Bengaluru Crime: ಹಣಕ್ಕೆ ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲ ಪತ್ತೆಹಚ್ಚಿದ ಸಿಸಿಬಿ

By Sathish Kumar KHFirst Published Dec 6, 2022, 3:15 PM IST
Highlights

ಹಣ ಕೊಟ್ಟರೆ ಪರೀಕ್ಷೆ ಬರೆಸದೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುವ ಖಾಸಗಿ ಇನ್ ಸ್ಟಿಟ್ಯೂಟ್  ಮೇಲೆ‌ ದಾಳಿ ನಡೆಸಿ ಅಕ್ರಮ ಜಾಲವನ್ನ ಸಿಸಿಬಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು (ಡಿ.6):  ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ನಕಲಿ ಅಂಕಪಟ್ಟಿ ಜಾಲ ದಿನೇ ದಿನೆ ಪ್ರಬಲವಾಗುತ್ತಿದ್ದು ಹಣ ಕೊಟ್ಟರೆ ಪರೀಕ್ಷೆ ಬರೆಸದೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುವ ದಂಧೆ ಸಕ್ರಿಯವಾಗಿದೆ.  ಇದಕ್ಕೆ‌ ಪೂರಕವೆಂಬಂತೆ  ಖಾಸಗಿ ಇನ್ ಸ್ಟಿಟ್ಯೂಟ್  ಮೇಲೆ‌ ದಾಳಿ ನಡೆಸಿ ಅಕ್ರಮ ಜಾಲವನ್ನ ಸಿಸಿಬಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಅಸಲಿ ಎಂಬಂತೆ ಬಿಂಬಿಸಿ ಪಿಯುಸಿ, ಪದವಿ ಸೇರಿ ವಿವಿಧ ರೀತಿಯ ನಕಲಿ ಅಂಕಪಟ್ಟಿಗಳನ್ನು ಸಿದ್ದಪಡಿಸಿ ಲಕ್ಷಾಂತರ ರೂಪಾಯಿ ಮಾರಾಟ ಮಾಡುತ್ತಿದ್ದ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಸಂಸ್ಥೆಯ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

1 ಸಾವಿರ ನಕಲಿ ಅಂಕಪಟ್ಟಿ ಪತ್ತೆ: ಕಳೆದ ಐದು ವರ್ಷಗಳಿಂದ ವಿಎಸ್ಎಸ್ ಸಂಸ್ಥೆಯ (VVS Institute) ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್,  ಶಾರದಾ, ಶಿಲ್ಪ‌ ಹಾಗೂ ರಾಜಣ್ಣ ಎಂಬುವರನ್ನು ಬಂಧಿಸಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (Karnataka Open University), ಅರುಣಾಚಲ ಪ್ರದೇಶ, ಹಿಮಾಚಲ‌ ಪ್ರದೇಶ, ಸಿಕ್ಕಿಂ (Sikkim), ಪಶ್ಚಿಮ ಬಂಗಾಳ‌ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನ 1 ಸಾವಿರಕ್ಕೂ ಹೆಚ್ಚು ನಕಲಿ ಅಂಕಪಟ್ಟಿ (Fake Marks Cards) ಹಾಗೂ 70ಕ್ಕೂ  ಸೀಲು, ಹಾರ್ಡ್ ಡಿಸ್ಕ್ (Hard disk), ಪ್ರಿಂಟರ್ ಹಾಗೂ ಮೊಬೈಲ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ  ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

