ಮಂಗಳೂರು: ಅಪ್ರಾಪ್ತ ಬಾಲಕಿ ಜತೆ ಅಸಭ್ಯ ವರ್ತನೆ, ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

By Girish Goudar  |  First Published Dec 18, 2022, 10:00 AM IST

ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಗಂಭೀರವಾಗಿ ಗಾಯಯೊಂಡ ಯುವಕ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ 


ಮಂಗಳೂರು(ಡಿ.18):  ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನನ್ನ ಕಂಬಕ್ಕೆ ಕಟ್ಟಿ ಬಾಲಕಿಯ ಕಡೆಯವರು ಹಲ್ಲೆ ಮಾಡಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಯುವಕ ಗಂಭೀರವಾಗಿ ಗಾಯಯೊಂಡಿದ್ದನು. 

ಡಿ. 13 ರಂದು ಕರೆಕಾಡು ಎಂಬಲ್ಲಿ ನಡೆದಿದ್ದ ಘಟನೆ ನಡೆದಿತ್ತು. ಥಳಿತಕ್ಕೊಳಗಾದ ಯುವಕ ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದನು. ಬಾಲಕಿಯಿಂದ ಮಾಹಿತಿ ಪಡೆದು ಪೋಷಕರು ಹಿಂಬಾಲಿಸಿದ್ದರು. ಕರೆಕಾಡು ಪ್ರದೇಶದಲ್ಲಿ ಯುವಕಮತ್ತೆ ಬಾಲಕಿಗೆ ಕಿರುಕುಳ ನೀಡಿದ್ದನು. ಈ ವೇಳೆ ಪೋಷಕರು ಹಾಗೂ ಜೊತೆಗಿದ್ದವರು ಯುವಕನ ಮೇಲೆ ಹಲ್ಲೆ ಮಾಡಿದ್ದರು.  ಕಿರುಕುಳ ನೀಡುತ್ತಿದ್ದ ಯುವಕನ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದರು. ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. 

Tap to resize

Latest Videos

Mangaluru; ಮತ್ತೆ ನೈತಿಕ ಪೊಲೀಸ್ ಗಿರಿ, ಮರಕ್ಕೆ ಕಟ್ಟಿ ಕಾರ್ಮಿಕನಿಗೆ ಥಳಿತ

ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ದೂರಿನ ಮೇರೆಗೆ ಮುಲ್ಕಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಾಗಿದೆ. 
 

click me!