ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್‌ನ ಪುತ್ರ ಅತ್ತಿಗುಪ್ಪೆ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಗುರುವಾರ ನಡೆದಿದೆ.
ಬೆಂಗಳೂರು (ಆ.10): ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್‌ನ ಪುತ್ರ ಅತ್ತಿಗುಪ್ಪೆ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ದುರ್ಘಟನೆ ಗುರುವಾರ ನಡೆದಿದೆ. ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಸಾವಿನ ಬಗ್ಗೆ ತಂದೆ ಕೆಲವು ವಿಚಾರಗಳನ್ನು ಪೊಲೀಸರಿಗೆ ಹಂಚಿಕೊಂಡಿದ್ದು, ಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಅತ್ತಿಗುಪ್ಪೆ ವಾರ್ಡ್ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಪುತ್ರನಾಗಿರುವ ಗೌತಮ್ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಕಾಂಗ್ರೆಸ್ ಪಕ್ಷದಿಂದ ದೊಡ್ಡಯ್ಯ ಬೆಂಗಳೂರು ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿದ್ದರು. ಇನ್ನು ಅವರ ಕಿರಿಯ ಪುತ್ರ ಆಗಿರುವ ಗೌತಮ್ ಬಿಬಿಎಂಪಿಯಲ್ಲಿ ಸಾಕಷ್ಟು ಗುತ್ತಿಗೆದಾರರಿಗೆ ಹಣವನ್ನು ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕುಟುಂಬ ಸದಸ್ಯರು ಗೌತಮ್ ಗುತ್ತಿಗೆದಾರ ಅಲ್ಲವೆಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ಮಾಡುತ್ತಿದ್ದು, ಸಾವಿಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Bengaluru:ಸಿಎಂ, ಡಿಸಿಎಂ ಯಾರೇ ಫ್ಲೆಕ್ಸ್, ಬ್ಯಾನರ್ ಹಾಕಿದ್ರೂ 50 ಸಾವಿರ ರೂ. ದಂಡ ಕಟ್ಬೇಕು
ಅತ್ತಿಗುಪ್ಪೆಯ ಮಾಜಿ ಕಾರ್ಪೋರೇಟರ್ ಗೌತಮ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ಅವರೇ ತಮ್ಮ ಪುತ್ರನ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪುತ್ರ ಗುತ್ತಿಗೆದಾರನಲ್ಲ. ಅವನ ಹೆಸರಲ್ಲಿ ಯಾವುದೇ ಗುತ್ತಿಗೆದಾರರ ಪರವಾನಗಿ ಇಲ್ಲ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದೆವು. ಆದರೆ, ಗುತ್ತಿಗೆದಾರ ಆತ್ಮಹತ್ಯೆಗೆ ಶರಣು ಎನ್ನುವುದು ಸುಳ್ಳು ಸುದ್ದಿಯಾಗಿದೆ. ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ಮತ್ತೊಂದೆಡೆ ನಾವು ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ದ ಬಿಜೆಪಿಯವರು ಪಿತೂರಿ ಮಾಡಿದ್ದಾರೆ ಎಂದು ಮೃತ ಗೌತಮ್ ಮಾವ ಆನಂದ್ ಹೇಳಿಕೆ ನೀಡಿದ್ದಾರೆ.
ಮೃತ ಗೌತಮ್ ತಂದೆ ದೊಡ್ಡಣ್ಣ ಹೇಳಿದ್ದೇನು?
