
ಬೆಂಗಳೂರು, (ಸೆಪ್ಟೆಂಬರ್.02): ಅವನು ತನ್ನ ಪಾಡಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ರಾಜಸ್ಥಾನದಿಂದ ಬಂದ್ರೂ ವ್ಯವಹಾರದಲ್ಲಿ ಕಟ್ಟುನಿಟ್ಟಾಗಿದ್ದ. ಇನ್ನೂ ವಯಸ್ಸಿಗೆ ಬಂದಿದ್ರಿಂದ ಗುರು ಹಿರಿಯರು ನಿಶ್ಚಯಿಸಿ ರಾಜಸ್ಥಾನದಲ್ಲಿ ಮದುವೆಮಾಡಿದ್ರು. ಹೆಂಡತಿ ಕೂಡ ಗಂಡ ಇದ್ದಲ್ಲಿ ಇರಬೇಕು ಅಂತ ಬೆಂಗಳೂರಿಗೆ ಬಂದಿದ್ಲು. ಆದ್ರೆ ಬೆಂಗಳೂರಿನಲ್ಲಿದ್ದಿದ್ದು ಕೇವಲ ಎರಡು ತಿಂಗಳು ಮಾತ್ರ. ಸೀನ್ ಕಟ್ ಮಾಡಿದ್ರೆ ಗಂಡನನ್ನ ಯಾರೋ ಕಿಡ್ನ್ಯಾಪ್ ಮಾಡಿಬಿಟ್ಟಿದ್ರು. ಯಾರು ಕಿಡ್ನ್ಯಾಪ್ ಮಾಡಿದ್ರು ಅಂತ ವಿಚಾರಣೆ ನಡೆಸಿದ್ರೆ ಗೊತ್ತಾಗಿದ್ದು ಆ ಕಿಡ್ನ್ಯಾಪ್ ಮಾಡಿಸಿದ್ದು ಅದೇ ವ್ಯಾಪಾರಿಯ ಹೆಂಡತಿಯ ಮತ್ತೊಬ್ಬ ಗಂಡ. ಹೀಗೆ ಗಂಡನಿಂದಲೇ ಕಿಡ್ನ್ಯಾಪ್ ಆದ ಮತ್ತೊಬ್ಬ ಗಂಡನ ಇಂಟರೆಸ್ಟಿಂಗ್ ಕಥೆ ಮತ್ತು ಆ ಕಿಡ್ನ್ಯಾಪ್ ಪ್ರಕರಣವನ್ನ ಸೂಪರ್ ಆಗಿ ಭೇದಿಸಿದ ಪೊಲೀಸರ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್.
ಮಹೋನ್ ರಾಂ ಅಪಹರಣ ಪ್ರಕರಣ ಏನೋ ಸುಖಾಂತ್ಯ ಕಾಣ್ತು. ಆದ್ರೆ ತನ್ನ ಪಾಡಿಗೆಎ ತಾನು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದ ಮೋಹನ್ ರಾಂನನ್ನ ಕಿಡ್ನ್ಯಾಪ್ ಮಾಡಿದ್ದು ಯಾರು..? ಮೋಹನ್ ಮೇಲೆ ಅವರಿಗಿದ್ದ ದ್ವೇಏಷವಾದ್ರೂ ಏನು ಅಂತ ಪ್ರಕರಣದ ಹಿಂದೆ ಪೊಲೀಸರಿಗೆ ಗೊತ್ತಗಿದ್ದು ಒಂದು ಲವ್ ಕಹಾನಿ. ಮಂಜುಳ ಅನ್ನೋ ಹುಡುಗಿಯನ್ನ ಮದುವೆಯಾಗಿದ್ದ ಮೋಹನ್ ರಾಂ, ಮದುವೆಯಾಗಿ ಒಂದೇ ವರ್ಷಕ್ಕೆ ಒಂದು ಶಾಕ್ ಕಾದಿತ್ತು. ಅದೇನಂದ್ರೆ ತಾನು ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಬೇರೊಂದು ಮದುವೆಯಾಗಿಬಿಟ್ಟಿದ್ಲು.
