ಗಂಡನಿಲ್ಲದ ಆಂಟಿಯ ಸಂಬಂಧಕ್ಕೆ ಸ್ನೇಹಿತನನ್ನೇ ಪರಲೋಕ ಸೇರಿಸಿದ ಫ್ರೆಂಡ್!

By Sathish Kumar KH  |  First Published Nov 11, 2024, 3:58 PM IST

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಗಂಡನಿಲ್ಲದ ಆಂಟಿಯೊಂದಿಗಿನ ಅನೈತಿಕ ಸಂಬಂಧಕ್ಕಾಗಿ ಇಬ್ಬರು ಸ್ನೇಹಿತರು ಜಗಳವಾಡಿದ್ದು, ಒಬ್ಬ ಗೆಳೆಯನನ್ನು ಕೊಲೆ ಮಾಡಿ ವಿಡಿಯೋ ಶೇರ್ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ವಿಜಯಪುರ (ನ.11): ಉತ್ತರ ಕರ್ನಾಟಕದ ಬಿಳಿಜೋಳಕ್ಕೆ ಪ್ರಸಿದ್ಧಿಯಾದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಗಂಡನಿಲ್ಲದ ಮಹಿಳೆಯ ಸಂಬಂಧಕ್ಕಾಗಿ ಇಬ್ಬರು ಸ್ನೇಹಿತರು ಪರಸ್ಪರ ಜಗಳ ಮಾಡಿಕೊಂಡಿದ್ದು, ಅದರಲ್ಲಿ ಎಣ್ಣೆ ಮತ್ತಿನಲ್ಲಿ ತನ್ನ ಗೆಳೆಯನನ್ನೇ ಕೊಲೆ ಮಾಡಿ ವಿಡಿಯೋ ಶೇರ್ ಮಾಡಿಕೊಂಡ ಘಟನೆ ನಡೆದಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಯುವಕನನ್ನು ಬಂಧಿಸಿದ್ದು, ಇದು ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನನ್ನೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಿನ್ನೆ ನಡೆದಿದ್ದ ಯುವಕನ ಕೊಲೆಯ ಭಯಾನಕ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಜಮೀನಿನ ಬಳಿ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಾ, ಮಹಿಳೆಯೊಬ್ಬರ ಜೊತೆಗಿನ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ನಂತರ, ನೀನು ಸಾಯಲೇಬೇಕು ಎಂದು ಹೇಳಿ ತನ್ನ ಸ್ನೇಹಿತ ಕುತ್ತಿಗೆಗೆ ಹಗ್ಗ ಬಿಗಿದು ಕಾಲಿನಿಂದ ಅಹಗ್ಗವನ್ನು ಬಿಗಿಗೊಳಿಸುತ್ತಾ ಕೊಲೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಬಸವನಬಾಗೇವಾಡಿಯ ಎಂಪಿಎಂಸಿ ಹೊರಭಾಗದಲ್ಲಿ ಸುನೀಲ ಭಜಂತ್ರಿ (23)ಎಂಬ ಯುವಕನ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ಪೊಲೀಸರಿಗೆ ಸ್ಥಳೀಯರು ವಿಡಿಯೋ ರವಾನಿಸಿ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ : ಊಟ ಕೊಡದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹೆಂಡ್ತಿಯ, ಉಸಿರು ನಿಲ್ಲಿಸಿದ ಗಂಡ!

ಸುನೀಲ್ ಕೊಲೆ ಮಾಡಿರೋ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಬಸವನ ಬಾಗೇವಾಡಿಯ ಸುನೀಲ್ ಮತ್ತು ಸಂತೋಷ್ ಇಬ್ಬರು ಸ್ನೇಹಿತರು ಒಬ್ಬನೇ ವ್ಯಕ್ತಿಯ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರುತ್ತಾರೆ. ಈ ವಿಚಾರ ಇಬ್ಬರಿಗೂ ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಸಂತೋಷ್ ಮತ್ತು ಮುದುಕಪ್ಪ ಸೇರಿ ಸುನೀಲ್‌ನನ್ನು ಮದ್ಯ ಸೇವನೆಗೆ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಪುನಃ ಅಲ್ಲಿಂದ ಕೆಲವು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಪಟ್ಟಣದ ಹೊರಭಾಗದ ಜಮೀನಿನ ಬಳಿ ಹೋಗಿ ಕುಳಿತುಕೊಂಡು ಮದ್ಯ ಸೇವನೆ ಮಾಡಿದ್ದಾರೆ.

