ಪೊಲೀಸರಿಗೆ ಮಾಹಿತಿ ಕೊಟ್ಟ ಮುಸ್ಲಿಂ ವ್ಯಕ್ತಿ: ಬೆಂಗಳೂರಲ್ಲಿ ಅಕ್ರಮ ಗೋ ಸಾಗಾಟ ಪತ್ತೆ

By Suvarna NewsFirst Published Jan 11, 2020, 5:27 PM IST
Highlights

ಬೆಂಗಳೂರಲ್ಲಿ ಅಕ್ರಮ ಗೋಸಾಗಾಟ ಪತ್ತೆಯಾಗಿದೆ. ಸಿಕ್ಕ ಒಂದು ಸಣ್ಣ ಸುಳಿವಿನಿಂದ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹಸುಗನ್ನು ರಕ್ಷಿಸಿದ್ದಾರೆ. ವಿಶೇಷ ಅಂದ್ರೆ ಅಕ್ರಮ ಗೋಸಾಗಾಟ ಮಾಡಿತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದು, ಮುಸ್ಲಿಂ ವ್ಯಕ್ತಿ.

ಬೆಂಗಳೂರು, (ಜ.11): ಮುಸ್ಲಿಂ ವ್ಯಕ್ತಿ ಕೊಟ್ಟ ಒಂದು ಮಾಹಿತಿ ಮೇರೆಗೆ ಬೆಂಗಳೂರಿನ ಗಿರಿನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗೋಸಾಗಾಟ ಪತ್ತೆಯಾಗಿದೆ.

 ಅಕ್ರಮ ಗೋಸಾಗಾಣಿಕೆ ಬಗ್ಗೆ ಮುಸ್ಲಿಂ ವ್ಯಕ್ತಿಯೊಬ್ಬ ಬೆಂಗಳೂರಿನ ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಕಾರ್ಯಚರಣೆಗಿಳಿದ ಗಿರಿನಗರ ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್ ತಂಡ ಲಾರಿಯನ್ನು ತಡೆದು 10 ಹಸುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಮ ಗೋ ಸಾಗಣೆಗೆ ಮಂಗಳೂರು ಮುಸ್ಲಿಮರ ವಿರೋಧ

 ಲಾರಿ ಚಾಲಕ ಬಾಬು ಪರಾರಿಯಾಗಿದ್ದು, ಕ್ಲೀನರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದು ವಿಚಾರಣೆ ನಡೆಸಿದ್ದಾರೆ. ಇಂದು [ಶನಿವಾರ] ಲಾರಿಯಲ್ಲಿ 10 ಹಸುಗಳನ್ನು ತುಂಬಿಕೊಂಡು ಬೆಂಗಳೂರಿನಿಂದ  ಬಳ್ಳಾರಿ, ಹೊಸಪೇಟೆ ಮಾರ್ಗವಗಿ ತಮಿಳುನಾಡಿಗೆ ಸಾಗಿಸಲು ಯತ್ನಿಸಿದ್ದರು

ಬೆಂಗಳೂರಿನಲ್ಲಿ ಅಕ್ರಮ ಗೋಸಾಗಾಣಿಕೆ ಕಡಿಮೆಯಾಗಿತ್ತು. ಮತ್ತೊಂದೆಡೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಕ್ರಮ ಗೋಸಾಗಾಣಿಕೆ ಪ್ರಕರಣಗಳು ಕೇಳಿಬಂದಿದ್ದವು. ಆದ್ರೆ, ಇದೀಗ ದಕ್ಷಿಣ ಕನ್ನಡದಲ್ಲಿ  ಅಕ್ರಮ ಗೋ ದಂಧೆಗೆ ಮುಸ್ಲಿಂ ‌ಸಂಘಟನೆಗಳು ಬ್ರೇಕ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

click me!