
ಹುಬ್ಬಳ್ಳಿ(ಮಾ.25): ಆಟೋ ಚಾಲಕನೊಬ್ಬ ಯುವತಿಗೆ ಜೀವ ಬೆದರಿಕೆಯೊಡ್ಡಿ ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತ ಚಿನ್ನಾಭರಣ ಕಿತ್ತುಕೊಂಡಿದ್ದಲ್ಲದೆ, 25 ಲಕ್ಷ ಹಣ ಕೊಡುವಂತೆ ಹೆದರಿಸಿದ ಪ್ರಕರಣ ಇಲ್ಲಿನ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಳೆ ಹುಬ್ಬಳ್ಳಿ ರಾಜೇಂದ್ರನಗರದ ನಿವಾಸಿ ಅನೀಲರಾಜ ಡೊಂಗರೆ ಆರೋಪಿ. ಆಟೋ ಚಾಲಕನಾದ ಈತ ಯುವತಿಯ ತಾಯಿಯನ್ನು ಅವರ ಕಚೇರಿಗೆ ಪ್ರತಿದಿನ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದ. ಕಳೆದ ಜ. 21ರಂದು ಬೆಳಗ್ಗೆ ಅವರು ಕೆಲಸಕ್ಕೆ ಹೋದಾಗ ಮನೆಗೆ ಬಂದ ಆರೋಪಿ ನಿಮ್ಮ ತಾಯಿ ಅಕ್ಕಿ ಪ್ಯಾಕೆಟ್ ಕೊಟ್ಟಿದ್ದಾರೆ. ಬಾಗಿಲು ತೆಗಿ ಎಂದು ಹೇಳಿ ಯುವತಿಯಿಂದ ಬಾಗಿಲು ತೆಗೆಸಿ ಮನೆಯೊಳಗೆ ಬಂದಿದ್ದಾನೆ. ಬಳಿಕ ನೀರು ಕೊಡುವಂತೆ ಕೇಳಿದ್ದಾನೆ. ಯುವತಿ ನೀರು ತರುವ ವೇಳೆ ಬಟ್ಟೆ ತೆಗೆಯುವಂತೆ ಹೇಳಿದ್ದಾನೆ. ಯುವತಿ ನಿರಾಕರಿಸಿದಾಗ ಬೆಲ್ಟ್‌ನಿಂದ ಹೊಡೆದಿದ್ದಲ್ಲದೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.
ಪ್ರೀತಿ ತಿರಸ್ಕರಿಸಿದ ಯುವಕ: ವಿಡಿಯೋ ಬಹಿರಂಗ ಮಾಡೋದಾಗಿ ಯುವತಿಯಿಂದ ಬ್ಲಾಕ್‌ಮೇಲ್..!
ಬಳಿಕ ಯುವತಿಯ ವಿಡಿಯೋ ಮಾಡಿಕೊಂಡು ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಮೊಬೈಲ್‌ಗಳಿಗೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಹೀಗೆ 4 ತೊಲೆ ಚಿನ್ನದ ಸರವನ್ನು ಪಡೆದ ಆರೋಪಿ ಯುವತಿಯ ತಾಯಿಗೆ 25 ಲಕ್ಷ ನೀಡಬೇಕು, ತಾನು ಹೇಳಿದವರ ಜತೆ ಕಳಿಸಬೇಕು ಎಂದು ಬ್ಲಾಕ್‌ಮೇಲ್ ಮಾಡಿದ್ದಲ್ಲದೆ ವಿಡಿಯೋವನ್ನು ನನ್ನ ಹಾಗೂ ಮಗಳ ಮೊಬೈಲ್‌ಗೆ ಕಳಿಸಿದ್ದಾನೆ ಎಂದು ಯುವತಿಯ ತಾಯಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