ಅಲ್ಲಿ ಸುನೀಲ್ ಮತ್ತು ಸಂತೋಷ್ ನಡುವೆ ಮಹಿಳೆಯ ಸಂಬಂಧದ ಬಗ್ಗೆ ಮಾತುಕತೆ ಶುರುವಾಗಿದೆ. ಸಂತೋಷ್ ಮಾತನಾಡುತ್ತಾ ನೀನು ಆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀಯೋ ಇಲ್ಲವೋ ಎಂದು ಸುನೀಲನಿಗೆ ಕೇಳುತ್ತಾನೆ. ಆಗ ಇಲ್ಲ ನಾನು ಖಂಡಿತವಾಗಿಯೂ ಸಂಬಂಧ ಹೊಂದಿಲ್ಲ ಎನ್ನುತ್ತಾನೆ. ಹಾಗಾದರೆ, ನೀನು ದೈಹಿಕ ಸಂಬಂಧ ಹೊಂದಿಲ್ಲವೇ ಎಂದು ಕೇಳಿದಾಗ ಇಲ್ಲ ನಾನೆಂದಿಗೂ ಆಕೆಯೊಂದಿಗೆ ದೈಹಿಕವಾಗಿ ಸೇರಿಲ್ಲ. ಆದರೆ, ಸಿನ್ಸಿಯರ್ ಆಗಿ ಲವ್ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಇದರಿಂದ ನಾವಿಬ್ಬರೂ ಸ್ನೇಹಿತಾರಿಗಿದ್ದೇವೆ, ನಾನು ಸಂಬಂಧವಿರುವ ಮಹಿಳೆಯನ್ನು ನೀನು ಲವ್ ಮಾಡುವುದು ಸರಿಯಲ್ಲ, ನೀನು ಸಾಯಲೇಬೇಕು ಎಂದು ಹೇಳಿದ್ದಾನೆ.

ಇದನ್ನೂ ಓದಿ : ಸೋಫಾದಲ್ಲಿ ಸಿಕ್ತು ಪತ್ನಿ ಶವ- ಎರಡು ದಿನ ಡೆಡ್‌ಬಾಡಿ ಮೇಲೆಯೇ ಮಲಗಿದ್ದ ಡ್ರೈವರ್ ಗಂಡ 

ಇದಾದ ನಂತರ ಸುನೀಲನನ್ನು ಮಲಗಿಸಿ ಆತನ ಕುತ್ತಿಗೆಗೆ ಹಗ್ಗವನ್ನು ಬಿಗಿದು, ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡು ಬಿಗಿಗೊಳಿಸುತ್ತಾನೆ. ಆಗ ಕೊಸರಾಡಿದ ಸುನೀಲನ ಕುತ್ತಿಗೆಯ ಮೇಲೆ ಕಾಲನ್ನಿಟ್ಟು ಜೋರಾಗಿ ಎಳೆದು ಕೊಲೆ ಮಾಡುತ್ತಾನೆ. ಈ ಘಟನೆಯ ಎಲ್ಲ ವಿಡಿಯೋವನ್ನು ಇನ್ನೊಬ್ಬ ಸೆರೆ ಹಿಡಿದಿದ್ದಾನೆ. ನಂತರ ಈ ವಿಡಿಯೋವನ್ನು ಕೆಲವರಿಗೆ ಶೇರ್ ಮಾಡಿಕೊಂಡಿದ್ದು, ಲೈವ್ ಮರ್ಡರ್ ವಿಡಿಯೋ ವೈರಲ್ ಆಗಿತ್ತು.  ಬಸವನಬಾಗೇವಾಡಿ ಪೊಲೀಸ್  ಠಾಣಾ ವ್ಯಾಪ್ತಿ ಪ್ರಕರಣ ನಡೆದಿದ್ದು, ಪೊಲೀಸರು ಸುನೀಲ್ ಭಜಂತ್ರಿ ಕೊಲೆ ಕೇಸಿನ ತನಿಖೆ ಮುಂದುವರೆಸಿದ್ದಾರೆ. ಕೊಲೆ ಆರೋಪಿಗಳಾದ ಸಂತೋಷ ಹಾಗೂ ಮುದಕಪ್ಪ ಎಂಬಿಬ್ಬರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!