* ಅತ್ತಿಗೆಯನ್ನೇ ಭೀಕರವಾಗಿ ಹತ್ಯೆಗೈದು ಬಳಿಕ ನಾದಿನಿ ಆತ್ಮಹತ್ಯೆ
* ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಮೃತ್ಯು
* ಅಪರಿಚಿತನನ್ನು ಕೊಂದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಹಾವೇರಿ, (ಅ.31): ಅತ್ತಿಗೆಯನ್ನೇ ಭೀಕರವಾಗಿ ಹತ್ಯೆಗೈದು (Murder) ಬಳಿಕ ನಾದಿನಿಯೊಬ್ಬಳು ತಾನೂ ಆತ್ಮಹತ್ಯೆಗೆ (suicide ) ಶರಣಾಗಿರುವ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮ್ಯಾಗೇರಿ ಓಣಿಯಲ್ಲಿ ನಡೆದಿದೆ.
ಸುತ್ತಿಗೆಯಿಂದ ಅತ್ತಿಗೆಯ ತಲೆಯನ್ನು ಜಜ್ಜಿ ಕೊಲೆ ಮಾಡಿರುವ ನಾದಿನಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ. ಜಯಶ್ರೀ ಪಾಟೀಲ್ (66) ಹತ್ಯೆಯಾದ ಅತ್ತಿಗೆ. ಮಂಜುಳಾ ಪಾಟೀಲ್ (50) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ನಾದಿನಿ.
ಹೊಸಪೇಟೆಯ ವೃದ್ಧೆ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಅತ್ತಿಗೆಯನ್ನು ಹತ್ಯೆಗೈದ ಬಳಿಕ ನಾದಿನಿ ಮಂಜುಳಾ, ದಪ್ಪ ಕಾಗದದಲ್ಲಿ 'ಪೊಲೀಸರೊಂದಿಗೆ 4 ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ' ಎಂದು ಬರೆದಿಟ್ಟು ಅದನ್ನು ಬಾಗಿಲಿಗೆ ನೇತು ಹಾಕಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಯಿ, ಮಗ ಸಾವು
ಮಡಿಕೇರಿ (Madikeri): ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ (Mather, ಮಗ(Son) ಸಾವನ್ನಪ್ಪಿದ ದುರ್ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿ ನಡೆದಿದೆ. ಶ್ರೀಮಂಗಲ ಬಳಿ ಹೊಳೆಗೆ ಕಾಲು ಜಾರಿಬಿದ್ದು ದುರ್ಘಟನೆ ಸಂಭವಿಸಿದೆ. ತಾಯಿ ರೇವತಿ (32) ಹಾಗೂ ಮಗ ಕಾರ್ಯಪ್ಪ (12) ಮೃತಪಟ್ಟಿದ್ದಾರೆ. ವರ್ಷದ ಹಿಂದೆ ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಇದೀಗ ದನಗಳಿಗೆ ನೀರು ಕುಡಿಸುವ ಸಂದರ್ಭ ತಾಯಿ ಹಾಗೂ ಮಗ ಕೂಡ ಮರಣಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಂದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಚಿಕ್ಕಬಳ್ಳಾಪುರ: ದುಷ್ಕರ್ಮಿಗಳು ಅಪರಿಚಿತನನ್ನು ಕೊಂದು ಶವಕ್ಕೆ ಬೆಂಕಿಯಿಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ ದೇಗುಲದ ಬಳಿ ನಡೆದಿದೆ. ಸುಂಕಲಮ್ಮ ದೇವಸ್ಥಾನದ ಬಳಿ ಖಾಲಿ ಲೇಔಟ್ನಲ್ಲಿ ದುಷ್ಕೃತ್ಯ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಾರಕಾಸ್ತ್ರಗಳಿಂದ ಹಲ್ಲೆ
ಕೌಟುಂಬಿಕ ಕಲಹ ಹಿನ್ನೆಲೆ ಮಾರಕಾಸ್ತ್ರಗಳಿಂದ ತಮ್ಮ ತನ್ನ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾನೆ. ಬೆಳಗಾವಿಯ (Belagavi) ಟಿಳಕವಾಡಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಪ್ರಕಾಶ್ ಮಜುಕರ್ ಸ್ಥಿತಿ ಗಂಭೀರವಾಗಿದೆ. ಸದ್ಯ ಪ್ರಕಾಶ್ ಮಜುಕರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಸಹೋದರನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಕೆರೆಗೆ ಹಾರಿ ಪ್ರಾಣಬಿಟ್ಟ ಅಕ್ಕ-ತಂಗಿ:
ಕೊಡಗು: ಸಹೋದರಿಯರಿಬ್ಬರು ಕೆರೆಗೆ ಹಾರಿ ಪ್ರಾಣ ಬಿಟ್ಟ ದುರ್ಘಟನೆ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ನಾಮೇರ ಉದಯ ಎಂಬುವರ ಪುತ್ರಿಯರಾದ ದಮಯಂತಿ(20) ಮತ್ತು ಹರ್ಷಿತಾ(18) ಮೃತ ಅಕ್ಕ-ತಂಗಿ. ಹಳ್ಳಿಗಟ್ಟು ಸಿಇಟಿ ಕಾಲೇಜಿನಲ್ಲಿ ಅಕ್ಕ ದಮಯಂತಿ ಇಂಜಿನಿಯರಿಂಗ್ ಓದುತ್ತಿದ್ದಳು. ಕಾವೇರಿ ಕಾಲೇಜಿನಲ್ಲಿ ಹರ್ಷಿತಾ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಳು.
ಅಕ್ಕ-ತಂಗಿ ಇಬ್ಬರು ಕೆರೆಗೆ ಹಾರಿ ಪ್ರಾಣಬಿಟ್ಟಿದ್ದು ಯಾಕೆ? ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.