ಓದಿದ್ದು ಬಿಟೆಕ್ ಮಾಡ್ತಿದ್ದ ಕೆಲಸ ಮಾತ್ರ ಸೈಬರ್ ಹ್ಯಾಕ್: ಗಿಪ್ಟ್‌ ವೋಚರ್‌ಗೆ ಕನ್ನ ಹಾಕುವುದೇ ಕಾಯಕ

By Sathish Kumar KH  |  First Published Sep 12, 2023, 12:03 PM IST

ಈತ ಓದಿದ್ದು ಬಿಟೆಕ್‌ ಇಂಜಿನಿಯರ್‌ ಆಗಿದ್ದರೂ, ಮಾಡುತ್ತಿದ್ದ ಕೆಲಸ ಮಾತ್ರ ಸೈಬರ್‌ ಹ್ಯಾಕ್‌ ಕಳ್ಳತನ. ಗಿಫ್ಟ್‌ ವೋಚರ್‌ಗಳನ್ನೇ ಕದಿಯುತ್ತಿದ್ದ ಅಸಾಮಿ ಕೋಟ್ಯಂತರ ರೂ. ಆಸ್ತಿ ಸಂಪಾದಿಸಿದ್ದನು.


ಬೆಂಗಳೂರು (ಸೆ.12): ನಮ್ಮ ನಡುವೆ ಎಂತೆಂಥಹ ಕಳ್ಳರಿರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿಂತೆ ಕೆಲಸ ಮಾಡಿಕೊಂಡು ಸಂಪಾದನೆ ಮಾಡುತ್ತಾರೆ ಎಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ ಎಂಬುದನ್ನು ಬಿಟೆಕ್‌ ಓದಿದ ಇಂಜಿನಿಯರ್‌ ಒಬ್ಬ ಸಾಬೀತು ಮಾಡಿದ್ದಾನೆ. ತಾನು ಓದಿದ್ದು, ಬಿಟೆಕ್‌ ಆಗಿದ್ದರೂ ಮಾಡುತ್ತಿದ್ದ ಕೆಲಸ ಮಾತ್ರ ಸೈಬರ್‌ ಹ್ಯಾಕ್‌ ಆಗಿದೆ.

ಹೌದು, ಬೆಂಗಳೂರಿನಲ್ಲಿ ಖತರ್ನಾಕ್ ಸೈಬರ್ ಹ್ಯಾಕರ್ ಬಂಧನ ಮಾಡಲಾಗಿದೆ. ವೆಬ್ ಸೈಟ್ ಹ್ಯಾಕ್ ಮಾಡಿ ಕೋಟಿ ಕೋಟಿ ಮೌಲ್ಯದ ಚಿನ್ನ ಬೆಳ್ಳಿ ಗುಳುಂ ಮಾಡುತ್ತಿದ್ದನು. ಆಗ್ನೇಯ ಸೈಬರ್ ಸೆನ್ ಪೊಲೀಸರ ಬಲೆಗೆ ಸೈಬರ್‌ ಹ್ಯಾಕರ್ ಬಿದ್ದಿದ್ದಾನೆ. ಚಿತ್ತೂರು ಮೂಲದ ಸೈಬರ್ ಹ್ಯಾಕರ್ ಲಕ್ಷ್ಮೀಪತಿ ಬಂಧನ ಮಾಡಲಾಗಿದೆ. ರಿವಾರ್ಡ್ ಪಾಯಿಂಟ್ ವೆಬ್ ಸೈಟ್ ಹ್ಯಾಕ್ ಮಾಡುತ್ತಿದ್ದ ಅಸಾಮಿ, ವಿವಿಧ ಕಂಪನಿಗಳಿಂದ ತಮ್ಮ ಗ್ರಾಹಕರಿಗೆ ಕೊಡುವ ಗಿಫ್ಟ್ ವೋಚರ್‌ಗಳನ್ನ ಹ್ಯಾಕ್ ಮಾಡಿ, ಅದರ ಲಾಭವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದನು ಎಂದು ತಿಳಿದುಬಂದಿದೆ.

Tap to resize

Latest Videos

ನನ್ನಂತೆ ಬಾಲ್ಯದಲ್ಲಿಯೇ ಕುರಿ ಕಾಯಬೇಡವೆಂದು, ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ

