ಮುದ್ದೇಬಿಹಾಳ ಗ್ರಾಮದ ರೂಢಗಿ ಗ್ರಾಮದ ಮಹೇಶ ಬಸಪ್ಪ ನಂದಿಹಾಳ (25) ಎಂಬಾತನ ಮೇಲೆಯೇ ಈ ಹಲ್ಲೆಯಾಗಿದ್ದು, ಗಾಯಗೊಂಡಿದ್ದಾನೆ. ಈತ ತನ್ನ ಪತ್ನಿಗೆ ವಿಚ್ಛೇದನ ನೀಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಡಿ.20ರಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಪತ್ನಿ ಸೇರಿ ಸಂಬಂಧಿಕರು ಕೋರ್ಟ್ ಎದುರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಮುದ್ದೇಬಿಹಾಳ(ಡಿ.23): ವಿವಾಹ ವಿಚ್ಛೇದನ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ವ್ಯಕ್ತಿಯನ್ನು ಪತ್ನಿಯ ಕುಟುಂಬದವರು ಮನಬಂದಂತೆ ಥಳಿಸಿದ್ದಲ್ಲದೆ, ಕೋರ್ಟ್ ಗೇಟ್ ಎದುರಿನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದ್ದು, ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ಗ್ರಾಮದ ರೂಢಗಿ ಗ್ರಾಮದ ಮಹೇಶ ಬಸಪ್ಪ ನಂದಿಹಾಳ (25) ಎಂಬಾತನ ಮೇಲೆಯೇ ಈ ಹಲ್ಲೆಯಾಗಿದ್ದು, ಗಾಯಗೊಂಡಿದ್ದಾನೆ. ಈತ ತನ್ನ ಪತ್ನಿಗೆ ವಿಚ್ಛೇದನ ನೀಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಡಿ.20ರಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಪತ್ನಿ ಸೇರಿ ಸಂಬಂಧಿಕರು ಕೋರ್ಟ್ ಎದುರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಅದಕ್ಕೂ ಮೊದಲು ಎಲ್ಲರೂ ಕೈಯಿಂದ ಹಲ್ಲೆ ಮಾಡಿ, ಕಣ್ಣು, ಮೂಗು, ಬಾಯಿಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
undefined
ವಿಜಯಪುರ: ಹೊತ್ತಿ ಉರಿದ ಖಾಸಗಿ ಟ್ರಾವೆಲ್ಸ್. ಚಾಲಕನ ಸಮಯ ಪ್ರಜ್ಞೆಗೆ 36 ಜೀವಗಳು ಬಚಾವ್!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದವರಾದ ಮುತ್ತಪ್ಪ ಬಸಪ್ಪ ಬಿರಾದಾರ, ಬಸಪ್ಪ ಭೀಮಪ್ಪ ಬಿರಾದಾರ, ಚನ್ನಮ್ಮ ಬಸಪ್ಪ ಬಿರಾದಾರ, ಈರಮ್ಮ ಊರ್ಫ ಸುಮಿತ್ರಾ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರನ್ನು ಬಂಧಿಸಿದ್ದಾರೆ. ನಂತರ ಸ್ಥಳದಲ್ಲಿದ್ದವರು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮಹೇಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ರೂಡಗಿಯ ಮಹೇಶ ಜತೆಗೆ ಗೋನಾಳ ಎಸ್.ಎಚ್ ಗ್ರಾಮದ ಯುವತಿ ಜತೆಗೆ ವಿವಾಹ ನಡೆದಿತ್ತು. ಆದರೆ, ಮದುವೆ ಆದ ಕೆಲ ದಿನಗಳಲ್ಲೇ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಮಹೇಶ ಆರೋಪಿಸಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಅಲ್ಲದೆ, ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಎಂದು ಹೇಳಲಾಗಿದೆ.
ಈ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ ಡಿ.20ರಂದು ಕೋರ್ಟ್‌ಗೆ ಬಂದ ಸಂದರ್ಭದಲ್ಲಿ ಈ ನಾಲ್ವರು ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ, ಕೋರ್ಟ್ ಮುಂದಿನ ಗೇಟ್ ಬಳಿ ಇದ್ದ ವಿದ್ಯುತ್ ಕಂಬಕ್ಕೆ ಕಟ್ಟಿ ಹಗ್ಗದಿಂದ ಥಳಿಸಿದ್ದಾರೆ ಎನ್ನಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.