ಬಾಯ್ ಫ್ರೆಂಡ್ ಜೊತೆ ಸಿಕ್ಕಾಕೊಂಡ ವಿವಾಹಿತೆ, ಇಬ್ಬರ ಮೂಗು ಕಟ್!

By Suvarna News  |  First Published Jan 28, 2020, 4:25 PM IST

ಯುವಕನೊಂದಿಗೆ ವಿವಾಹಿತ ಮಹಿಳೆಯ ಅಕ್ರಮ ಸಂಬಂಧ| ಕುಟುಂಬ ಸದಸ್ಯರ ಕೈಯ್ಯಲ್ಲಿ ರೆಡ್‌ ಹ್ಯಾಂಡ್ ಆಗಿ ಸಿಕ್ಕಾಕೊಂಡ ಜೋಡಿ| ಒಗ್ಗೂಡಿದ ಗ್ರಾಮಸ್ಥರು, ಇಬ್ಬರಿಗೂ ಹಿಗ್ಗಾಮುಗ್ಗ ಥಳಿತ| ಮೂಗಿಗೂ ಬಿತ್ತು ಕತ್ತರಿ


ಅಯೋಧ್ಯೆ[ಜ.28]: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಕ್ರಮ ಸಂಬಂಧ ಪ್ರಕರಣದಲ್ಲಿ, ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಗ್ರಾಮಸ್ಥರೆಲ್ಲ ಸೇರಿ ತಾಲೀಬಾನಿ ಶಿಕ್ಷೆ ವಿಧಿಸಿದ್ದಾರೆ. ಕುಟುಂಬ ಸದಸ್ಯರು ವಿವಾಹಿತ ಮಹಿಳೆ ಆಕೆಯ ಪ್ರಿಯಕರನೊಂದಿಗೆ ನೋಡಬಾರದ ಸ್ಥಿತಿಯಲ್ಲಿ ನೋಡಿದಾಗ, ಇಬ್ಬರಿಗೂ ಭರ್ಜರಿಯಾಗಿ ಥಳಿಸಿ, ಬಳಿಕ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲ ಸೇರಿ ವಿವಾಹಿತ ಮಹಿಳೆ ಹಾಗೂ ಪ್ರಿಯಕರನ ಮೂಗನ್ನು ಮೂಗನ್ನು ಕತ್ತರಿಸಿದ್ದಾರೆ.

ಅಯೋಧ್ಯೆಯ ಪಿಪ್ರಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ವಿವಾಹಿತಯ ಮಹಿಳೆ ಹಾಗೂ ಆಕೆಯ ಪ್ರಿತಕರನನ್ನು ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ಕಾನೂನಾತ್ಮಕ ತನಿಖೆ ಆರಂಭಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಪಿಪ್ರಾ ಹಳ್ಳಿ 30 ವರ್ಷದ ವಿವಾಹಿತ ಮಹಿಳೆ ಹಾಗೂ ಇದೇ ಗ್ರಾಮದ ಬೇರೆ ಸಮುದಾಯದ 23 ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಇವರಿಬ್ಬರೂ ಎಲ್ಲರ ಕಣ್ತಪ್ಪಿಸಿ ಭೇಟಿಯಾಗುತ್ತಿದ್ದರು. 

Tap to resize

Latest Videos

ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ

ಆದರೆ ಈ ವಿಚಾರ ವಿವಾಹಿತ ಮಹಿಳೆಯ ಕುಟುಂಬ ಸದಸ್ಯರ ಗಮನಕ್ಕೆ ಬಂದಿದ್ದು, ಇಬ್ಬರಿಗೂ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸುತ್ತಾರೆ. ಕುಟುಂಬಸ್ಥರು ಇಬ್ಬರ ಮೇಲೆ ಕಣ್ಣಿಟ್ಟಿದ್ದು, ಚಲನವಲನ ಗಮನಿಸಲಾರಂಭಿಸಿದ್ದಾರೆ. ಈ ನಡುವೆ ಅದೊಂದು ದಿನ ಪ್ರಿಯಕರ, ಮಹಿಳೆಯನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ದಾನೆ. ಈ ವೇಳೆ ಕುಟುಂಬ ಸದಸ್ಯರು ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಜ್ಜಾಗಿದ್ದಾರೆ. ಅಪಾಯವನ್ನರಿತ ಮಹಿಳೆ ಆತನನ್ನು ಹತ್ತಿರದಲ್ಲಿದ್ದ ಹುಲ್ಲಿನ ರಾಶಿಯೊಳಗೆ ಅವಿತುಕೊಳ್ಳಲು ಸೂಚಿಸಿದ್ದದಾಳೆ. ಹೀಗಾಗಿ ಅಂದು ಆತ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