ಬಂಧಿತ ಆರೋಪಿ ಲಕ್ಷ್ಮೀಪತಿಯಿಂದ ಬರೋಬ್ಬರಿ ಬಂಧಿತನಿಂದ 4.16 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ, 11 ಲಕ್ಷ ನಗದು ಜೊತೆಗೆ 7 ವಿವಿಧ ಬ್ರ್ಯಾಂಡ್‌ಗಳ ಬೈಕ್‌ಗಳನ್ನು ವಶಕ್ಕೆ ಪಡೆಡಯಲಾಗಿದೆ. ಇನ್ನು ಈತ ರಿವಾರ್ಡ್ಸ್ 360 ವೆಬ್ ಸೈಟ್ ಹ್ಯಾಕ್ ಮಾಡಿ, ಗ್ರಾಹಕರಿಗೆ ಕೊಡುತ್ತಿದ್ದ ರಿವಾರ್ಡ್‌ ಗಿಫ್ಟ್‌ ಓಚರ್‌ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದನು. ಈ ಬಗ್ಗೆ ರಿವಾರ್ಡ್ 360 ಕಂಪನಿ ನಿರ್ದೇಶಕರಿಂದ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ನಂತರ ತನಿಖೆ ನಡೆಸಿದ ಆಗ್ನೇಯ ಸಿಇಎನ್ ಠಾಣೆ ಪೊಲೀಸರಿಗೆ ತನಿಖೆ ವೇಳೆ ಆಂಧ್ರ ಮೂಲದ ವ್ಯಕ್ತಿಯಿಂದ ಕೃತ್ಯ ನಡೆಸಿದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆರೋಪಿ ಲಕ್ಷ್ಮೀಪತಿಯನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಹ್ಯಾಕ್ ಮಾಡಿ ಬಂದಿದ್ದ ಎಲ್ಲ ಚಿನ್ನ, ಬೆಳ್ಳಿ, ಹಣವನ್ನ ಎಲ್ಲಿಯೂ ಖರ್ಚು ಮಾಡದೇ ಹಾಗೂ ಬೇರೆಯವರಿಗೂ ಹಂಚಿಕೊಳ್ಳದೇ ಎಲ್ಲವನ್ನು ತನ್ನ ಮನೆಯಲ್ಲೆ ಇಟ್ಟುಕೊಂಡಿದ್ದನು. ಆರೋಪಿಯ ಸೈಬರ್‌ ವಂಚನೆಯ ಬಗ್ಗೆ ಆಗ್ನೇಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಆದ ಬೆನ್ನಲ್ಲಿಯೇ ಸೈಬರ್‌ ಹ್ಯಾಕ್‌ ಮೂಲಕ ತಾನು ಪಡೆದುಕೊಂಡಿದ್ದ ಎಲ್ಲ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿ ಲಕ್ಷ್ಮೀಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

ಸತ್ತ ವ್ಯಕ್ತಿಯ ಜೀವಂತ ಹೃದಯ ತೆಗೆದು, ತಮಿಳುನಾಡಿಗೆ ರವಾನಿಸಿದ ಬೆಂಗಳೂರು ವೈದ್ಯರು

ಹೇಗೆ ವಂಚನೆ ಮಾಡ್ತಿದ್ದ ಗೊತ್ತಾ ಆರೋಪಿ...?
ರಿವಾರ್ಡ್ 360 ಎಂಬ ಕಂಪನಿಗೆ ವಂಚನೆ ಮಾಡಿದ್ದ ಆರೋಪಿ ಲಕ್ಷ್ಮೀಪತಿ ಈ ಮೊದಲು, ಈ ಕಂಪನಿ ಪ್ರತಿಷ್ಠಿತ ಕಂಪನಿಗಳಾದ AXIS ಬ್ಯಾಂಕ್‌, ಹೆಚ್‌ಡಿಎಫ್‌ಸಿ ಬ್ಯಾಂಕ್,  ಸ್ಟ್ಯಾಂಡರ್ಡ್ ಚಾರ್ಟೆಡ್, ಎಮಿರೇಟ್ಸ್  ಎನ್‌ಬಿಡಿ ಕಂಪನಿಗಳಿಗೆ ಕೆಲಸ ಮಾಡುತ್ತಿದ್ದರು. ಈ ಕಂಪನಿಗಳಲ್ಲಿ ಗ್ರಾಹಕರು ಬಳಕೆ ಮಾಡಿದ್ದ ಕಾರ್ಡ್ ಗಳ ಮೂಲಕ ರಿವಾರ್ಡ್ ನೀಡಲಾಗ್ತಿತ್ತು. ಡೇಟಾ ಅನಲೈಸ್ ಮಾಡಿ ವಿಜೇತ ಗ್ರಾಹಕರನ್ನು ಗುರುತಿಸಿ ಬಹುಮಾನ ನೀಡಲಾಗ್ತಿತ್ತು. ಈ ಆರೋಪಿ ರಿವಾರ್ಡ್ 360 ಕಂಪನಿಯ ವೆಬ್ ಸೈಟ್ ಮತ್ತು ಸರ್ವರ್ ಹ್ಯಾಕ್ ಮಾಡಿದ್ದನು. ಕಂಪನಿ  ಸೆಲೆಕ್ಟ್ ಮಾಡಿದ್ದ ವಿಜೇತ ಗ್ರಾಹಕರಿಗೆ ತಲುಪಬೇಕಾದ ಗಿಫ್ಟ್ ಗಳನ್ನು ತನಗೆ ಬರುವಂತೆ ಮಾಡಿಕೊಂಡು ವಂಚಿಸಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

click me!