ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಅವಳಿ ಮಕ್ಕಳು ಸಾವು ಆರೋಪ; ಆಸ್ಪತ್ರೆ ಎದುರು ಕುಟುಂಬಸ್ಥರು ಪ್ರತಿಭಟನೆ

By Ravi Janekal  |  First Published Feb 5, 2024, 11:14 AM IST

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ, ಅವಳಿ ಕಂದಮ್ಮಗಳ ಮೃತಪಟ್ಟಿದ್ದಾರೆಂದು ಆರೋಪಿಸಿ ಮೃತ ಸಂಬಂಧಿಕರು ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.


ಗದಗ (ಫೆ.5): ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ, ಅವಳಿ ಕಂದಮ್ಮಗಳ ಮೃತಪಟ್ಟಿದ್ದಾರೆಂದು ಆರೋಪಿಸಿ ಮೃತ ಸಂಬಂಧಿಕರು ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬಾಣಂತಿ ನಂದಿನಿ, ಎರಡು ಅವಳಿ ಮಕ್ಕಳು ಸಾವು. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ವಿರುಪಾಪೂರ ಗ್ರಾಮದ‌ವರಾಗಿರುವ ಮಹಿಳೆ. ಫೆಬ್ರುವರಿ 2ರಂದು ಸಿಜೇರಿಯನ್ ಮಾಡಿ ಹೆರಿಗೆ ಮಾಡಿಸಿದ್ದ ವೈದ್ಯರು. ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ತಾಯಿ. ಆದರೆ ಸಿಜೆರಿಯನ್  ಮಾಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಮೊದಲೇ ರಕ್ತದ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯದಿಂದ ಸಿಜೇರಿಯನ್ ಮಾಡಿದ್ದರಿಂದಲೇ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿಗೆ ಲೋ ಬಿಪಿಯಾಗಿದೆ. ಬಾಗಲಕೋಟೆ ಜಿಲ್ಲೆ ಬದಾಮಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬಾಣಂತಿ ಮೃತಪಟ್ಟಿದ್ದಾಳೆ. ಅವಳಿ ಮಕ್ಕಳು ಸಹ ಮೃತಪಟ್ಟಿವೆ. ಬಾಣಂತಿ ನಂದಿನಿ ಅವಳಿ ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕಾರೊಡಗಿಮಠ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

undefined

ಚಾಮರಾಜನಗರ: ಡಾಕ್ಟರ್ಸ್‌ ನಿರ್ಲಕ್ಷ್ಯಕ್ಕೆ ಬಾಲಕ ಸಾವು, ವೈದ್ಯರ ವಿರುದ್ಧ ಎಫ್‌ಐಆರ್‌

ಕಾರೊಡಗಿಮಠ ಆಸ್ಪತ್ರೆ ಎದುರು ಮೃತ ಬಾಣಂತಿಯ ಕುಟುಂಬಸ್ಥರು ಬಾಣಂತಿ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಮುಂದೆ ನೂರಾರು ಜನರು ಜಮಾಯಿಸುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ವಿಚಾರಣೆ ಮುಂದುವರಿದಿದೆ.

click me!