ಬೆಂಗಳೂರಿನ ಕೆಂಗೇರಿ ಬಳಿ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಕಾಲೇಜು ಉಪನ್ಯಾಸಕ ಮತ್ತು ಶಾಲಾ ಶಿಕ್ಷಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಬೆಂಗಳೂರು (ಆ.16): ಬೆಂಗಳೂರಿನ ಕೆಂಗೇರಿ ಬಳಿ ನಿನ್ನೆ ರಾತ್ರಿವೇಳೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಿಂದ ಕಾಲೇಜು ಉಪನ್ಯಾಸಕ ನರಸಪ್ಪ ಹಾಗೂ ಶಾಲಾ ಶಿಕ್ಷಕಿ ರಕ್ಷಾ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಎರಡು ಬೈಕ್ ಗಳು ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 11.40ರ ಸುಮಾರಿಗೆ ನಡೆದಿದೆ. ಮೃತರನ್ನು ನರಸಪ್ಪ (51) ರಕ್ಷಾ (21) ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಚಂದನ್ ಎನ್ನುವ ವ್ಯಕ್ತಿಯ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಕೆಂಗೇರಿ ಸಮೀಪದ ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ಮೃತ ಯುವತಿಯ ರಕ್ಷಾಳ ಜೊತೆ ಚಂದನ್ ಪಲ್ಸರ್ ಬೈಕ್‌ನಲ್ಲಿ ಕೆಎಲ್ಇ ಕಾಲೇಜು ಕಡೆ ಸ್ಪೀಡಾಗಿ ಹೋಗುತ್ತಿದ್ದನು. ಈ ವೇಳೆ ಅದೇ ರಸ್ತೆಯಲ್ಲಿ ಬರ್ತಿದ್ದ ನರಸಪ್ಪ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
undefined
ಬೆಂಗಳೂರಲ್ಲಿ ಗಂಡ- ಮಂಡ್ಯದಲ್ಲಿ ಹೆಂಡ್ತಿ: ಶೀಲ ಶಂಕೆಯಿಂದ ಕೊಂದೇಬಿಟ್ಟ ಪತಿರಾಯ
ನರಸಪ್ಪ ಸ್ಥಳದಲ್ಲಿ ಸಾವು, ರಕ್ಷಾ ಆಸ್ಪತ್ರೆಗೆ ಸಾಗಿಸೋವಾಗ ಸಾವು: ಇದರ ಪರಿಣಾಮ ನರಸಪ್ಪಗೆ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಚಂದನ್ ಮತ್ತು ರಕ್ಷಾಗೂ ಗಂಭೀರ ಗಾಯಗಳಾಗಿತ್ತು. ಆದರೆ, ಆಸ್ಪತ್ರೆಗೆ ಸೇರಿಸೋವಷ್ಟರಲ್ಲಿ ರಕ್ಷಾ ಸಾವನ್ನಪ್ಪಿದ್ದಾಳೆ. ಸದ್ಯಗಾಯಾಳು ಚಂದನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಟರ್ನಿಂಗ್ ತೆಗೆದುಕೊಳ್ಳುವಾಗ ಗುದ್ದಿದ ಚಂದನ್: ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಚಾರ ವಿಭಾಗದ ಪಶ್ಷಿಮ ಡಿಸಿಪಿ ಸುಮನ ಪನ್ನೇಕರ್ ಅವರು, ನಿನ್ನೆ ಎರಡು ಬೈಕ್ ಗಳ ಮಧ್ಯೆ ಉಲ್ಲಾಳದ ಮಾರುತಿನಗರದಲ್ಲಿ ಅಪಘಾತವಾಗಿದೆ. ಚಂದನ್ ಎನ್ನವವರ ಬೈಕ್ ನಲ್ಲಿ ಹಿಂಬದಿ ರಕ್ಷಾ ಪ್ರಯಾಣ ಮಾಡುತ್ತಿದ್ದರು. ಪಲ್ಸರ್ ಬೈಕ್‌ನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಂದನ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾನೆ. ನರಸಪ್ಪ ಎನ್ನುವರು ತಮ್ಮ ಬೈಕ್ ನಲ್ಲಿ ಟರ್ನಿಂಗ್ ತೆಗೆದುಕೊಳ್ಳುವಾಗ ಚಂದನ್ ಹೋಗಿ ಡಿಕ್ಕಿ ಹೊಡೆದಿದ್ದಾರೆ.
ಕಷ್ಟಕ್ಕೆ ನೆರವಾದ ಸರ್ಕಾರಿ ನೌಕರನನ್ನೇ ಹನಿಟ್ರ್ಯಾಪ್ ಮಾಡಿದ ಅಣ್ಣಮ್ಮ ಗ್ಯಾಂಗ್: 82 ಲಕ್ಷ ರೂ. ವಸೂಲಿ
ರಕ್ಷಾ ಕಿಂಡರ್ ಗಾರ್ಟನ್ ಶಾಲೆ ಶಿಕ್ಷಕಿ: ನರಸಪ್ಪ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಕ್ಷಾ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಬೈಕ್ ಚಾಲಕ ಚಂದನ್ ಕುಡಿದು ಡ್ರೈವಿಂಗ್ ಮಾಡಿರುವ ಶಂಕೆ ಇದೆ. ಚಂದನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಗುದ್ದಿದ ರಭಸಕ್ಕೆ 50 ಮೀಟರ್ ನಷ್ಟು ಉಜ್ಜಿಕೊಂಡು ಹೋಗಿದೆ. ಮೃತ ನರಸಪ್ಪ ಲೆಕ್ಟರರ್ ಆಗಿದ್ದರು. ಇನ್ನು ಚಂದನ್ ಜೊತೆಗಿದ್ದ ರಕ್ಷಾ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪಲ್ಸರ್ ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತತಿದೆ ಎಂದು ಮಾಹಿತಿ ನೀಡಿದರು.