Bengaluru: ನಕಲಿ ಅಂಕಪಟ್ಟಿ ಜಾಲ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ನಕಲಿ ಅಂಕಪಟ್ಟಿ ನೀಡಲು ಪ್ರತ್ಯೇಕ ಸಂಸ್ಥೆ: ಕಳೆದ ಐದು ವರ್ಷಗಳಿಂದ ವಿಎಸ್ ಎಸ್ ಇನ್‌ಸ್ಟಿಟ್ಯೂಟ್ ಕಾರ್ಯ ನಿರ್ವಹಿಸುತ್ತಿದ್ದು ಮಹಾಲಕ್ಷ್ಮೀ ಲೇಔಟ್ (Mahalakshmi Layout) ಸೇರಿ ಮೂರು ಕಡೆಗಳಲ್ಲಿ ಕಚೇರಿಗಳನ್ನ‌ ತೆರೆದು ಆನ್ ಲೈನ್ ನಲ್ಲಿ (Online) ಮುಖಾಂತರ ಜಾಹಿರಾತು ನೀಡುತಿತ್ತು. ಇದರಡಿ ಕೆಲಸ ಮಾಡುತ್ತಿದ್ದ ಆರೋಪಿಗಳು ಮಾರ್ಕ್ಸ್ ಕಾರ್ಡ್ ಅಗತ್ಯವಿರುವವರಿಗೆ ಸಂಪರ್ಕಿಸಿ, ಹಣ ನೀಡಿದ ಆಭ್ಯರ್ಥಿಗಳಿಗೆ ರಾಜ್ಯ-ಅಂತರಾಜ್ಯ ವಿವಿಗಳ ಮಾರ್ಕ್ಸ್ ಕಾರ್ಡ್ ಗಳನ್ನ‌ ಸಿದ್ದಪಡಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. 

ಗುಲ್ಬರ್ಗ ವಿವಿಯಲ್ಲಿ 30 ಸಾವಿರ ಕೊಟ್ಟರೆ ನಕಲಿ ಅಂಕಪಟ್ಟಿ..!

1 ಲಕ್ಷಕ್ಕೆ ಪದವಿ ಮಾರ್ಕ್ಸ್ ಕಾರ್ಡ್:  ಇತ್ತೀಚೆಗೆ ಯುವಕನೋರ್ವನನ್ನ ಸಂಪರ್ಕಿಸಿದ ಆರೋಪಿಗಳು ಪರೀಕ್ಷೆಯಿಲ್ಲದೆ (Without Exam) ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದರೆ ಒಂದು ಲಕ್ಷ ರೂಪಾಯಿ ( 1 Lakh) ನೀಡುವುದಾಗಿ ಹೇಳಿದ್ದರು‌. ಇದರಂತೆ ಆರೋಪಿಗಳು ಯುವಕನ ವಾಟ್ಸಾಪ್ (Whatsapp) ನಂಬರ್ ಗೆ ಫೇಕ್ ಮಾರ್ಕ್ಸ್ ಕಾರ್ಡ್ ಕಳುಹಿಸಿದ್ದರು‌‌. ಇದರಿಂದ ಅನುಮಾನಗೊಂಡು ಯುವಕ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ ದೂರು ಆಧರಿಸಿ ಮಹಾಲಕ್ಷ್ಮೀ ಲೇಔಟ್ ನ ಕೇಂದ್ರ ಕಚೇರಿ ಸೇರಿ ಮೂರು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಕ್ರಮ ಜಾಲ ಬೆಳಕಿಗೆ ಬಂದಿದೆ‌. ಪ್ರತಿಷ್ಠಿತ ಹಾಗೂ ವಿವಿಗಳ ಎಸ್ಸೆಸ್ಸೆಲ್ಸಿ, ಪಿಯುಸಿ, ಇಂಜಿನಿಯರಿಂಗ್, ಬಿಬಿಎಂ ಸೇರಿ ಪದವಿ ಅಂಕಪಟ್ಟಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಒಂದು ಮಾರ್ಕ್ಸ್ ಕಾರ್ಡ್ ಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸದೆ ರಾಜ್ಯ ಹಾಗೂ ಹೊರ ರಾಜ್ಯ ವಿವಿಗಳ ನಕಲಿ‌‌ ಮಾರ್ಕ್ಸ್ ಕಾರ್ಡ್ ಗಳನ್ನ‌ ನೀಡುತ್ತಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.

click me!