ಡ್ಯಾಂ ನೀರಿನಲ್ಲಿ ಮುಳುಗಿ ಮಲೆಯಾಳಂ ಖ್ಯಾತ ನಟ ದುರಂತ ಸಾವು

Published : Dec 25, 2020, 10:48 PM ISTUpdated : Dec 25, 2020, 10:49 PM IST
ಡ್ಯಾಂ ನೀರಿನಲ್ಲಿ ಮುಳುಗಿ ಮಲೆಯಾಳಂ ಖ್ಯಾತ ನಟ ದುರಂತ ಸಾವು

ಸಾರಾಂಶ

ಚಿತ್ರೀಕರಣಕ್ಕೆ ತೆರಳಿದ್ದಾಗ ದುರಂತ / ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ದುರ್ಘಟನೆ/ ಮಲೆಯಾಳಂ ನಟ ನೀರಿನಲ್ಲಿ ಮುಳುಗಿ ಸಾವು/  ಹಲವು ಸಿನಿಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದ  ಅನಿಲ್ ನೆಡುಮಂಗದ್ 

ಕೊಚ್ಚಿನ್(ಡಿ. 25)  ಮಲಯಾಳಂ ನ ಜನಪ್ರಿಯ ನಟ ಅನಿಲ್ ನೆಡುಮಂಗದ್ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.  ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಕನ್ನಡದ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

'ಅಯ್ಯಪ್ಪನುಂ ಕೋಶಿಯುಂ' ಸೇರಿ ಹಲವಾರು ಜನಪ್ರಿಯ ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದ ಅನಿಲ್ ನೆಡುಮಂಗದ್ ಮಲನ್‌ಕರ ಡ್ಯಾಂನಲ್ಲಿ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮಾಸ್ತಿಗುಡಿ ದುರಂತ ಹೇಗೆ ಸಂಭವಿಸಿತು?

ಮಲನ್‌ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ 'ಪೀಸ್‌' ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್‌ಕರ ಡ್ಯಾಂ ಗೆ ಹೋಗಿದ್ದರು.  ಈಜಾಡುವ ವೇಳೆ ಆಯತಪ್ಪಿದ್ದು ದುರಂತ ಸಾವಿಗೀಡಾಗಿದ್ದಾರೆ.

ಮಲೆಯಾಳಂ, ತೆಲಗು ಮತ್ತು ತಮಿಳಿನ ಅನೇಕ ನಟರು ಅನಿಲ್  ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಮಾಸ್ತಿಗುಡಿ  ಚಿತ್ರೀಕರಣದ ವೇಳೆಯೇ ಅವಗಢ ಸಂಭವಿಸಿತ್ತು. ಆದರೆ ಈ ಪ್ರಕರಣದಲ್ಲಿ ಸ್ನೇಹಿತರ ಜತೆ ಈಜಲು ತೆರಳಿದ್ದಾಗ ನಟ ಕೊನೆ ಉಸಿರೆಳೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!