ಬೆಂಗಳೂರು ವಾಯು ವಿಹಾರಿಗಳ ಮೇಲೆ ಹರಿದ ಕಾರು: ವೃದ್ಧೆ ಹಾಗೂ ಬಾಲಕಿಗೆ ಗಂಭೀರ ಗಾಯ

By Sathish Kumar KH  |  First Published Nov 12, 2023, 1:35 PM IST

ಬೆಂಗಳೂರಿನಲ್ಲಿ ಬೆಳಗ್ಗೆ ವಾಯು ವಿಹಾರ ಮಾಡುತ್ತಿದ್ದ ವೃದ್ಧೆ ಹಾಗೂ ಬಾಲಕಿಯ ಮೇಲೆ ಕಾರು ಹರಿಸಿ ವಿಕೃತಿ ಮೆರೆಯಲಾಗಿದೆ.


ಬೆಂಗಳೂರು (ನ.12): ಬೆಂಗಳೂರಿನಲ್ಲಿ ಬೆಳಗ್ಗೆ ವಾಯು ವಿಹಾರ ಮಾಡುತ್ತಿದ್ದ ವೃದ್ಧೆ ಹಾಗೂ ಬಾಲಕಿಯ ಮೇಲೆ ಕಾರು ಹರಿಸಿ ವಿಕೃತಿ ಮೆರೆಯಲಾಗಿದೆ. ಈ ಘಟನೆಯಲ್ಲಿ ವೃದ್ಧೆಯ ಕಾಲು ಮುರಿದಿದ್ದು, ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಗಳೂರಿನಲ್ಲಿ ಸುಖಾ ಸುಮ್ಮನೇ ಪಾದಚಾರಿಗಳ ಮೇಲೆ ಕಾರು ಹರಿಸುವ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದೇ ಮಾದರಿಯಲ್ಲಿ ಇಂದು ಬೆಳಗ್ಗೆ ವಾಯು ವಿಹಾರ ಮಾಡುತ್ತಿದ್ದ ವೃದ್ದೆ ಮತ್ತು ಬಾಲಕಿಗೆ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯಲ್ಲಿ ಶೀಲಾ (60) ಹಾಗೂ (16) ವರ್ಷದ ಬಾಲಕಿಗೆ ಗಾಯಗಳಾಗಿವೆ. ಕಲ್ಯಾಣನಗರದ ಚಳ್ಳಿಕೆರೆಯಲ್ಲಿ ಘಟನೆ ನಡೆದಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ವೇಗವಾಗಿ ಬಂದು ವಾಕ್ ಮಾಡುತ್ತಿದ್ದವರ ಮೇಲೆ ಕಾರನ್ನು ಹರಿಸಲಾಗಿದೆ. 

Tap to resize

Latest Videos

ಪ್ರತಿಷ್ಠಿತ ಮಂತ್ರಿಯೊಬ್ಬರು ಮೆಟ್ರೋದಲ್ಲಿ ಸಂಚರಿಸಿದರೂ ಗುರುತೇ ಹಿಡಿಯದ ಪ್ರಯಾಣಿಕರು!

ವಾಯು ವಿಹಾರ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದ ನಂತರ ಗಾಬರಿಗೊಂಡ ಕಾರು ಚಾಲನ ಕಾರಿನ ಸ್ಟೇರಿಂಗ್‌ ಕೈ ಬಿಟ್ಟಿದ್ದಾನೆ, ನಂತರ ಕಾರು ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಪಕ್ಕದಲ್ಲಿದ್ದ ಮನೆಯೊಂದರ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ನಿಂತಿದೆ. ಮಾರುತಿ ಇಕೋ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ. ಕಾರು ಚಾಲಕ ಕುಮಾರ್ ಎಂಬಾತನಿಂದ ಘಟನೆ ನಡೆದಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ದೌಡು ಪರಿಶೀಲನೆ ಮಾಡಿದ್ದಾರೆ. ಗಾಯಾಳುಗಳಾದ ವೃದ್ದೆ ಶೀಲಾ ಮತ್ತು ಬಾಲಕಿಯನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ:
ಬೆಂಗಳೂರು(ನ.12):
ಮದ್ಯದ ಅಮಲಿನಲ್ಲಿ ರಸ್ತೆ ಬದಿ ಮಲಗಿದ್ದ ಹೋಟೆಲ್ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಸುರೇಶ್ (55) ಕೊಲೆಯಾದ ದುರ್ದೈವಿ. ರಾಜಾಜಿನಗರದ ನವರಂಗ್‌ ಸಿಗ್ನಲ್‌ ಸಮೀಪದ ನೇತ್ರಧಾಮ ಆಸ್ಪತ್ರೆ ಬಳಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಶ್, ಬಸವೇಶ್ವರನಗರದ ಶಂಕರಮಠ ಸಮೀಪದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಮೀಪದಲ್ಲೇ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದರು. ಮದ್ಯದ ಚಟಕ್ಕೆ ಬಿದ್ದಿದ್ದ ಸುರೇಶ್‌ ನಿತ್ಯ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಎಚ್ಚರವಾದಾಗ ಎದ್ದು ಕೊಠಡಿಗೆ ಹೋಗಿ ಮಲಗುತ್ತಿದ್ದರು.

ದೀಪಾವಳಿ ಪಟಾಕಿ ಸಿಡಿಸಲು ಮುಂಜಾಗ್ರತಾ ಕ್ರಮಗಳು: ಅವಘಡಕ್ಕೆ ಸಹಾಯವಾಣಿ ಆರಂಭಿಸಿದ ಸರ್ಕಾರ

ಸಿಸಿ ಕ್ಯಾಮರಾದಲ್ಲಿ ಕುಕೃತ್ಯ ಸೆರೆ: ಶುಕ್ರವಾರ ಹೋಟೆಲ್‌ ಕೆಲಸ ಮುಗಿಸಿ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಸುರೇಶ್‌, ನವರಂಗ್ ಸಿಗ್ನಲ್ ಬಳಿಯ ನೇತ್ರಧಾಮ ಆಸ್ಪತ್ರೆ ಬಳಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಅವರ ಮೇಲೆ ಕತ್ತು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗಿದೆ. ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!