ಎಣ್ಣೆ ಪಾರ್ಟಿಯಲ್ಲಿ ಹೆಚ್ಚು ಮದ್ಯ ಸೇವನೆ ಮಾಡುವುದಿಲ್ಲವೆಂದು ಹೇಳಿದ ಸ್ನೇಹಿತನನ್ನೇ ಕೊಲೆಗೈದು ಪೊದೆಯಲ್ಲಿ ಬೀಸಾಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಡಿ.23): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾರ್ಟಿ ಮಾಡೋಣ ಬಾ ಎಂದು ಕರೆಸಿಕೊಂಡು, ನೀನು ಜಾಸ್ತಿ ಎಣ್ಣೆ ಕುಡಿಯುತ್ತಿಲ್ಲವೆಂದು ಕ್ಯಾತೆ ತೆಗೆದು ಸ್ನೇಹಿತನನ್ನೇ ಕೊಲೆಗೈದು ಪೊದೆಯಲ್ಲಿ ಬೀಸಾಡಿ ಬಂದಿರುವ ದುರ್ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ದುಡಿಮೆಗೆ ಬಂದು ವಾಸವಾಗಿರುವ ಅನೇಕ ಬ್ಯಾಚುಲರ್ಸ್‌ಗಳು ಆಗಿಂದಾಗ್ಗೆ ಎಣ್ಣೆ ಪಾರ್ಟಿ ಮಾಡುವುದು ಸಾಮಾನ್ಯವಾಗಿದೆ. ಇದೇ ರೀತಿ ಎಣ್ಣೆ ಪಾರ್ಟಿ ಮಾಡೋಣ ಬಾ ಎಂದು ಕರೆಸಿಕೊಂಡು ತನ್ನ ಸ್ನೇಹಿತನಿಗೆ ಸಾಕಾಗುಷ್ಟು ಎಣ್ಣೆಯನ್ನು ಕುಡಿಸಿದ್ದಾನೆ. ನಂತರ, ನನಗೆ ಎಣ್ಣೆ ಸಾಕು ಇನ್ನುಮೇಲೆ ಕುಡಿಯುವುದಕ್ಕೆ ಆಗುವುದಿಲ್ಲ ಎಂದು ಹೇಳಿದರೂ ಕೇಳದೆ ನನಗೋಸ್ಕರ ಕಂಪನಿ ಕೊಡುವುದಕ್ಕೆ ಮತ್ತಷ್ಟು ಕುಡಿ ಎಂದು ಹೇಳಿದ್ದಾನೆ. ಆತನ ಮಾತು ಕೇಳಿ ಮತ್ತೊಂದಿಷ್ಟು ಎಣ್ಣೆ ಸೇವನೆ ಮಾಡಿ, ಇನ್ಮೇಲೆ ಎಣ್ಣೆ ಕುಡಿಯೋಕಾಗಲ್ಲ. ನಿನ್ನ ಸಹವಾಸವೇ ಸಾಕು. ನೀನು ಎಷ್ಟು ಬೇಕೋ ಅಷ್ಟು ಕುಡಿದು ಬಾ ಎಂದು ಹೇಳಿ ಕೋಣೆಯಿಂದ ಹೊರಬಂದು ಖಾಲಿ ನಿವೇಶನದ ಬಳಿ ಕುಳಿತುಕೊಂಡಿದ್ದಾನೆ.