ಇತ್ತ ಮೋಹನ ತನ್ನ ಹೆಂಡತಿಗೆ ಪದೇ ಪದೇ ಮೆಸೆಜ್ ಮಾಡ್ತಿರುತ್ತಾನೆ. ಅದ್ರೆ ಅತ್ತ ಮಂಜುಳಳ ಎರಡನೇ ಗಂಡ ಆ ಮೆಸೆಜ್ಗಳನ್ನ ಓದುತ್ತಿರುತ್ತಾನೆ. ಯಾವಾಗ ಮೋಹನನ ಲಿಮಿಟ್ ಕ್ರಾಸ್ ಆಯ್ತು ಅಂತೆನ್ನಿಸಿತೋ ಅವನನ್ನ ಮುಗಿಸಲು ಓಂಪ್ರಕಾಶ ಪ್ಲಾನ್ ಮಾಡಿಕೊಳ್ತಾನೆ. ಬೆಂಗಳುರಿನಲ್ಲಿದ್ದ ಆತನ ತಮ್ಮನಿಗೆ ಕಾಲ್ ಮಾಡಿ, ನಾನು ಬೆಂಗಳೂರಿಗೆ ಬರ್ತಿದ್ದೀನಿ ಒಂದು ಗ್ಯಾಂಗ್ನ ರೆಡಿ ಮಾಡು ಒಬ್ಬನನ್ನ ಎತ್ತಬೇಕು ಅಂತ ಹೇಳಿಬಿಡ್ತಾನೆ. ಅದಾದ ಮೇಲೆ ಏನಾಯ್ತು..?
ಮೋಹನನ್ನ ಮುಗಿಸಲೇ ಬೇಕು ಅಂತ ಓಂಪ್ರಕಾಶ ಬೆಂಗಳೂರಿನಲಿದ್ದ ತನ್ನ ತಮ್ಮನ ಮನೆಗೆ ಬರ್ತಾನೆ. ಅಲ್ಲೇ ಕೂತುಕೊಂಡು ಮೋಹನಿಗೆ ಮೂಹೂರ್ತ ಇಡ್ತಾನೆ. ಮೊದಲು ಕಿಡ್ನ್ಯಾಪ್ ಮಅಡಿ ನಂತರ ಅವನ ಕಥೆ ಮುಗಿಸಲು ಸ್ಕೆಚ್ ರೆಡಿ ಮಾಡ್ತಾನೆ. 7 ಜನರ ಗ್ಯಾಂಗ್ ಕಟ್ಟಿಕೊಂಡು ಫೀಲ್ಡ್ಗೆ ಇಳಿತಾನೆ. ಆದ್ರೆ ಮೋಹನನ ಟೈಂ ಚೆನ್ನಾಗಿತ್ತು. ತನ್ನ ಕಿಡ್ನ್ಯಾಪ್ಗೆ ಬಳಸಿದ್ದ ಕಾರೇ ಅವನನ್ನ ಸೇಫ್ ಮಾಡಿತ್ತು.
ಸದ್ಯ ಮೋಹನ್ ರಾಂ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಕಿಡ್ನ್ಯಾಪ್ಗೆ ಬಳಸಿದ್ದ ಕಾರೇ ಮೋಹನ್ನನ್ನ ಉಳಿಸಿತ್ತು. ಆದ್ರೆ ಇಷ್ಟಕ್ಕೆ ಎಲ್ಲವೂ ಮುಗಿದಿಲ್ಲ. ನಿಜಕ್ಕೂ ಮಂಜುಳ ರಾಜಸ್ಥಾನಕ್ಕೆ ಹೋದ ಮೇಲೆ ಏನಾಯ್ತು..? ಆಕೆ ಓಂಪ್ರಕಾಶನನ್ನ ಮದುವೆಯಾಗಲು ಕಾರಣವೇನು..? ಮೋಹನನ ಕಿಡ್ನ್ಯಾಪ್ ಪ್ರಕರಣದಲ್ಲಿ ಆಕೆಯ ಕೈವಾಡವಿದ್ಯಾ..? ಇವೆಲ್ಲದ್ರ ತನಿಖೆಯಾಗಬೇಕಿದೆ. ಆದ್ರೆ ಸದ್ಯ ಮೋಹನ್ ಸಾವಿನ ಕದ ತಟ್ಟಿದ್ದಂತೂ ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