ಪಲನ್‌ಪುರ: ದಲಿತ ವ್ಯಕ್ತಿಯೊಬ್ಬ ಒಳ್ಳೆಯ ಬಟ್ಟೆ ಹಾಗೂ ಸನ್ ಗ್ಲಾಸ್ ಧರಿಸಿದ ಕಾರಣಕ್ಕೆ ಆತನ ಮೇಲೆ ಮೇಲ್ವರ್ಗದ ಜನರು ದಾಳಿ ನಡೆಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ದಲಿತ ವ್ಯಕ್ತಿ ತನ್ನ ಮನೆ ಮುಂದೆ ಶುಭ್ರವಾದ ವಸ್ತ್ರ ಹಾಗೂ ಕೂಲಿಂಗ್ ಕನ್ನಡಕ ಧರಿಸಿ ನಿಂತಿದ್ದ ವೇಳೆ ರಜಪೂತ್ ಉಪನಾಮದ 7 ವ್ಯಕ್ತಿಗಳು ಆತನಿಗೆ ಜಾಸ್ತಿ ಆಡ್ತಿದ್ದೀಯ ಕೊಂದು ಹಾಕ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಅದೇ ದಿನ ರಾತ್ರಿ ದೇಗುಲದ ಹೊರಗೆ ಪುನಃ ಅದೇ ವಿಚಾರವಾಗಿ ಗಲಾಟೆ ನಡೆದು ದಲಿತ ವ್ಯಕ್ತಿಗೆ ಥಳಿಸಿದ್ದಾರೆ. ಈ ವೇಳೆ ರಕ್ಷಿಸಲು ಬಂದ ಆತನ ತಾಯಿಗೂ ಹಲ್ಲೆ ಮಾಡಿ ಆಕೆಯ ವಸ್ತ್ರಗಳನ್ನು ಹರಿದು ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ : ಬೇಸತ್ತ ದಲಿತ ರೈತ ಆತ್ಮಹತ್ಯೆ
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ತನ್ನ 11 ವರ್ಷದ ಮಗಳನ್ನು ಪಕ್ಕದ ಹಳ್ಳಿಯ ಮೂವರು ವ್ಯಕ್ತಿಗಳು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ ನಂತರ 45 ವರ್ಷದ ದಲಿತ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೇ 9 ರಂದು ತನ್ನ ತಂದೆಯನ್ನು ಮಗಳು ಜಮೀನಿನಲ್ಲಿ ಭೇಟಿಯಾಗಲು ಹೋಗುತ್ತಿದ್ದಾಗ ಸುಮಾರು 20ರ ಆಸುಪಾಸಿನ ಆರೋಪಿಗಳು ಬಾಲಕಿಯನ್ನು ಅಪಹರಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಬಾಲಕಿಯ ತಂದೆ ಮರುದಿನ ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು, ಎಫ್‌ಐಆರ್ ದಾಖಲಿಸುವ ಬದಲು, ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳ ನಡುವೆ “ರಾಜಿ ಮಾಡಿಕೊಳ್ಳಲು ಒತ್ತಾಯಿಸಿದ್ದಾರೆ.
'ದಲಿತರು ಕುದುರೆ ಏರೋ ಹಾಗಿಲ್ಲ..' ವರನಿಗೆ ಹಲ್ಲೆ ಮಾಡಿ ಕುದುರೆಯಿಂದ ಕೆಳಗಿಳಿಸಿದ ಮೇಲ್ಜಾತಿ ಯುವಕರು!
ಅಲ್ಲದೆ, ಈ ರಾಜಿ ಸಂಧಾನದ ವೇಳೆ ಹುಡುಗಿಯ ಪೋಷಕರಿಗೆ ಕರೆ ಅಥವಾ ಮಾಹಿತಿ ನೀಡದೆ ಈ ವಿಷಯ ಮುಚ್ಚಿಟ್ಟಿದ್ದಾರೆ ಮತ್ತು ಅಮಾರಿಯಾದ SHO ಮುಖೇಶ್ ಶುಕ್ಲಾ ಅವರು ಶೀಘ್ರದಲ್ಲೇ ಈ ಕೇಸ್ ಅನ್ನು ಕ್ಲೋಸ್ ಮಾಡಿದ್ದಾರೆ ಎಂದೂ ತಿಳಿದು ಬಂದಿದೆ. ಕೇಸ್ ದಾಖಲಿಸಿಕೊಳ್ಳದೆ ಮಗಳಿಗೆ ಅನ್ಯಾಯವಾಗಿದ್ದನ್ನು ಸಹಿಸಿಕೊಳ್ಳದ ತಂದೆ ಸಾವಿಗೆ ಶರಣಾಗಿದ್ದಾರೆ. ಅಮಾರಿಯಾದಲ್ಲಿ ಮರವೊಂದಕ್ಕೆ ನೇಣು ಬಿಗಿದು ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಇನ್ನು, ಈ ಆತ್ಮಹತ್ಯೆಗೆ ಪೊಲೀಸರೇ ಕಾರಣ ಎಂದು ಅವರ ಕುಟುಂಬ ದೂಷಿಸಿದೆ. ಆತ್ಮಹತ್ಯೆಯ ನಂತರ ಎಚ್ಚೆತ್ತುಕೊಂಡ ಪೊಲೀಸರು, ರೈತನ 20 ವರ್ಷದ ಮಗ ನೀಡಿದ ದೂರಿನ ಮೇರೆಗೆ ಕೊನೆಗೂ ಎಫ್‌ಐಆರ್ ದಾಖಲಿಸಿದ್ದಾರೆ.
ನಿಷೇಧ ಮಾಡುವ ಬದಲು ಆರೆಸ್ಸೆಸ್‌ನಲ್ಲಿರುವ ಶೂದ್ರ, ದಲಿತರನ್ನ ಸೆಳೆಯಬೇಕು: ಜಾರಕಿಹೊಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