ನವಜಾತ ಶಿಶುವನ್ನು ಕಸದಂತೆ ಚರಂಡಿಗೆ ಎಸೆದುಹೋದ ಪಾಪಿಗಳು!

By Ravi Janekal  |  First Published Sep 10, 2024, 8:02 PM IST

ದುರುಳರು ನವಜಾತ ಶಿಶುವನ್ನು ಚರಂಡಿಯಲ್ಲಿ ಎಸೆದು ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿ ಬಳಿ ನಡೆದಿದೆ.


ಬಾಗಲಕೋಟೆ (ಸೆ.10): ದುರುಳರು ನವಜಾತ ಶಿಶುವನ್ನು ಚರಂಡಿಯಲ್ಲಿ ಎಸೆದು ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿ ಬಳಿ ನಡೆದಿದೆ.

ಬಾಕ್ಸ್‌ನಲ್ಲಿ ಇಟ್ಟು ಎಸೆದುಹೋಗಿರುವ ಪಾಪಿಗಳು.  ಚರಂಡಿಗೆ ಎಸೆದಿದ್ದರಿಂದ ಶಿಶು ಮೃತಪಟ್ಟಿದೆ.  ಅಗಸಿ ಬಳಿ ಬಾಕ್ಸ್ ಕಂಡು ಜಮಾಯಿಸಿದ ಸ್ಥಳೀಯರು. ಬಾಕ್ಸ್ ತೆಗೆದು ನೋಡಿದಾಗ ನವಜಾತ ಶಿಶು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮಗು ಯಾರದ್ದು? ಎಸೆದು ಹೋದವರು ಯಾರು? ತಿಳಿದಿಲ್ಲ. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಹೆತ್ತ ಪಾಪಿಗಳಿಗೆ ಹಿಡಿಶಾಪ ಹಾಕಿದರು. 

Tap to resize

Latest Videos

undefined

ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರ ವಿರುದ್ದ ದೂರು ನೀಡಲು ಮುಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು.

Viral Video: ಕುತ್ತಿಗೆವರರೆಗೆ ಬಂದ ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಕ್ರೇಟ್‌ನಲ್ಲಿ ಸಾಗಿಸಿದ ವ್ಯಕ್ತಿ!

ಉತ್ತರ ಕನ್ನಡದಲ್ಲೂ ನಡೆದಿತ್ತು:

ಕಳೆದ ವಾರ ಉತ್ತರ ಕನ್ನಡ ಜಿಲ್ಲೆಯ ಒಂದು ದಿನದ ನವಜಾತ ಶಿಶುವನ್ನು ದುಷ್ಕರ್ಮಿಗಳು ಪೊದೆಯಲ್ಲಿ ಬಿಸಾಕಿ ಘಟನೆ ನಡೆದಿತ್ತು. ಹೆಣ್ಣು ಮಗು ಎಂಬ ಕಾರಣಕ್ಕೆ ಪೊದೆಯಲ್ಲಿ ಬಿಸಾಕಿದ್ದ ದುರುಳರು. ಇದೀಗ ಮತ್ತೆ ನವಜಾತ ಶಿಶು ಚರಂಡಿಗೆ ಎಸೆದ ಹೋದ ಪ್ರಕರಣ ಬೆಚ್ಚಿಬಿಳಿಸಿದೆ. ನವಜಾತ ಶಿಶುಗಳನ್ನ ಪದೇಪದೆ ಎಸೆಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾಗಿ ಶಿಕ್ಷೆ ವಿಧಿಸಬೇಕು. ನವಜಾತ ಶಿಶುಗಳನ್ನು ಜೀವಂತ ಎಸೆಯುವುದು ತಡೆಗಟ್ಟಬೇಕು.

click me!