ಮಧುಗಿರಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ: ಪರಾರಿಯಾದ ಹುಡುಗರು!

By Govindaraj S  |  First Published Dec 20, 2023, 10:55 AM IST

ಮೂರು ಜನ ಹುಡುಗರ ತಂಡ ಮೊಬೈಲ್ ಖರೀದಿಸಲು ನಕಲಿ ನೋಟು ಚಲಾಯಿಸಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.


ತುಮಕೂರು (ಡಿ.20): ಮೂರು ಜನ ಹುಡುಗರ ತಂಡ ಮೊಬೈಲ್ ಖರೀದಿಸಲು ನಕಲಿ ನೋಟು ಚಲಾಯಿಸಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. ಮಧುಗಿರಿ ಪಟ್ಟಣದ ವಿ.ಆರ್.ಎಸ್.ಟಿ ರಸ್ತೆಯಲ್ಲಿರುವ ಬಯಲು ಬಸವೇಶ್ವರ ಮೊಬೈಲ್ ಅಂಗಡಿಯಲ್ಲಿ ಸೋಮವಾರ ಸಂಜೆ 6:30 ರಲ್ಲಿ ಮೂವರು ಹುಡುಗರು  ಮೊಬೈಲ್ ಅಂಗಡಿಗೆ ತೆರಳಿ ಕಡಿಮೆ ಬೆಲೆಯ ಫೋನ್ ತೋರಿಸಲು ತಿಳಿಸಿದ್ದಾರೆ. ಅಂಗಡಿಯವರು ಫೋನ್ ತೋರಿಸಿದಾಗ ಹುಡುಗರು ಹತ್ತುವರೆ ಸಾವಿರದ ಫೋನ್ ಇರಲಿ ಎಂದು ತಿಳಿಸಿ 500 ರೂಪಾಯಿ ಮುಖಬೆಲೆಯ 21 ನೋಟುಗಳನ್ನು ಅಂಗಡಿ ಮಾಲೀಕರಿಗೆ ನೀಡಿದ್ದಾರೆ. 

ನೋಟುಗಳನ್ನು ಸ್ವೀಕರಿಸಿದ ಅಂಗಡಿ ಮಾಲೀಕನಿಗೆ ನೋಟುಗಳ ಸ್ಪರ್ಶತೆಯಿಂದ ನಕಲಿ ನೋಟುಗಳು ಎಂದು ಅನುಮಾನ ಬಂದು, ಈ ಖೋಟಾ ನೋಟು ನಿಮ್ಮ ಹತ್ತಿರ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಹುಡುಗರು ಗಾಬರಿಯಾಗಿ ಅಂಗಡಿಯಿಂದ ಓಡಿ ಹೋಗಿದ್ದಾರೆ.  ಮುಂಜಾಗ್ರತೆ ಕ್ರಮವಾಗಿ ಮೊಬೈಲ್ ಅಂಗಡಿ ಮಾಲೀಕರಾದ ನವೀನ್ ನಕಲಿ ನೋಟುಗಳನ್ನು ಮಧುಗಿರಿ ಪೊಲೀಸ್ ಠಾಣೆಗೆ ಹಿಂದಿರುಗಿಸಿ ಈ ವಿಷಯವಾಗಿ ದೂರು ನೀಡಿದ್ದಾರೆ. ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tap to resize