35 ವರ್ಷ ಸಹಬಾಳ್ವೆ ನಡೆಸಿದ ಪತ್ನಿಯನ್ನು ಇಳಿವಯಸ್ಸಿನಲ್ಲಿ ಕೊಂದ ಪತಿ.. ಕಾರಣ ಕೇಳಿದ್ರೆ ನೀವೂ ಬೆಚ್ಚಿ ಬೀಳ್ತಿರಿ
ಆದರೆ, ತನ್ನ ಸ್ನೇಹಿತನಿಗೆ ನಾನಾಗೇ ಎಣ್ಣೆ ಪಾರ್ಟಿ ಕೊಡಿಸುತ್ತಿದ್ದರೂ ಕುಡಿಯುವುದಕ್ಕೆ ನಾಟಕ ಮಾಡುತ್ತಿದ್ದಾನೆಂದು ಭಾವಿಸಿ ಪುನಃ ಆತನನ್ನು ಖಾಲಿ ನಿವೇಶನದ ಬಳಿ ಕುಳಿತ ಜಾಗದಿಂದ ಒಂದು ಉದ್ದನೆಯ ಸ್ಕಾರ್ಫ್ ರೀತಿಯ ಉದ್ದನೆಯ ಬಟ್ಟೆಯನ್ನು ತೆಗೆದುಕೊಂಡು ಎಣ್ಣೆ ಸಾಕು ಎಂದು ಹೊರಗೆ ಕುಳಿತವನ ಕುತ್ತಿಗೆಗೆ ಹಾಕಿ ಎಳೆದುಕೊಂಡು ಹೋಗಲು ಮುಂದಾಗಿದ್ದಾನೆ. ಆದರೆ, ಈ ವೇಳೆ ಬಟ್ಟೆ ಕುತ್ತಿಗೆಗೆ ಬಿಗಿಯಾಗಿದ್ದು, ಉಸಿರಾಡಲಾಗದೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆಗ ಭಯಗೊಂಡು ಮೃತದೇಹವನ್ನು ಏನು ಮಾಡಬೇಕು ಎಂದು ಗೊತ್ತಾಗಲೇ ಖಾಲಿ ನಿವೇಶನದ ಬಳಿ ಇದ್ದ ಗಿಡದ ಪೊದೆಯಲ್ಲಿ ಸ್ನೇಹಿತನ ಮೃತದೇಹವನ್ನು ಬೀಸಾಡಿ ಹೋಗಿದ್ದಾರೆ.
ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಡಿ.18ರಂದು ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಎಣ್ಣೆ ಸೇವನೆ ಮಾಡೊಲ್ಲವೆಂದು ಹೇಳಿ ಕೊಲೆಯಾದ ಯುವಕನನ್ನು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಸ್ನೇಹಿತ ಬಾಬು ಲಾಲ್ ಸಿಂಗ್ ಆಗಿದ್ದಾನೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು, ತನಿಖೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಬೆಂಗಳೂರು (ಡಿ.22): ಮಸಾಜ್ ಪಾರ್ಲರ್, ಸ್ಪಾಗಳ ಹೆಸರಲ್ಲಿ ಬಾಡಿಗೆ ಮನೆಗಳಲ್ಲಿ ವೇಷ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಅಲಿಯಾಸ್ ಸಂಜು ಬಂಧಿತ ಆರೋಪಿ. ಹೊರರಾಜ್ಯಗಳಿಂದ ಬರುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ. ಯುವತಿಯರಿಗೆ ಉದ್ಯೋಗ, ಹಣದ ಆಮಿಷೊಡ್ಡಿ ಮಾನವ ಕಳ್ಳಸಾಗಾಣಿಕೆ ಮೂಲಕ ದಂಧೆ ನಡೆಸುತ್ತಿದ್ದ ಆರೋಪಿಯಾಗಿದ್ದಾನೆ.
700 ರೂ. ಸಾಲಕ್ಕೆ ನಡೆದಿದ್ದ ಕೊಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವೇಶ್ಯೆವಾಟಿಕೆ ದಂಧೆ ನಡೆಸಿರುವ ಆರೋಪಿ. ಮಡಿವಾಳ, ಪುಟ್ಟೇನಹಳ್ಳಿ, ಮೈಕೋ ಲೇಔಟ್, ಎಸ್ ಜಿ ಪಾಳ್ಯ, ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ದಂಧೆ. ಈ ಹಿಂದೆ ಇದೇ ಕಾರಣಕ್ಕೆ ಆರು ಬಾರಿ ಜೈಲು ಸೇರಿದ್ರೂ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದ ಆರೋಪಿ. ಪದೇಪದೆ ವೇಶ್ಯವಾಟಿಕೆ ನಡೆಸಿರುವ ಹಿನ್ನೆಲೆ ಇದೀಗ ಗೂಂಡಾ ಆ್ಯಕ್ಟ್ ಅಡಿ ಆರೋಪಿಯನ್ನ ಬಂಧಿಸಿದ ಸಿಸಿಬಿ ಪೊಲೀಸರು. ಜಾಮೀನು ಸಿಗದಂತೆ ಜೈಲು ಫಿಕ್ಸ್ ಮಾಡೋದು ಗ್ಯಾರೆಂಟಿಯಾಗಿದೆ.