ಗಂಡನಿಂದ ಚಾಕು ಇರಿತ: ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆಗೆ ಪೊಲೀಸರಿಂದ ಆರೈಕೆ

By Govindaraj S  |  First Published Jun 24, 2023, 10:03 AM IST

ಬಾಣಸವಾಡಿ ಪೊಲೀಸರು ರಸ್ತೆಯಲ್ಲಿ ರಕ್ತದ ಮಡುವಿ‌ಲ್ಲಿ ಬಿದ್ದಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ನಿಖಿತಾ (28) ಗಾಯಗೊಳಗಾದ ಮಹಿಳೆ. ತ್ರೀವ್ರ ರಕ್ತ ಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಬಾಣಸವಾಡಿ ಪೊಲೀಸರು ಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. 


ಬೆಂಗಳೂರು (ಜೂ.24): ಬಾಣಸವಾಡಿ ಪೊಲೀಸರು ರಸ್ತೆಯಲ್ಲಿ ರಕ್ತದ ಮಡುವಿ‌ಲ್ಲಿ ಬಿದ್ದಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ನಿಖಿತಾ (28) ಗಾಯಗೊಳಗಾದ ಮಹಿಳೆ. ತ್ರೀವ್ರ ರಕ್ತ ಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಬಾಣಸವಾಡಿ ಪೊಲೀಸರು ಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. 

ನಂತರ ನಾಲ್ಕು ಬಾಟಲಿ ರಕ್ತ ವ್ಯವಸ್ಥೆ ಮಾಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಿಖಿತಾರನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಆರೈಕೆ ಮಾಡುತ್ತಿದ್ದಾರೆ. ಪ್ರೇಮ ವಿವಾಹ ಕಾರಣಕ್ಕೆ ಮಗಳಿಂದ ನಿಖಿತಾ ಕುಟುಂಬದವರು ದೂರವಾಗಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಸಹಾಯಕ್ಕೆ ಮಹಿಳಾ ಕಾನ್‌ಸ್ಟೇಬಲ್‌ ಒಬ್ಬರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ಏನಿದು ಘಟನೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ಗಾಯಾಳು ಪತಿ ಸೇರಿದಂತೆ ಇಬ್ಬರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜಪುರ ನಿವಾಸಿ ಆರ್‌.ನಿಖಿತಾ (28) ಹಲ್ಲೆಗೊಳಗಾಗಿದ್ದು, ಈ ಕೃತ್ಯ ಸಂಬಂಧ ನಿಖಿತಾ ಪತಿ ದಿವಾಕರ್‌ ಹಾಗೂ ಸಂಬಂಧಿ ಪ್ರತೀಬ್‌ನನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಬಾಣಸವಾಡಿ ಸಮೀಪ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ನಿಖಿತಾಳನ್ನು ಅಡ್ಡಗಟ್ಟಿ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತೋಟದ ಒಂಟಿ ಮನೆ ಮೇಲೆ ಕಳ್ಳರ ದಾಳಿ, ಮನೆ ದರೋಡೆ: ದಂಪತಿ ಮೇಲೆ ಹಲ್ಲೆ

ಐದು ವರ್ಷಗಳ ಹಿಂದೆ ದಿವಾಕರ್‌ ಹಾಗೂ ನಿಖಿತಾ ಪ್ರೇಮ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕೌಟುಂಬಿಕ ಕಾರಣಗಳಿಗೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ನಡುವೆ ಪುನವರ್ಸತಿ ಕೇಂದ್ರಕ್ಕೆ ಸಹ ದಿವಾಕರ್‌ನನ್ನು ಸೇರಿಸಲಾಗಿತ್ತು. ಅಲ್ಲಿ ಕೆಲ ದಿನಗಳು ಚಿಕಿತ್ಸೆ ಪಡೆದು ಮರಳಿದ ಆತ, ತನ್ನ ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ. ಇದೇ ಕಾರಣಕ್ಕೆ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ದಿವಾಕರ್‌ ಯತ್ನಿಸಿದ್ದ. ಈ ಕೃತ್ಯಕ್ಕೆ ಸಾಥ್‌ ಕೊಟ್ಟಆರೋಪದ ಮೇರೆಗೆ ಆತನ ಸಂಬಂಧಿ ಪ್ರತೀಬ್‌ನನ್ನು ಸಹ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!