ಮಹಿಳೆಯ ಮೂಗು ಮೊದಲು ಕಟ್

ಆದರೆ ಸೋಮವಾರ ರಾತ್ರಿ ಈ ರೀತಿಯಾಗಲಿಲ್ಲ. ಮತ್ತೆ ಮಹಿಳೆಯನ್ನು ಭೇಟಿಯಾಗಲು ಬಂದಿದ್ದ ಪ್ರಿಯಕರ ತಪ್ಪಿಸಿಕೊಂಡು ಓಡಿ, ತನ್ನ ಮನೆ ಸೇರುವ ಮುನ್ನವೇ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಹಿಳೆ ಆತನಿಗೆ ಹೊಡೆಯದಂತೆ ಗೋಗರೆದಿದ್ದಾಳೆ. ಈ ವೇಳೆ ಆಕೆಯನ್ನೂ ಹಿಡಿದು ಭರ್ಜರಿಯಾಗಿ ಥಳಿಸಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲಾ ಒಟ್ಟಾಗಿ ಮಾತುಕತೆ ನಡೆಸಿ, ಮಹಿಳೆಗೆ ಮೊದಲು ಶಿಕ್ಷೆ ವಿಧಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ನಿರ್ಧರಿಸಿದಂತೆ ಮೊದಲು ಮಹಿಳೆಯ ಮೂಗು ಕತ್ತರಿಸಿ ಬಳಿಕ ಯುವಕನ ಮೂಗಿಗೆ ಚಾಕು ಬೀಸಿದ್ದಾರೆ.

ಮೈದುನನ ಜೊತೆ ತಾಯಿಯ ನಗ್ನ ಆಟ ನೋಡಿದ ಮಗ: ಬಳಿಕ ನಡೆದಿದೆಲ್ಲಾ ದುರಂತ...!

ಇಬ್ಬರನ್ನೂ ಪೊಲೀಸರಿಗೊಪ್ಪಿಸಿದ್ರು

ಇಷ್ಟೆಲ್ಲಾ ನಡೆದ ಬಳಿಕ ಗ್ರಾಮಸ್ಥರು ಇವರಿಬ್ಬರನ್ನು ಪೊಲೀಸರಿಗೊಪ್ಪಿಸಿದ್ದಾರೆ. ಇಬ್ಬರ ಮೂಗಿನಿಂದ ಸುರಿಯುತ್ತಿದ್ದ ರಕ್ತ ಕಂಡ ಪೊಲೀಸರು ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇವರಿಬ್ಬರು ಕಳೆದ ಸುಮಾರು ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಅಕ್ರಮ ಸಂಬಂಧವಿಟ್ಟುಕೊಂಡಿದ್ದರೆನ್ನಲಾಗಿದೆ. ಅಲ್ಲದೇ ಶೀಘ್ರದಲ್ಲಿ ಇವರಿಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಲು ಪ್ಲಾನ್ ಮಾಡಿದ್ದರು. ಮಹಿಳೆ ಸಾಮಾನ್ಯವಾಗಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳೆನ್ನಲಾಗಿದೆ. 

ಖ್ಯಾತ ಟಿವಿ ನಿರೂಪಕಿ ಅನುಮಾನಾಸ್ಪದ ಸಾವು: ಅಡುಗೆ ಮನೆಯಲ್ಲಿ ಶವ ಪತ್ತೆ

click me!