Latest Videos

undefined

ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ?: ಸಚಿವ ಪ್ರಿಯಾಂಕ ಖರ್ಗೆ

ಅಂಕೋಲಾದಲ್ಲಿ ನಕಲಿ ನೋಟಿನ ಹಾವಳಿ: ಪಟ್ಟಣದ ಹಲವೆಡೆ . 500 ಮುಖಬೆಲೆಯ ನಕಲಿ ನೋಟಿನ ಚಲಾವಣೆ ಹೆಚ್ಚಾಗಿದ್ದು ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ನಕಲಿ ನೋಟು ಚಲಾವಣೆ ಮಾಡುವ ಒಂದು ತಂಡವೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಸಕ್ರೀಯವಾಗಿದೆ. ಹೆಚ್ಚಾಗಿ ಅಂಕೋಲಾದ ಶನಿವಾರದ ಸಂತೆಯಲ್ಲಿ ಖೋಟಾ ನೋಟು ತನ್ನ ಕರಾಳ ಮುಖ ಪ್ರದರ್ಶಿಸುತ್ತಲಿದೆ. . 500 ಮುಖಬೆಲೆಯ ನೋಟುಗಳನ್ನಷ್ಟೆಆಯ್ದ ಕೆಲವು ವ್ಯಕ್ತಿಗಳಿಗೆ ಕೊಟ್ಟು ಜನದಟ್ಟಣೆ ಇರುವ ವ್ಯಾಪಾರ ಕೇಂದ್ರಗಳಲ್ಲಿ ವಸ್ತು ಖರೀದಿಸಿ ನೋಟು ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

ಕೆಲವೆಡೆ ಅಸಲಿ ನೋಟಿನ ಜತೆಗೆ ನಕಲಿ ನೋಟುಗಳನ್ನು ಸೇರಿಸಿ ಕೊಡುವುದು ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ವಸ್ತು ಖರೀದಿಸಿ ಕಲರ್‌ ಪ್ರಿಂಟ್‌ ನೋಟು ಕೊಟ್ಟು ಹೋಗುತ್ತಿದ್ದಾರೆ. ಅಸಲಿ ನೋಟನ್ನು ಕಲರ್‌ ಪ್ರಿಂಟ್‌ ಮಾಡಿ ನೋಟಿನ ಮಧ್ಯಭಾಗದಲ್ಲಿ ಬರುವ ಆರ್‌ಬಿಐ ಗೆರೆಯನ್ನು ಮಾರ್ಕ್ರ್‌ ಪೆನ್‌ಬಳಸಿ ಎಳೆಯಲಾಗಿದೆ. ಆದರೆ, ಈ ನಕಲಿ ನೋಟಿಗೆ ಬಳಸಲಾಗಿರುವ ಪೇಪರ್‌ ತೆಳುವಾಗಿದ್ದು, ಕೈಯಲ್ಲಿ ಮುದುರಿದರೆ ಸಂಪೂರ್ಣವಾಗಿ ಪೇಪರ್‌ ಉಂಡೆಯಾಗುತ್ತದೆ. ಅಲ್ಲದೆ ಈ ನೋಟುಗಳು ಸಾರ್ವಜನಿಕರ ಕೈನಿಂದ ಕೈಗೆ ಚಲಾವಣೆಯಾಗುತ್ತಿದ್ದಂತೆ ಬಣ್ಣವೆಲ್ಲ ಮಾಸಿ ಬೇಗನೆ ಹರಿದು ಹೋಗುತ್ತದೆ.

ಲೋಕಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿ ನಾನಲ್ಲ: ಮಾಜಿ ಸಿಎಂ ಬೊಮ್ಮಾಯಿ

ಪ್ರತಿದಿನ ವ್ಯವಹಾರ ನಡೆಸುವ ಪೆಟ್ರೋಲ್‌ ಬಂಕ್‌ ಹಾಗೂ ಇತರ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಹಣಕಟ್ಟಲು ಹೋದಾಗ ನೋಟು ಎಣಿಕೆ ಯಂತ್ರಕ್ಕೆ ಹಾಕಿದಾಗ ನಕಲಿ ನೋಟುಗಳು ಬೇರ್ಪಡುತ್ತವೆ. ಇವುಗಳನ್ನು ಬ್ಯಾಂಕ್‌ ಸಿಬ್ಬಂದಿ ಹಣ ಕಟ್ಟಿದ ಗ್ರಾಹಕನಿಗೆ ವಾಪಸ್‌ ಕೊಡದೆ ಹರಿದು ಬಿಸಾಡುತ್ತಾರೆ. ಇಂತಹ ಬಹಳಷ್ಟುಸನ್ನಿವೇಶಗಳು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರು ಯಾವುದು ನಕಲಿ, ಅಸಲಿ ನೋಟು ಎಂದು ಗೊತ್ತಾಗದೆ ಪೇಚಿಗೆ ಸಿಲುಕುವಂತಾಗಿದೆ.

click me!