವನ್ನು ಹೊಂದಿಸಲಾಗದೇ ನಿನ್ನ ಜೀವನದ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಹರೀಶ್ ಸಾಕಷ್ಟು ಬುದ್ಧಿ ಹೇಳಿ ಗಲಾಟೆಯನ್ನೂ ಮಾಡಿದ್ದಾನೆ. ಇನ್ನು ಇವರಿಬ್ಬರ ಗಲಾಟೆಗೆ ಸಂಬಂಧಿಸಿದಂತೆ 2015ರಲ್ಲಿ ಹಿರಿಯ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯನ್ನೂ ಮಾಡಲಾಗಿತ್ತು.
ಪರ ಪುರುಷನೊಂದಿಗೆ ಓಡೊಹೋದ ಹೆಂಡತಿ: ಮನೆಯಲ್ಲಿ ಹಿರಿಯರ ರಾಜಿ ಪಂಚಾಯಿತಿ ಬಳಿಕ ಹರೀಶ್, ಪತ್ನಿಯನ್ನು ಕರೆದುಕೊಮಡು ಬಂದು ಪೋಷಕರ ಮನೆಯಲ್ಲಿ ವಾಸವಾಗಿದ್ದಾನೆ. ಪುನಃ 2021 ರ ಬಳಿಕ ಪತ್ನಿ ಪ್ರತ್ಯೇಕ ಮನೆ ಮಾಡಲು ಒತ್ತಾಯ ಮಾಡಿದ್ದಾಳೆ. ಪತ್ನಿಯಿಂದ ಹೆಚ್ಚಿನ ಒತ್ತಡ ಬಂದಿದ್ದರಿಂದ ಅನಿವಾರ್ಯವಾಗಿ ಹರೀಶ್ ಪ್ರತ್ಯೇಕ ಮನೆ ಮಾಡಿ, ಹೆಂಡತಿ - ಮಕ್ಕಳೊಂದಿಗೆ ವಾಸವಾಗಿದ್ದಾನೆ. ಆದರೆ, ಪ್ರತ್ಯೇಕ ಮನೆ ಮಾಡಿದ ಕೆಲವೇ ದಿನಗಳಲ್ಲಿ ಆತನ ಹೆಂಡತಿ ಪರ ಪುರುಷನೊಂದಿಗೆ ಪರಾರಿ ಆಗಿದ್ದಾಳೆ. ಹೆತ್ತವರನ್ನು ಬಿಟ್ಟು ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದು, ಕೆಲಸ ಮಾಡುತ್ತಾ ತಾಯಿ ಇಲ್ಲದೇ ತಬ್ಬಲಿಯಾದ ಮಕ್ಕಳನ್ನು ಪೋಷಣೆ ಮಾಡುವುದು ಹರೀಶ್‌ಗೆ ಭಾರಿ ಹಿಂಸೆಯಾಗಿತ್ತು.
BENGALURU : ಅಪಾರ್ಟ್‌ಮೆಂಟ್‌ಗೆ ಪೇಂಟಿಂಗ್ ಮಾಡುವಾಗ ಕೆಳಗೆ ಬಿದ್ದು ಪೇಂಟರ್ ಸಾವು
ಹಣ ನೀಡುವಂತೆ ಬೆದರಿಕೆ: ಇನ್ನು ಗಂಡನನ್ನು ಬಿಟ್ಟು ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿ ಅನನ್ಯ ಪದೇ ಪದೇ ಹಣಕ್ಕೆ ಬೇಡಿಕೆಯಿಟ್ಟು ಹರೀಶ್‌ಗೆ ಕಿರುಕುಳ ನೀಡುತ್ತಿದ್ದಂತೆ. ಇನ್ನು ನೀನು ಹಣ ನೀಡಿದಿದ್ದರೆ ಮನೆ ಬಳಿ ಬಂದು ರಂಪಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಪತ್ನಿ ಅನನ್ಯಳಿಂದ ಪದೇ ಪದೇ ಹರೀಶ್‌ಗೆ ಕಿರುಕುಳ ನೀಡುವ ಜೊತೆಗೆ, ಆತನ ತಂದೆ- ತಾಯಿಗೂ ಕರೆ ಮಾಡಿ ಗಲಾಟೆ ಮಾಡಿದ್ದಾಳೆ. ಹೆಂಡತಿಯ ಹಣದಾಸೆ ಮತ್ತು ಐಷಾರಾಮಿ ಜೀವನಕ್ಕೆ ಬೇಸತ್ತ ಪರಿ ಹರೀಶ್, ಮನೆಯಲ್ಲಿ ಮಕ್ಕಳನ್ನು ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.