ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು ನಡೆದು 20 ದಿನವಾದರೂ ಇಲ್ಲಿಯವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ ಮುಂದಿನ ಹತ್ತು ದಿನಗಳೊಳಗಾಗಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸದಿದ್ದಲ್ಲಿ ನಿರಂತರ ಹೋರಾಟ ನಡೆಸಲಾಗುವುದು.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.04): ನಗರದ ಚಾಮರಾಜಪೇಟೆಯಲ್ಲಿರುವ (Chamarajapete) ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು (New Born Baby) ಕಳವು ನಡೆದು 20 ದಿನವಾದರೂ ಇಲ್ಲಿಯವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ ಮುಂದಿನ ಹತ್ತು ದಿನಗಳೊಳಗಾಗಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸದಿದ್ದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಟಿ ಆಸ್ಗರ್ ಎಚ್ಚರಿಸಿದ್ದಾರೆ. ಮಾ.16 ರಂದು ಸಂಜೆ 6.18ಕ್ಕೆ ಹರಪನಹಳ್ಳಿ ಪಟ್ಟಣದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಗಂಡು ಶಿಶುವಿನ ಜನನವಾಗಿತ್ತು. ಮಗುವಿಗೆ ಉಸಿರಾಟದ ತೊಂದರೆ ಆಗಿತ್ತು ಎಂದು ಮಕ್ಕಳ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು.
ಎರಡು ತಾಸಿನ ನಂತರ ಶಿಶು ನೀಡುವಾಗ ತಾಯಿ ಕಾರ್ಡ್ ತರುವಂತೆ ತಿಳಿಸಲಾಗಿತ್ತು. ಅದರಂತೆ ಇಸ್ಮಾಯಿಲ್ ಅವರು ತಾಯಿ ಕಾರ್ಡ್ ತರಲು ಹೋದಾಗ ಅಪರಿಚಿತ ಮಹಿಳೆಗೆ ಮಗು ಪಡೆದುಕೊಂಡು ಹೋಗಿದ್ದಾಳೆ. ಪಿಂಕ್ ಚೂಡಿದಾರ ಧರಿಸಿ ತಲೆ ಮೇಲೆ ಬಿಳಿ ವಸ್ತ್ರ ಹಾಕಿಕೊಂಡಿದ್ದ ಮಹಿಳೆ (Unkown Women) ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸ್ಪಷ್ಟವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯರ , ಅಲ್ಲಿನ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ. ಆದ್ರೆ ಇದುವವರೆಗು ಮಗು ಕಳ್ಳಿಯ ಸುಳಿವು ಸಿಕ್ಕಿಲ್ಲ.
Davanagere ಆಸ್ಪತ್ರೆಯಿಂದಲೇ ನವಜಾತ ಶಿಶು ನಾಪತ್ತೆ, ಪತ್ತೆಯಾಗದ ಖದೀಮರು!
ಮಗುವಿಗಾಗಿ ಹಂಬಲಿಸುತ್ತಿರುವ ತಾಯಿ: ಕಳೆದ 20 ದಿನಗಳಿಂದ ತನ್ನ ಮಗು ಕಾಣೆಯಾಗಿದೆ ಎಂದು ಮಗುವಿನ ತಾಯಿಗೆ ಗೊತ್ತಿಲ್ಲ. ಸಿಜೇರಿಯನ್ ಶಸ್ತ್ರ ಚಿಕಿತ್ಸೆ ನಡೆದಿರುವುದರಿಂದ ಮಗುವಿನ ತಾಯಿ ಉಮೇಸಲ್ಮಾ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆ ಮಹಿಳೆ ಜೊತೆ ಪತಿ ಸೇರಿದಂತೆ ಇತರ ಸಂಬಂಧಿಕರು ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಮಗು ಸಿಕ್ಕಿದ ಮೇಲೆ ಆಸ್ಪತ್ರೆಯಿಂದ ಹೋಗುತ್ತೇವೆ ಅಲ್ಲಿವರೆಗು ನಾವು ಆಸ್ಪತ್ರೆ ಬಿಟ್ಟು ಹೋಗುವುದಿಲ್ಲ ಎಂದು ಇಡೀ ಕುಟುಂಬ ಪಟ್ಟು ಹಿಡಿದಿದೆ. ಇನ್ನು ಇವರ ಜೊತೆ ಕೈ ಜೋಡಿಸಿರುವ ವಿವಿಧ ನಾಗರಿಕ ಸಂಘಟನೆಗಳು ಆಸ್ಪತ್ರೆ ಹೊರಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿವೆ.
ಬಹುಮಾನ ಘೋಷಿಸಿದರೂ ಸಿಕ್ಕಿಲ್ಲ ಸುಳಿವು: ಮಗುವಿನ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನ ಕೊಡುವುದಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘೋಷಣೆ ಮಾಡಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡ ಅಮಾನುಲ್ಲಾ ಖಾನ್ ಜೆಡಿಎಸ್ ಪಕ್ಷದಿಂದ 10 ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಆದರೂ ಮಗುವಿನ ಸುಳಿವು ಇದುವರೆಗು ಪೊಲೀಸರಿಗೆ ಪತ್ತೆಯಾಗಿಲ್ಲ.
ಹಳ್ಳಿಗಳಲ್ಲಿ ಹೊನ್ನಾರು ಸಡಗರ: ನೇಗಿಲು ಹಿಡಿದ ಡಿಸಿ, ಟ್ರಾಕ್ಟರ್ ಏರಿದ ರೇಣುಕಾಚಾರ್ಯ
ಕೆಲ ವರ್ಷಗಳ ಹಿಂದೆ ಕಂಪ್ಲಿಯಲ್ಲಿ ನಡೆದ ಘಟನೆಯೊಂದರಲ್ಲಿ ತಾಯಿ ತವರು ಮನೆಗೆ ಹೆರಿಗೆಗೆ ಹೋದ ಸಂದರ್ಭದಲ್ಲಿ ತಾಯಿಯ ಜೊತೆಯೇ ತೆರಳಿದ್ದ 2 ವರ್ಷದ ಮಗು ದಿಢೀರನೆ ನಾಪತ್ತೆಯಾಗಿದ್ದ ಮಗು ಮೂರು ವರ್ಷದ ಬಳಿಕ ಪತ್ತೆಯಾಗಿತ್ತು. ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಬಲಕುಂದೆಪ್ಪ ತಾತನ ದೇವಸ್ಥಾನ ಬಳಿ ಮಗು ವಾಪಸ್ ಸಿಕ್ಕಿತ್ತು. ದೇವಲಾಪುರ ಗ್ರಾಮದ ಗುಬಾಜಿ ಯಲ್ಲಪ್ಪನ ಪತ್ನಿ ಮಲ್ಲಮ್ಮ 3 ವರ್ಷಗಳ ಹಿಂದೆ ತನ್ನ 2ನೇ ಮಗುವಿನ ಹೆರಿಗೆಗೆಂದು ತವರು ಮನೆ ದೇವಸಮುದ್ರ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ 2 ವರ್ಷ, 2 ತಿಂಗಳ ಚೊಚ್ಚಲ ಹೆಣ್ಣು ಮಗು ಉಮಾದೇವಿ ನಾಪತ್ತೆಯಾಗಿದ್ದಳು. ಈ ಕುರಿತು ಆಗ ಕಂಪ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.