ನನ್ನ ಕಿರಿಯ ಮಗ ಗೌತಮ್ ಅವರು ಯಾವುದೇ ವ್ಯವಹಾರ ಮಾಡುತ್ತಿರಿಲಿಲ್ಲ. ಕೆಲವು ದಿನಗಳಿಂದ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ನಾವು ಎಷ್ಟೇ ಕೇಳಿದರೂ ಯಾವುದೇ ಮಾಹಿತಿಯನ್ನೂ ನೀಡುತ್ತಿರಲಿಲ್ಲ. ಆದರೂ, ಸ್ವಲ್ಪ ದಿನಕ್ಕೆ ಸರಿಹೋಗುತ್ತದೆ ಎಂದು ನಾವು ಸುಮ್ಮನಿದ್ದೆವು. ಜೊತೆಗೆ, ಮದುವೆ ಮಾಡಿದರೆ ಸರೊ ಹೋಗುತ್ತದೆ ಎಂದು ಕಳೆದ ಎರಡು ತಿಂಗಳಿಂದ ಹುಡುಗಿ ಹುಡುಕಾಟ ಮಾಡುತ್ತಿದ್ದೆವು. ಆದರೂ, ಮಗ ಮನೆಯೊಂದಿಗೆ ಯಾರೊಂದಿಗೂ ಮಾತನಾಡದೇ ಸುಮ್ಮನೇ ಇರುತ್ತಿದ್ದನು. ಮನೆಯವರೊಂದಿಗೆ ನಿನ್ನೆ ಮಧ್ಯಾಹ್ನ ಊಟ ಮಾಡಿ ರೂಮಿಗೆ ತೆರಳಿದ್ದನು. ಇದಾದ ನಂತರ, ಬಾಗಿಲು ತೆರೆದು ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಕರೆಯೋಕೆ ರೂಮಿಗೆ ಹೋದಾಗ ಬಾಗಿಲು ತೆರೆಯಲಿಲ್ಲ. ಜೊತೆಗೆ, ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಆಗಿತ್ತು. ಬಾಗಿಲು ತೆಗೆದು ನೋಡಿದರೆ ಹೀಗೆ ದುರಂತ ಸಂಭವಿಸಿತ್ತು ಎಂದು ಹೇಳಿದರು.
Bengaluru: ಬಿಬಿಎಂಪಿ 500 ಗುತ್ತಿಗೆದಾರರಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಕೆ
ಹುಡುಗಿ ಚೆನ್ನಾಗಿದ್ದಾಳೆ ಮದುವೆ ಮಾಡಿ ಎಂದಿದ್ದ: ಗೌತಮ್ ನಾಲ್ಕೈದು ತಿಂಗಳಿಂದ ಡಿಪ್ರೆಷನ್ ನಲ್ಲಿದ್ದನು. ಕಾರಣ ಕೇಳಿದರೂ ಏನೂ ಹೇಳುತ್ತಿರಲಿಲ್ಲ. ನೀನು ಕೆಲಸಕ್ಕೆ ಹೋಗೋದು ಬೇಡವೆಂದು ಹೇಳಿದಾಗ, ಸರಿ ಎಂದು ಮನೆಯಲ್ಲಿಯೇ ಉಳಿದುಕೊಂಡಿದ್ದನು. ಇನ್ನು ನಮಗೆ ಮದುವೆ ಮಾಡುವಂತೆ ಹೇಳಿದ್ದನು. ಹಲವು ಫೋಟೋಗಳನ್ನು ತೋರಿಸಿದ್ದೆವು. ಆದರೆ, ಮೊನ್ನೆಯಷ್ಟೇ ಒಂದು ಹುಡುಗಿಯ ಫೋಟೋ ತೋರಿಸಿದಾಗ ಆಕೆ ಚೆನ್ನಾಗಿದ್ದಾಳೆ ಅವರ ಮನೆಯಲ್ಲಿ, ಮದುವೆ ಕುರಿತು ಮುಂದಿನ ಮಾತುಕತೆ ಮಾಡವಂತೆ ತಿಳಿಸಿದ್ದನು. ಎಲ್ಲವೂ ಪ್ರೊಸೆಸ್‌ನಲ್ಲಿತ್ತು. ಆದರೆ, ಈಗ ದುರಂತ ಮಾಡಿಕೊಂಡಿದ್ದಾನೆ ಎಂದು ಮೃತ ಗೌತಮ್ ತಂದೆ ದೊಡ್ಡಣ್ಣ ಭಾವುಕರಾಗಿ ಹೇಳಿದರು.