ಬೆಳಗಾವಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಳ್ಳರು ಮಹಿಳೆಯೊಬ್ಬರ 50 ಗ್ರಾಂ ಚಿನ್ನಾಭರಣ, ಪರ್ಸ್ ಕದ್ದು ಪರಾರಿಯಾದ ಖದೀಮರು.
ಬೆಳಗಾವಿ(ಜೂ.23): ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ. ಬೆಳಗಾವಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಳ್ಳರು ಮಹಿಳೆಯೊಬ್ಬರ 50 ಗ್ರಾಂ ಚಿನ್ನಾಭರಣ, ಪರ್ಸ್ ಕದ್ದು ಪರಾರಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ನಿವಾಸಿ 30 ವರ್ಷದ ಗೃಹಿಣಿ ಆರತಿ ಹನುಮಂತ ಕಡೋಲ್ಕರ ಜೂ.20 ರಂದು ತನ್ನ ಪೋಷಕರು ಮತ್ತು ಒಂದೂವರೆ ವರ್ಷದ ಮಗಳೊಂದಿಗೆ ಕಡೋಲಿ ಗ್ರಾಮದಿಂದ ಬೆಳಗಾವಿ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಬಂದಿದ್ದರು. ಅವರೆಲ್ಲ ನೆಹರೂನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬರಲು ಬಸ್‌ನಿಂದ ಇಳಿದರು. ಸಂಬಂಧಿಕರ ಮನೆಗೆ ತೆರಳಿದ ಮಹಿಳೆ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್‌ನ ಚೈನ್ ತೆರೆದಿದ್ದು, ಅದರಲ್ಲಿ ಇಟ್ಟಿದ್ದ ಸಣ್ಣ ಪರ್ಸ್ ಕಾಣೆಯಾಗಿತ್ತು.
ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಕಾಲೇಜು ವಿದ್ಯಾರ್ಥಿನಿ, ಶವವಾಗಿ ಮನೆಗೆ ಹೋದಳು
ಆಕೆಯ ಬಳಿಯಿದ್ದ 50 ಗ್ರಾಂ ಚಿನ್ನದ ಸರ, ಎಟಿಎಂ ಕಾರ್ಡ್, ಪತಿಯ ಬಿಎಸ್‌ಎಫ್ ಮಿಲಿಟರಿ ಕಾರ್ಡ್, ಬೆಳ್ಳಿಯ ಕಾಲುಂಗರ, ವಾಚ್ ಸೇರಿದಂತೆ ಸುಮಾರು 2.10 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಈ ಕುರಿತು ಎಪಿಎಂಸಿ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.